ಐಪಿಎಲ್‌: ನಾಯಕರಿಲ್ಲದ ಉದ್ಘಾಟನಾ ಸಮಾರಂಭ

7

ಐಪಿಎಲ್‌: ನಾಯಕರಿಲ್ಲದ ಉದ್ಘಾಟನಾ ಸಮಾರಂಭ

Published:
Updated:

ನವದೆಹಲಿ: ಈ ಬಾರಿ ಐಪಿಎಲ್‌ ಉದ್ಘಾಟನಾ ಸಮಾರಂಭದಲ್ಲಿ ಮೊದಲ ಪಂದ್ಯ ಆಡುವ ತಂಡಗಳ ನಾಯಕರನ್ನು ಬಿಟ್ಟು ಉಳಿದ ತಂಡಗಳ ನಾಯಕರು ಪಾಲ್ಗೊಳ್ಳುವ ಅಗತ್ಯವಿಲ್ಲ ಎಂದು ಬಿಸಿಸಿಐ ತಿಳಿಸಿದೆ.

ಐಪಿಎಲ್ 11ನೇ ಆವೃತ್ತಿಯ ಉದ್ಘಾಟನಾ ಸಮಾರಂಭ ಏಪ್ರಿಲ್ ಏಳರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ನಂತರ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ. ಇತರ ತಂಡಗಳ ನಾಯಕರು ಹಿಂದಿನ ದಿನ ವಿಡಿಯೊ ಶೂಟಿಂಗ್‌ನಲ್ಲಿ ಪಾಲ್ಗೊಂಡು ವಾಪಸಾಗಬಹುದು ಎಂದು ಬಿಸಿಸಿಐ ತಿಳಿಸಿದೆ.

ಕಳೆದ ವರ್ಷದವರೆಗೆ ಮೊದಲ ಪಂದ್ಯದ ಹಿಂದಿನ ದಿನ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗುತ್ತಿತ್ತು.

ಈ ಸಂದರ್ಭದಲ್ಲಿ ನಾಯ ಕರು ಹಾಜರಿದ್ದು ‘ಕ್ರಿಕೆಟ್ ಸ್ಫೂರ್ತಿ’ಗೆ ಸಂಬಂಧಿಸಿ ಪ್ರಮಾಣ ಮಾಡಬೇಕಾಗಿತ್ತು.

ಉದ್ಘಾಟನಾ ಸಮಾರಂಭದ ನಂತರ ನಾಯಕರ ಪ್ರಯಾಣಕ್ಕೆ ಸಂಬಂಧಿಸಿ ಐಪಿಎಲ್‌ ಆಡಳಿತದ ತಂಡ ಸರಿಯಾದ ಸಿದ್ಧತೆ ಮಾಡಿಕೊಂಡಿಲ್ಲ. ಹೀಗಾಗಿ ಮುಂದಿನ ದಿನ ನಡೆಯುವ ಎರಡು ಪಂದ್ಯಗಳಿಗೆ ಸರಿಯಾಗಿ ಅವರು ಕ್ರೀಡಾಂಗಣ ತಲುಪುವುದು ಕಷ್ಟ. ಆದ್ದರಿಂದ ಉದ್ಘಾಟನಾ ಸಮಾರಂಭದಲ್ಲಿ ಆರು ತಂಡಗಳ ನಾಯಕರು ಪಾಲ್ಗೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ಪ್ರಯಾಣಕ್ಕೆ ಸಂಬಂಧಿಸಿ ಐಪಿಎಲ್‌ ತಂಡದಿಂದ ಲೋಪ ಆಗಿದೆ. ನಾಯಕರನ್ನು ಹಿಂದಿನ ದಿನ ಕರೆಸಿಕೊಂಡು ವಿಡಿಯೊ ಮಾಡಿ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶಿಸಲಾಗುವುದು’ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಸ್ಪಷ್ಟನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry