ಶಾಸಕ ಅಂಗಾರ ಅವಹೇಳನ: ದೂರು

7

ಶಾಸಕ ಅಂಗಾರ ಅವಹೇಳನ: ದೂರು

Published:
Updated:
ಶಾಸಕ ಅಂಗಾರ ಅವಹೇಳನ: ದೂರು

ಸುಳ್ಯ: ಶಾಸಕ ಎಸ್.ಅಂಗಾರ ಮತ್ತು ಕೋಟಿ– ಚೆನ್ನಯರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಅವಹೇಳನಕಾರಿ ಬರಹದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ಮಂಗಳವಾರ ಸುಳ್ಯ ಪೊಲೀಸರಿಗೆ ದೂರು ನೀಡಿದೆ.

ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಸುರೇಶ್ ಕಣೆಮರಡ್ಕ ನೇತೃತ್ವದಲ್ಲಿ ಪೊಲೀಸ್ ಸರ್ಕಲ್‌ ಇನ್‌ಸ್ಪೆಕ್ಟರ್‌ ಸತೀಶ್‌ಕುಮಾರ್ ಮತ್ತು ಪಿಎಸ್‌ಐ ಮಂಜುನಾಥ್ ಅವರಿಗೆ ದೂರು ನೀಡಲಾಯಿತು.

ಶಾಸಕ ಅಂಗಾರ ಅವರ ಭಾವಚಿತ್ರ ಅಳವಡಿಸಿ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಬರೆಯಲಾಗಿದೆ. ಅಲ್ಲದೆ ಇಲ್ಲಿನ ವೀರ ಪುರುಷರಾದ ಕೋಟಿ– ಚೆನ್ನಯರ ಬಗ್ಗೆಯೂ ಅದರಲ್ಲಿ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ. ಅವಹೇಳನಕಾರಿ ಬರಹ ಪ್ರಕಟಿಸಿದ ಖಾತೆದಾರರ ವಿರುದ್ಧ  ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ದೂರು ನಿಯೋಗದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಹರೀಶ್ ಕಂಜಿಪಿಲಿ, ಮುಖಂಡರಾದ ಉದಯ ಮಣಿಯಾಣಿ, ರವಿನ್‌ರಾಜ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry