‘ಮಹಿಳಾ ದಿನ ಸಾಂಸ್ಕೃತಿಕ ಹಬ್ಬವಾಗಲಿ’

7

‘ಮಹಿಳಾ ದಿನ ಸಾಂಸ್ಕೃತಿಕ ಹಬ್ಬವಾಗಲಿ’

Published:
Updated:
‘ಮಹಿಳಾ ದಿನ ಸಾಂಸ್ಕೃತಿಕ ಹಬ್ಬವಾಗಲಿ’

ಲಿಂಗಸುಗೂರು: ‘ಹಲವು ಹವ್ಯಾಸಗಳನ್ನು ಮೈಗೂಡಿಸಿಕೊಂಡು ಸಂಕಷ್ಟದ ಬದುಕು ಕಟ್ಟಿಕೊಂಡಿರುವ ಮಹಿಳೆಯರನ್ನು ಸಮಾಜ ಮುಖಿಯಾಗಿ ಹೊರತರಲು ಮಹಿಳಾ ದಿನವನ್ನು ಸಾಂಸ್ಕೃತಿಕ ಹಬ್ಬವಾಗಿ ಆಚರಿಸಬೇಕು’ ಎಂದು ಮಹಿಳಾ ಒಕ್ಕೂಟದ ನಾಯಕಿ ನಿರ್ಮಲಾ ಪಾಟೀಲ ಕರೆ ನೀಡಿದರು.

ರಾಷ್ಟ್ರೀಯ ಗ್ರಾಮೀಣ, ಕೃಷಿ ಅಭಿವೃದ್ಧಿ ಸಂಸ್ಥೆ, ರಾಷ್ಟ್ರೀಯ ಮಾನವ ಹಕ್ಕುಗಳ, ಬ್ರಷ್ಟಾಚಾರ ವಿರೋಧಿ ಸಂಸ್ಥೆ, ವಿದ್ಯಾ ಗಾರ್ಮೆಂಟ್ಸ್‌ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಸವಾದಿ ಶರಣರ ಕಾಲದಿಂದಲು ಮಹಿಳೆಯರಿಗೆ ಸ್ಥಾನಮಾನ ನೀಡಿ ಗೌರವಿಸುತ್ತ ಬರಲಾಗಿದೆ. ಸಂಘಟಿತ ಹೋರಾಟ ಮೂಲಕ ಎಲ್ಲರೂ ಬೆಳೆದು ನಿಲ್ಲಬೇಕು’ ಎಂದರು.

ಬಿಜೆಪಿ ಮಹಿಳಾ ವಕ್ತಾರೆ ಶ್ವೇತಾ ಮೇಟಿ ಮಾತನಾಡಿ, ‘ಭಾರತೀಯ ಸಂಸ್ಕೃತಿಗೆ ಮಹಿಳೆಯರು ಮಹಾನ್‌ ಕೊಡುಗೆ ನೀಡಿದ್ದಾರೆ. ರಾಷ್ಟ್ರ ಮತ್ತು ನಾಡಿನ ವೀರವನಿತೆಯರು ನಮಗೆಲ್ಲ ಮಾದರಿ. ಕುಟುಂಬದ ಕಟ್ಟಳೆಗಳ ಮಧ್ಯೆ ಪ್ರತಿಭೆಗಳು ಕಮರುತ್ತಿವೆ. ಅಂತಹ ಪ್ರತಿಭೆಗಳಿಗೆ ಪುರುಷರು ಪ್ರೋತ್ಸಾಹಿಸಿ ಬೆಂಬಲಿಸಬೇಕು’ ಎಂದರು.

ಪುರಸಭೆ ಸದಸ್ಯ ಎಂ.ಡಿ. ರಫಿ, ಮುದಗಲ್ಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದಾವೂದ್‌, ಕಾಂಗ್ರೆಸ್‌ಹಿರಿಯ ಮುಖಂಡ ಡಿ.ಎಸ್‌. ಹೂಲಗೇರಿ ಮಾತನಾಡಿದರು.

ಮಹಿಳಾ ರತ್ನಮಣಿ ಪ್ರಶಸ್ತಿ: ವಿವಿಧ ಕ್ಷೇತ್ರಗಳ ಸಾಧಕಿಯರಾದ ಸುಲೋಮಿ ಯಕಲಪಾಟಿ ಧಾರವಾಡ, ರತ್ನ ಮೂಡಗೇರಿ ಚೆಕ್ಕಮಗಳೂರು, ಮಲ್ಲಮ್ಮ ಸಂಗಯ್ಯ ಲಿಂಗಸುಗೂರು, ಬಸಲಿಂಗಮ್ಮ ಪಾಟೀಲ ದೇವದುರ್ಗ, ಸಂಗಮ್ಮ ಬಸಪ್ಪ ಮಸ್ಕಿ, ಕಮಲಮ್ಮ ಬಸವನಗೌಡ ಆನ್ವರಿ, ದೇವಿರಮ್ಮ ಹಾಲಪ್ಪ ಲಿಂಗಸುಗೂರು, ಅಮರಮ್ಮ ವೀರನಗೌಡ ಲಿಂಗಸುಗೂರು, ದಾದಿಬೀ ಖಾಜಾಸಾಬ ನಾಗರಹಾಳ, ಶರಣಮ್ಮ ಪಾಟೀಲ ದೇವದುರ್ಗ, ಈರಮ್ಮ ಗುಂಜಳ್ಳಿ ರಾಯಚೂರು, ಯಮನಮ್ಮ ಲಿಂಗಸುಗೂರು, ಶಾಂತಮ್ಮ ಲಿಂಗಸುಗೂರು, ಅಂಬಮ್ಮ ಗುರುಗುಂಟಾ, ಪಾರ್ವತೆಮ್ಮ ಕರ್ನೂಲ್‌ ಅವರಿಗೆ ಮಹಿಳಾ ರತ್ಮಮಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಂತರ ಪಲ್ಲವಿ ಬಳ್ಳಾರಿ ಅವರು ನೃತ್ಯ ಪ್ರದರ್ಶಿಸಿದರು. ಫಾಸ್ಟರ್‌ ರೆವೆರೆಂಡ್‌ ಪೌಲ್‌ ಜಾನ್ಸ್‌ನ್‌ ಸಾನಿಧ್ಯ ವಹಿಸಿದ್ದರು. ಡಾ. ವಿಜಯಕುಮಾರಿ ಅಧ್ಯಕ್ಷತೆ ವಹಿಸಿದ್ದರು.

ಮಹಿಳಾ ಸಂರಕ್ಷಣಾ ಅಧಿಕಾರಿ ಶಾರದಾ ಕಲ್ಮಲ್ಕರ್‌, ಜನಹಿತ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷೆ ರಮಾದೇವಿ, ಮೈಸೂರಿನ ಮಹಿಳಾ ಸಂಜೀವಿನ ಸಂಸ್ಥೆ ಅಧ್ಯಕ್ಷೆ ಲತಾ ರಂಗನಾಥ, ಇಂಡಿಯನ್‌ ಪಬ್ಲಿಕ್‌ ಶಾಲೆ ಹಾಜಿಬೇಗಂ ಅಹ್ಮದ, ಮಹಿಳಾ ಒಕ್ಕೂಟದ ಜಿಲ್ಲಾ ಅಧ್ಯಕ್ಷೆ ಶರಣಮ್ಮ ಹೂನೂರು, ಮುಖಂಡ ಎಂ.ಎನ್‌. ಗೌಸ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry