ವಿಧವೆಯರಿಗೆ ಮೇಕೆ ಉಚಿತ ವಿತರಣೆ

7
₹52 ಸಾವಿರ ವೆಚ್ಚದಲ್ಲಿ 10 ಮೇಕೆ ಹಂಚಿಕೆ

ವಿಧವೆಯರಿಗೆ ಮೇಕೆ ಉಚಿತ ವಿತರಣೆ

Published:
Updated:
ವಿಧವೆಯರಿಗೆ ಮೇಕೆ ಉಚಿತ ವಿತರಣೆ

ಕಂಪ್ಲಿ: ಇಲ್ಲಿಗೆ ಸಮೀಪದ ಹೊಸದರೋಜಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ದಲಿತ ಪ್ಯಾಂಥರ್ಸ್ ಆಫ್ ಇಂಡಿಯಾ ಹಾಗೂ ಬೆಂಗಳೂರಿನ ಮಾಸ್ಟರ್ ಚೋಆ ಕೊಕ್ ಸುಯಿ(ಎಂಸಿಕೆಎಸ್) ಫುಡ್ ಫಾರ್ ದಿ ಹಂಗ್ರಿ ಫೌಂಡೇಷನ್ ಕರ್ನಾಟಕ ಸಂಸ್ಥೆ ಸಹಯೋಗದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ 10 ವಿಧವೆಯರಿಗೆ ಮೇಕೆಗಳನ್ನು ವಿತರಿಸಲಾಯಿತು.

ಈ ವೇಳೆ ದಲಿತ ಫ್ಯಾಂಥರ್ಸ್ ಆಫ್ ಇಂಡಿಯಾದ ಜಿಲ್ಲಾ ಘಟಕ ಅಧ್ಯಕ್ಷ ನಾಗರಾಜ ಭೋವಿ ಮಾತನಾಡಿದರು.

‘ವಿಧವೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಿ ಅವರಲ್ಲಿ ಬದುಕಿನ ಬಗ್ಗೆ ಧನಾತ್ಮಕ ಮನೋಭಾವ ತುಂಬುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ವಿಧವೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲು ₹52 ಸಾವಿರ ವೆಚ್ಚದಲ್ಲಿ 10 ಮೇಕೆಗಳನ್ನು ಖರೀದಿಸಿ ಹೊಸದರೋಜಿಯ ನಾಲ್ಕು, ಅಲ್ಲೀಪುರ, ಬಳ್ಳಾರಿ ಹಾಗೂ ಸೋಮಸಮುದ್ರದ ತಲಾ ಇಬ್ಬರಂತೆ ಒಟ್ಟು 10 ವಿಧವೆಯರಿಗೆ ತಲಾ ಒಂದೊಂದು ಮೇಕೆಗಳನ್ನು ವಿತರಿಸಲಾಗಿದೆ’ ಎಂದು ತಿಳಿಸಿದರು.

ಎಂಸಿಕೆಎಸ್ ಸಂಸ್ಥೆ ಸ್ವಯಂ ಸೇವಕಿ ರೇಖಾ ಮಾತನಾಡಿ, ‘ವಿಧವೆಯರಿಗೆ ಮೇಕೆಗಳನ್ನು ‘ಹೆಲ್ಪ್ ಪಾಸ್ ಆನ್ ಗಿಫ್ಟ್’ ಮಾದರಿಯಲ್ಲಿ ವಿತರಿಸಲಾಗಿದೆ. ವಿತರಿಸಿದ ಮೇಕೆ ಗರ್ಭ ಧರಿಸಿದ ಮೊದಲ ಮರಿಯನ್ನು ಸಂಸ್ಥೆ ಸೂಚಿಸಿದ ಫಲಾನುಭವಿಗೆ ಉಚಿತವಾಗಿ ನೀಡುವ ಮೂಲಕ ಯೋಜನೆ ಸಾಕಾರ

ಗೊಳಿಸುವ ಹೊಣೆ ಮೇಕೆ ಪಡೆದ ಫಲಾನುಭವಿಗಳ ಮೇಲೆ ಇರುತ್ತದೆ’ ಎಂದು ವಿವರಿಸಿದರು.

‘ಮೇಕೆಗಳಿಗೆ ವಿಮೆ ಸೇರಿದಂತೆ ಅವುಗಳ ಆರೋಗ್ಯ ತಪಾಸಣೆ, ಆರೈಕೆ ಕುರಿತು ಗಮನಹರಿಸಲಾಗುವುದು’ ಎಂದು ತಿಳಿಸಿದರು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಂ.ಎಸ್. ಗುರುಮೂರ್ತಿ ಸಮಾರಂಭಕ್ಕೆ ಚಾಲನೆ ನೀಡಿ ಸಂಸ್ಥೆ ಮಾದರಿ ಸೇವೆಯನ್ನು ಸ್ಮರಿಸಿದರು.

ಪಶು ವೈದ್ಯಾಧಿಕಾರಿ ಶರಣಪ್ಪ ಮುನಿ, ಎಂಸಿಕೆಎಸ್ ಸಂಸ್ಥೆಯ ಸ್ವಯಂ ಸೇವಕರಾದ ಲೋಕೇಶ್, ಅಜಯ್, ಶ್ರೀನಿವಾಸರಾವ್, ರಾಮರಾಜ್, ಶಿವಪುತ್ರಪ್ಪ, ಮುಖಂಡ ವಿ. ಗೋವಿಂದಪ್ಪ, ಹಮಾಲಿ ಸಂಘದ ಅಧ್ಯಕ್ಷ ರಾಮಪ್ಪ, ನಾಗರಾಜ, ಪ್ರಸಾದ್, ಬೋವಿ ಸಮಾಜದ ಯುವ ಮುಖಂಡ ರಮೇಶ್ ಬೋವಿ, ಹಳದಪ್ಪ, ಇಸ್ಮಾಯಿಲ್, ರಮೇಶ್ ಇದ್ದರು.

**

‘ಹೆಲ್ಪ್ ಪಾಸ್ ಆನ್ ಗಿಫ್ಟ್’ ಮಾದರಿಯಲ್ಲಿ ವಿಧವೆಯರಿಗೆ ಮೇಕೆಗಳನ್ನುವಿತರಿಸಲಾಗಿದೆ.

– ರೇಖಾ, ಎಂಸಿಕೆಎಸ್ ಸಂಸ್ಥೆ ಸ್ವಯಂ ಸೇವಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry