ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆಯಾದ ಆರ್ಕ್ಟಿಕ್‌ ಸರೋವರದ ಮಂಜುಗಡ್ಡೆ ಪ್ರದೇಶದ ವಿಸ್ತೀರ್ಣ

Last Updated 25 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಆರ್ಕ್ಟಿಕ್ ಸರೋವರದ ಮಂಜುಗಡ್ಡೆಯ ಮೇಲು ಹೊದಿಕೆಯ ವಿಸ್ತೀರ್ಣ ಇದುವರೆಗಿನ ಎರಡನೇ ಅತ್ಯಂತ ಕಡಿಮೆ ಪ್ರಮಾಣಕ್ಕೆ ಇಳಿದಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ತಿಳಿಸಿದೆ.

ಈ ವರ್ಷ 144.8 ಲಕ್ಷ ಚದರ ಕಿಲೋ ಮೀಟರ್‌ವರೆಗೆ ಮಾತ್ರ ವಿಸ್ತರಿಸಿದೆ. 2017ರ ಮಾರ್ಚ್‌ 7ರಂದು ದಾಖಲೆಯ ಕನಿಷ್ಠ ಮಟ್ಟ ತಲುಪಿತ್ತು. ಪ್ರತಿ ವರ್ಷ ಫೆಬ್ರುವರಿ–ಏಪ್ರಿಲ್ ಅವಧಿಯಲ್ಲಿ ವಾರ್ಷಿಕ ಗರಿಷ್ಠ ವಿಸ್ತೀರ್ಣ ತಲುಪುತ್ತದೆ ಎಂದು ನಾಸಾ ತಿಳಿಸಿದೆ.

‘ಹವಾಮಾನ ಬದಲಾವಣೆಯಿಂದಾಗಿ ಆರ್ಕ್ಟಿಕ್‌ನ ಮಂಜುಗಡ್ಡೆ ಹೊದಿಕೆ ಪ್ರಮಾಣ ಕಡಿಮೆ ಆಗುತ್ತಿರುವುದು ಮುಂದುವರಿದಿದೆ’ ಎಂದು ‘ನಾಸಾ’ದ ಗೊಡ್ಡಾರ್ಡ್‌ ಬಾಹ್ಯಾಕಾಶ ಉಡ್ಡಯನ ಕೇಂದ್ರದ ಹಿರಿಯ ಹವಾಮಾನ ವಿಜ್ಞಾನಿ ಕ್ಲೇರ್‌ ಪಾರ್ಕಿನ್ಸನ್‌ ತಿಳಿಸಿದ್ದಾರೆ.

‘ಬಿಸಿಯಾಗುವಿಕೆ ಎಂದರೆ ಕಡಿಮೆ ಮಂಜುಗಡ್ಡೆ ರಚನೆಯಾಗುವುದು ಮತ್ತು ಹೆಚ್ಚು ಪ್ರಮಾಣದ ಮಂಜುಗಡ್ಡೆ ಕರಗುವುದು. ಇದೊಂದು ದ್ವಿಮುಖ ಪ್ರಕ್ರಿಯೆ. ಕಡಿಮೆ ಮಂಜುಗಡ್ಡೆ ಇರುವುದರಿಂದ ಸೂರ್ಯ ಕಿರಣಗಳ ಪ್ರತಿಫಲನವೂ ಕಡಿಮೆಯಾಗುತ್ತದೆ. ಇದರಿಂದ ತಾಪಮಾನ ಹೆಚ್ಚಳವಾಗುತ್ತದೆ’ ಎಂದು ಪಾರ್ಕಿನ್ಸನ್‌ ತಿಳಿಸಿದ್ದಾರೆ.

1981ರಿಂದ 2010ರವರೆಗಿನ ಗರಿಷ್ಠ ಸರಾಸರಿ ಮಂಜುಗಡ್ಡೆ ಹೊದಿಕೆಯ ವಿಸ್ತೀರ್ಣ 11.6 ಲಕ್ಷ ಚದರ ಕಿಲೋ ಮೀಟರ್‌ ಆಗಿತ್ತು ಎಂದು ಎನ್‌ಎಸ್‌ಐಡಿಸಿ ನಡೆಸಿದ ಜಂಟಿ ವಿಶ್ಲೇಷಣೆಯಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT