ಕೃಷಿ ನವೋದ್ಯಮ ನಿಧಿ ಸ್ಥಾಪನೆ?

7

ಕೃಷಿ ನವೋದ್ಯಮ ನಿಧಿ ಸ್ಥಾಪನೆ?

Published:
Updated:
ಕೃಷಿ ನವೋದ್ಯಮ ನಿಧಿ ಸ್ಥಾಪನೆ?

ನವದೆಹಲಿ: ಕೃಷಿ ನವೋದ್ಯಮ ನಿಧಿ (ಸ್ಟಾರ್ಟ್‌ಅಪ್‌) ಸ್ಥಾಪನೆ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.

ನಿಧಿ ಸ್ಥಾಪನೆಯಿಂದ ನವೋದ್ಯಮಿಗಳು ಕೃಷಿ ವಲಯದತ್ತ ಆಕರ್ಷಿತರಾಗಲಿದ್ದು, ರಫ್ತು ವಹಿವಾಟು ಹೆಚ್ಚಾಗಲಿದೆ. ಹೊಸ ಉದ್ಯಮ ಸ್ಥಾಪಿಸಲು ನವೋದ್ಯಮಿಗಳಿಗೆ ಬೆಂಬಲ ನೀಡುವ ಅಗತ್ಯವಿದೆ ಎಂದು ವಾಣಿಜ್ಯ ಸಚಿವಾಲಯ ಸಿದ್ಧಪಡಿಸಿರುವ ಕೃಷಿ ಕರಡು ರಫ್ತು ನೀತಿಯಲ್ಲಿ ಹೇಳಲಾಗಿದೆ.

ದೇಶದಲ್ಲಿ ನವೋದ್ಯಮಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಈ ವಲಯದಲ್ಲಿ ಹೊಸ ಉತ್ಪನ್ನ ಅಥವಾ ಯೋಜನೆ ಮೇಲೆ ಕೆಲಸ ಮಾಡುವವರು ತಮ್ಮ ಪ್ರಸ್ತಾವವನ್ನು ಸಲ್ಲಿಸಬಹುದು. ನಿಧಿ ನಿರ್ವಾಹಕರು ಯೋಜನೆಗಳ ಪರಿಶೀಲನೆ ನಡೆಸಲಿದ್ದು, ರಫ್ತು ಹೆಚ್ಚಿಸುವ ಅರ್ಹತೆ ಇರುವ ಯೋಜನೆಗಳಿಗೆ ನೆರವು ಲಭ್ಯವಾಗಲಿದೆ. ದೇಶದ ರಫ್ತು ವಹಿವಾಟು ಸಾಮರ್ಥ್ಯ ಹೆಚ್ಚಿಸುವ ಮೂಲಕ ಕೃಷಿ ರಫ್ತಿನಲ್ಲಿ ಇರುವ ಪ್ರಮುಖ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಮಾಡಬೇಕಾಗಿದೆ.

‘ಉದ್ಯಮಿಗಳನ್ನು ಸೃಷ್ಟಿಸುವ ಅಗಾಧ ಸಾಮರ್ಥ್ಯ ಕೃಷಿ ವಲಯಕ್ಕಿದೆ. ಹೀಗಾಗಿ ಕರಡು ನೀತಿಯ ಪ್ರಸ್ತಾವನೆಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ಇದು ಸೂಕ್ತ ಸಮಯವಾಗಿದೆ. ಈ ವಲಯದಲ್ಲಿ ನವೋದ್ಯಮಕ್ಕೆ ಬೆಂಬಲ ನೀಡಲು ಬಹಳಷ್ಟು ಖಾಸಗಿ ನಿಧಿಗಳು ಸಿದ್ಧ ಇವೆ. ಈ ನಿಟ್ಟಿನಲ್ಲಿ ಸರ್ಕಾರವೂ ಉತ್ತೇಜನ ನೀಡಬೇಕಾಗಿದೆ’ ಎಂದು ಚಹ, ಕಾಫಿ ಸ್ಟಾರ್ಟ್‌ ಅಪ್‌ ‘ಚಾಯೋಸ್‌‘ನ ಸ್ಥಾಪಕ ನಿತಿನ್‌ ಸಲುಜಾ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry