ವೀರಶೈವರು ಮೂರ್ತಿ ಆರಾಧಕರು ಎಂಬುದು ತಪ್ಪು: ರಂಭಾಪುರಿಶ್ರೀ

7
ವಿಶ್ವೇಶತೀರ್ಥ ಸ್ವಾಮೀಜಿ ಹೇಳಿಕೆಗೆ ರಂಭಾಪುರಿಶ್ರೀ ಸ್ಪಷ್ಟನೆ

ವೀರಶೈವರು ಮೂರ್ತಿ ಆರಾಧಕರು ಎಂಬುದು ತಪ್ಪು: ರಂಭಾಪುರಿಶ್ರೀ

Published:
Updated:

ರಂಭಾಪುರಿ ಪೀಠ (ಬಾಳೆಹೊನ್ನೂರು): ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಬೆಂಗಳೂರಿನ ಸಮಾರಂಭವೊಂದರಲ್ಲಿ ಲಿಂಗಾಯತರು ಇಷ್ಟಲಿಂಗ ಆರಾಧಕರು, ವೀರಶೈವರು ಮೂರ್ತಿ ಆರಾಧಕರು ಎಂದು ತಪ್ಪಾಗಿ ಅರ್ಥೈಸಿಕೊಂಡು ಹೇಳಿಕೆ ನೀಡಿದ್ದಾರೆ ಎಂದು ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.

ರಂಭಾಪುರಿ ಪೀಠದಲ್ಲಿ ಸೋಮವಾರ ಪೇಜಾವರಶ್ರೀ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ವೀರಶೈವ ಧರ್ಮವಾಚಕ, ಲಿಂಗಾಯತ ಕ್ರಿಯಾವಾಚಕ. ವೀರಶೈವ ಲಿಂಗಾಯತರಿಗೆ ಇಷ್ಟಲಿಂಗ ಪೂಜಾ ಪ್ರಧಾನ ಮತ್ತು ಮುಖ್ಯವಾಗಿರುತ್ತದೆ. ಇಷ್ಟಲಿಂಗದಲ್ಲಿ ಸಮರಸ-ಮೂರ್ತಿ ಪೂಜೆಯಲ್ಲಿ ಔಪಚಾರಿಕ ಭಾವನೆಯಿಂದ ಪೂಜಿಸುವ ಸಂಪ್ರದಾಯ ಬೆಳೆದು ಬಂದಿದೆ. ಹೀಗಿರುವಾಗ ಲಿಂಗಾಯತರಷ್ಟೇ ಇಷ್ಟಲಿಂಗ ಪೂಜಾ ಆರಾಧಕರು, ವೀರಶೈವರು ಮೂರ್ತಿ ಆರಾಧಕರು ಎಂಬುದು ಒಪ್ಪಿಕೊಳ್ಳುವ ಮಾತಲ್ಲ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry