ಟಿಕೆಟ್‌ಗಾಗಿ ಮನ್ಸೂರ್ ಅಹ್ಮದ್ ಒತ್ತಾಯ

7

ಟಿಕೆಟ್‌ಗಾಗಿ ಮನ್ಸೂರ್ ಅಹ್ಮದ್ ಒತ್ತಾಯ

Published:
Updated:

ಬೆಂಗಳೂರು: ‘ಮಡಿಕೇರಿ ವಿಧಾನಸಭಾಕ್ಷೇತ್ರದಲ್ಲಿ ಗೆಲುವಿಗೆ ಅಲ್ಪಸಂಖ್ಯಾತ ಮತಗಳೇ ನಿರ್ಣಾಯಕ. ಹೀಗಾಗಿ, ಆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನನಗೇ ಟಿಕೆಟ್ ನೀಡಬೇಕು’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಎಂ.ಎ. ಮನ್ಸೂರ್ ಅಹ್ಮದ್ ಒತ್ತಾಯಿಸಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಡಿಕೇರಿಯಲ್ಲಿ 42 ಸಾವಿರಕ್ಕೂ ಅಧಿಕ ಅಲ್ಪಸಂಖ್ಯಾತರಿದ್ದಾರೆ.ಆದರೂ, 16 ವರ್ಷಗಳಿಂದ ಕಾಂಗ್ರೆಸ್‌ ಪಕ್ಷಕ್ಕೆ ಅಲ್ಲಿ ಸೋಲಾಗುತ್ತಿದೆ. ಈ ಬಾರಿ ಅಲ್ಲಿಂದ ಸ್ಪರ್ಧಿಸಿ ಪಕ್ಷಕ್ಕೆ ಗೆಲುವ ತಂದು ಕೊಡುವೆ. ಟಿಕೆಟ್‌ಗಾಗಿ ಸಲ್ಲಿಸಿರುವ ಅರ್ಜಿಯನ್ನು ಪಕ್ಷ ಪರಿಗಣಿಸಬೇಕು’ ಎಂದರು.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 15 ರಷ್ಟು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry