ಸಲ್ಮಾನ್‌ ಭೇಟಿಗೆ ಅಪಾರ್ಟ್‌ಮೆಂಟ್ ಗೋಡೆಯೇರಲು ಯತ್ನಿಸಿದ ಬಾಲಕಿ

7

ಸಲ್ಮಾನ್‌ ಭೇಟಿಗೆ ಅಪಾರ್ಟ್‌ಮೆಂಟ್ ಗೋಡೆಯೇರಲು ಯತ್ನಿಸಿದ ಬಾಲಕಿ

Published:
Updated:

ಮುಂಬೈ: ತನ್ನ ನೆಚ್ಚಿನ ನಟ ಸಲ್ಮಾನ್‌ಖಾನ್‌ ಅವರನ್ನು ಭೇಟಿಯಾಗುವ ಆಸೆಯಿಂದ ಬಾಂದ್ರಾದ ಪ್ರತಿಷ್ಠಿತ ಗೆಲಾಕ್ಸಿ ಅಪಾರ್ಟ್‌ಮೆಂಟ್‌ನ ಗೋಡೆ ಏರಲು ಯತ್ನಿಸಿದ 15 ವರ್ಷದ ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದು ಬಾಲಮಂದಿರಕ್ಕೆ ಒಪ್ಪಿಸಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‌ನ ಈ ಬಾಲಕಿ, ನಟ ಸಲ್ಮಾನ್‌ಖಾನ್‌ ಅವರನ್ನು ಭೇಟಿಯಾಗುವ ಉದ್ದೇಶದಿಂದ ಭಾನುವಾರ ಮನೆ ತೊರೆದು ರೈಲಿನಲ್ಲಿ ಮುಂಬೈಗೆ ಹೊರಟಿದ್ದಾಳೆ. ಸೋಮವಾರ ಬೆಳಿಗ್ಗೆ ಬಾಂದ್ರಾ ನಿಲ್ದಾಣಕ್ಕೆ ಬಂದಿಳಿದಿದ್ದಾಳೆ ಎಂದು ಹಿರಿಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಪಂಡಿತ್‌ ಠಾಕ್ರೆ ತಿಳಿಸಿದ್ದಾರೆ.

ಬಾಲಕಿಗೆ ಖಾನ್‌ ಮನೆಯ ವಿಳಾಸ ಗೊತ್ತಿತ್ತು. ರೈಲು ನಿಲ್ದಾಣದಿಂದ ನೇರವಾಗಿ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿರುವ ಗೆಲಾಕ್ಸಿ ಅಪಾರ್ಟ್‌ಮೆಂಟ್‌ ಬಳಿ ಬಂದಿದ್ದಾಳೆ. ಮೊದಲಿಗೆ ಗೇಟ್‌ ಮೂಲಕ ಒಳ ಪ್ರವೇಶಿಸಲು ಯತ್ನಿಸಿದ್ದಾಳೆ. ಆದರೆ ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಆಗ ಆವರಣ ಗೋಡೆ ಹತ್ತಲು ಯತ್ನಿಸಿದ್ದಾಳೆ. ಮತ್ತೆ ತಡೆದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಲಕಿಯ ಬಳಿ ಆಧಾರ್‌ ಕಾರ್ಡ್‌ ಇತ್ತು. ಆ ವಿಳಾಸಕ್ಕೆ ಸಂಪರ್ಕಿಸಿ ಆಕೆಯ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಠಾಕ್ರೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry