ನಿರಾಕ್ಷೇಪಣಾ ಪತ್ರ: ಸಯೀದ್‌ ಪಕ್ಷಕ್ಕೆ ಸೂಚನೆ

ಬುಧವಾರ, ಮಾರ್ಚ್ 20, 2019
31 °C

ನಿರಾಕ್ಷೇಪಣಾ ಪತ್ರ: ಸಯೀದ್‌ ಪಕ್ಷಕ್ಕೆ ಸೂಚನೆ

Published:
Updated:
ನಿರಾಕ್ಷೇಪಣಾ ಪತ್ರ: ಸಯೀದ್‌ ಪಕ್ಷಕ್ಕೆ ಸೂಚನೆ

ಇಸ್ಲಾಮಾಬಾದ್ : ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ನೇತೃತ್ವದ ಮಿಲ್ಲಿ ಮುಸ್ಲಿಂ ಲೀಗ್ (ಎಂಎಂಎಲ್) ರಾಜಕೀಯ ಪಕ್ಷ ನೋಂದಣಿಗೆ ಆಂತರಿಕ ವ್ಯವಹಾರಗಳ ಸಚಿವಾಲಯದಿಂದ ನಿರಾಕ್ಷೇಪಣಾ ಪತ್ರವನ್ನು ಸಲ್ಲಿಸುವಂತೆ ಪಾಕಿಸ್ತಾನ ಚುನಾವಣಾ ಆಯೋಗವು ಹಫೀಜ್‌ಗೆ ಸೂಚಿಸಿದೆ.

‘ಉಗ್ರ ಸಂಘಟನೆಯೊಂದಿಗೆ ಎಂಎಂಎಲ್‌ ನಂಟು ಹೊಂದಿದೆ’ ಎಂದು ಆಂತರಿಕ ವ್ಯವಹಾರಗಳ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದ್ದ ಕಾರಣ ಈ ಮೊದಲು ಪಕ್ಷದ ನೋಂದಣಿಗೆ ಆಯೋಗ ನಿರಾಕರಿಸಿತ್ತು.

ಚುನಾವಣಾ ಆಯೋಗದ ನಿರ್ಧಾರವನ್ನು ತಳ್ಳಿಹಾಕಿದ ಇಸ್ಲಾಮಾಬಾದ್ ಹೈಕೋರ್ಟ್, ಎಂಎಂಎಲ್‌ನ ವಾದವನ್ನು ಆಲಿಸುವಂತೆ ಹೇಳಿತ್ತು.

‘2017ರ ಕಾಯ್ದೆ ಪ್ರಕಾರ ರಾಜಕಿಯ ಪಕ್ಷಗಳ ನೋಂದಣಿಗೆ ಸಚಿವಾಲಯದ ನಿರಾಕ್ಷೇಪಣಾ ಪತ್ರದ ಅಗತ್ಯವಿಲ್ಲ’ ಎಂದು ಎಂಎಂಎಲ್ ಪರ ರಿಜ್ವಾನ್ ಅಬ್ಬಾಸಿ ವಾದ ಮಂಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry