ಸೋಮವಾರ, ಡಿಸೆಂಬರ್ 9, 2019
22 °C

ಆಟಿಸಂ ಜಾಗೃತಿ ದಿನ: ನೀಲಿಬಣ್ಣದಲ್ಲಿ ಕಂಗೊಳಿಸಿದ ಕುತುಬ್‌ ಮಿನಾರ್‌

ಪಿಟಿಐ Updated:

ಅಕ್ಷರ ಗಾತ್ರ : | |

ಆಟಿಸಂ ಜಾಗೃತಿ ದಿನ: ನೀಲಿಬಣ್ಣದಲ್ಲಿ  ಕಂಗೊಳಿಸಿದ ಕುತುಬ್‌ ಮಿನಾರ್‌

ನವದೆಹಲಿ: ವಿಶ್ವ ಆಟಿಸಂ ಜಾಗೃತಿ ದಿನದ ಅಂಗವಾಗಿ ಕುತುಬ್‌ ಮಿನಾರ್‌ ಸೋಮವಾರ ನೀಲಿಬಣ್ಣದಿಂದ ಕಂಗೊಳಿಸಿತು.

ಆಟಿಸಂನ್ನು ಸಮಾಜವು ಸಂವೇದನಾಶೀಲವಾಗಿ ಸ್ವೀಕರಿಸುವ ಉದ್ದೇಶದಿಂದ ‘ಲೈಟ್‌ ಇಟ್‌ಅಪ್‌ ಬ್ಲೂ’ ಹೆಸರಿನಲ್ಲಿ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಾಗಿತ್ತು.

ಆಟಿಸಂ ಮಕ್ಕಳ ಸಂಸ್ಥೆ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ), ಸಾಮಾಜಿಕ ನ್ಯಾಯ ಇಲಾಖೆಯು ಸಹಯೋಗದಲ್ಲಿ ಎರಡನೇ ಸಲ ಈ ಸ್ಮಾರಕದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಹಿಂದೆ ಇದೇ ದಿನ ನಯಾಗಾರ ಫಾಲ್ಸ್‌, ವಿಶ್ವಸಂಸ್ಥೆ ಕಟ್ಟಡ, ಶ್ವೇತಭವನವನ್ನೂ ನೀಲಿಬಣ್ಣದಿಂದ ಬೆಳಗಿಸಲಾಗಿತ್ತು.

‘ಸಮಾಜದಲ್ಲಿ ಎಲ್ಲರೂ ಸಮಾನರು. ಆಟಿಸಂ ಮಕ್ಕಳನ್ನು ಸಾಮಾನ್ಯರಂತೆ ಕಾಣಬೇಕು’ ಎಂಬ ಸಂದೇಶವನ್ನು ಈ ಕಾರ್ಯಕ್ರಮ ಸಾರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)