ಲೈಂಗಿಕ ಕಿರುಕುಳ: ಬಾಲಕಿಯನ್ನು ಮಹಡಿಯಿಂದ ತಳ್ಳಿದ ಯುವಕ

7

ಲೈಂಗಿಕ ಕಿರುಕುಳ: ಬಾಲಕಿಯನ್ನು ಮಹಡಿಯಿಂದ ತಳ್ಳಿದ ಯುವಕ

Published:
Updated:

ಶಹಜಹಾನ್‌ಪುರ: ಲೈಂಗಿಕ ಕಿರುಕುಳವನ್ನು ಪ್ರಶ್ನಿಸಿದ ಹದಿನಾರು ವರ್ಷದ ಬಾಲಕಿಯನ್ನು, ಯುವಕನೊಬ್ಬ ಮಹಡಿಯಿಂದ ತಳ್ಳಿದ ಘಟನೆ ಇಲ್ಲಿನ ರೋಜಾ ಪೊಲೀಸ್‌ ಠಾಣೆ ವ್ಯಾಪ್ತಿಯ ದಿವಿಯಪುರ ಗ್ರಾಮದಲ್ಲಿ ನಡೆದಿದೆ.

ಗಾಯಗೊಂಡಿರುವ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಪರಸ್ಪರ ಪರಿಚಿತರು ಎಂದು ಪೊಲೀಸ್‌ ಠಾಣಾಧಿಕಾರಿ ಜಸ್ವೀರ್‌ ಸಿಂಗ್‌ ತಿಳಿಸಿದ್ದಾರೆ.

ಘಟನೆಯ ನಂತರ ಯುವಕ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry