ಭಾನುವಾರ, ಡಿಸೆಂಬರ್ 15, 2019
25 °C

ಮೂರ್ಖರ ದಿನವನ್ನು ಜುಮ್ಲಾ ದಿವಸ್, ಪಪ್ಪು ದಿವಸ್ ಆಗಿ ಆಚರಿಸಿಕೊಂಡ ಕಾಂಗ್ರೆಸ್, ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂರ್ಖರ ದಿನವನ್ನು ಜುಮ್ಲಾ ದಿವಸ್, ಪಪ್ಪು ದಿವಸ್ ಆಗಿ ಆಚರಿಸಿಕೊಂಡ ಕಾಂಗ್ರೆಸ್, ಬಿಜೆಪಿ

ನವದೆಹಲಿ: ಏಪ್ರಿಲ್ 1 ಮೂರ್ಖರ ದಿನವನ್ನು ಕಾಂಗ್ರೆಸ್, ಜುಮ್ಲಾ ದಿವಸ್ ಎಂದು ಕರೆದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಟಾಂಗ್ ಕೊಟ್ಟ ಬಿಜೆಪಿ ಏಪ್ರಿಲ್ ಫೂಲ್ ದಿವಸ ಅಲ್ಲ ಇದು ಪಪ್ಪು ದಿವಸ್ ಎಂದು ನಗೆಯಾಡಿದೆ.

2014ರ ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿ ಅವರು ತಾವು ಅಧಿಕಾರಕ್ಕೇರಿದರೆ ಕಪ್ಪು ಹಣವನ್ನು ನಿರ್ಮೂಲನೆ ಮಾಡಲಾಗುವುದು. ಕಪ್ಪು ಹಣವನ್ನು ಪತ್ತೆ ಹಚ್ಚಿದರೆ ಈ ದೇಶದ ಪ್ರತಿಯೊಬ್ಬ ಪ್ರಜೆಯ ಬ್ಯಾಂಕ್ ಖಾತೆಯಲ್ಲಿ ₹15 ಲಕ್ಷ ಹಣ ಬಂದು ಬೀಳುತ್ತದೆ ಎಂದು ಭರವಸೆ ನೀಡಿದ್ದರು. ಮೋದಿಯವರ ಈ ಸುಳ್ಳು ಭರವಸೆಯನ್ನು ಲೇವಡಿ ಮಾಡಿ ಟ್ವೀಟ್ ಮಾಡಿದ ಕಾಂಗ್ರೆಸ್ #HappyJumlaDivas ಎಂಬ ಹ್ಯಾಶ್ ಟ್ಯಾಗ್ ಹಾಕಿದೆ.

ಕಾಂಗ್ರೆಸ್‍ನ ಈ ಹ್ಯಾಶ್ ಟ್ಯಾಗ್ ವೈರಲ್ ಆಗುತ್ತಿದ್ದಂತೆ ಬಿಜೆಪಿ ರಾಹುಲ್ ಗಾಂಧಿ ಭಾಷಣದ ತುಣುಕುಗಳನ್ನು ಟ್ವೀಟಿಸಿ ತಮಾಷೆ ಮಾಡಿದೆ.

ಮಿಸ್ಟರ್ ರಾಹುಲ್ ಗಾಂಧಿ, ನೀವು ಯಾವುದೇ ತಪ್ಪು ಮಾಡಬೇಡಿ, ಪ್ರಮಾದಗಳನ್ನು ಮಾಡುವ ನಿರ್ವಿವಾದ ಅರಸ ನೀವು. ಇದು ಬರೀ ಟ್ರೈಲರ್ ಅಷ್ಟೇ, ನೀವು ನಮ್ಮನ್ನು ಇದೇ ರೀತಿ ಮನರಂಜಿಸುತ್ತಿರುತ್ತೀರಿ ಎಂದು ನಾವು ನಂಬಿದ್ದೇವೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಹ್ಯಾಪಿ ಜುಮ್ಲಾ ದಿವಸ್ ಹ್ಯಾಶ್ ಟ್ಯಾಗ್ ಬಳಸಿ ಕಾಂಗ್ರೆಸ್ ಮಾಡಿದ ಟ್ವೀಟ್‍ಗಳಲ್ಲಿ ₹12,000 ಕೋಟಿ ಮೌಲ್ಯದ  ಪಿಎನ್‍ಬಿ ಹಗರಣ, ನೋಟು ರದ್ದತಿ, ಸ್ಮಾರ್ಟ್ ಸಿಟಿ ಯೋಜನೆಗಳ ಬಗ್ಗೆ ಉಲ್ಲೇಖಿಸಿ ಮೋದಿ ಸರ್ಕಾರವನ್ನು ಟೀಕಿಸಲಾಗಿದೆ.

ಇದು #HappyJumlaDivas ಮಾತ್ರವಲ್ಲ, ಚೋಟಾ ಮೋದಿ ಹಗರಣ ಬೆಳಕಿಗೆ ಬಂದು ಇವತ್ತಿಗೆ 46 ದಿನಗಳಾದವು, ಪ್ರಧಾನಿ ಮೋದಿ ಅವರು ನಾ ಖಾವೂಂಗಾ, ನಾ ಖಾನೇ ದೂಂಗಾ ( ಭ್ರಷ್ಟಾಚಾರ ಮಾಡಲ್ಲ, ಮಾಡಲು ಬಿಡುವುದಿಲ್ಲ ಎಂಬ ಅರ್ಥ)  ಎಂದು ಹೇಳಿದ್ದು ವಂಚಿಸುವ ಒಂದು ಹೊಸ ರಾಜಕೀಯ ವರಸೆ (ಜುಮ್ಲಾ)

ಕೆಲವು ಟ್ವೀಟ್‍ಗಳು ಹೀಗಿವೆ

ಪ್ರತಿಕ್ರಿಯಿಸಿ (+)