ಪಾಕ್‌ನಿಂದ ಶೆಲ್‌ ದಾಳಿ: ಸೈನಿಕ ಸಾವು

7

ಪಾಕ್‌ನಿಂದ ಶೆಲ್‌ ದಾಳಿ: ಸೈನಿಕ ಸಾವು

Published:
Updated:

ಜಮ್ಮು : ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನದ ಸೇನೆ ನಡೆಸಿದ ಶೆಲ್‌ ದಾಳಿಯಲ್ಲಿ ಒಬ್ಬ ಸೈನಿಕ ಮೃತಪಟ್ಟು, ಲೆಫ್ಟಿನೆಂಟ್‌ ಸೇರಿ ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೃಷ್ಣಘಾಟಿ ವಲಯದಲ್ಲಿ ಮಂಗಳವಾರ ಬೆಳಿಗ್ಗೆ ಪಾಕಿಸ್ತಾನ ಸೇನೆ ದಾಳಿ ನಡೆಸಿದೆ. ಗಾಯಗೊಂಡವರನ್ನು ಉಧಂಪುರ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪಾಕಿಸ್ತಾನ ಪಡೆಗಳ ಅಪ್ರಚೋದಿತ ದಾಳಿಗೆ ಪ್ರತಿಯಾಗಿ ಭಾರತದ ಸೇನೆ ದಿಟ್ಟ ಉತ್ತರ ನೀಡಿದೆ ಎಂದು ಲೆಫ್ಟಿನೆಂಟ್‌ ಕರ್ನಲ್‌ ಎನ್‌.ಎನ್‌. ಜೋಶಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry