ಭಾನುವಾರ, ಡಿಸೆಂಬರ್ 15, 2019
25 °C

ವೈಟ್‌ಫೀಲ್ಡ್‌ನಲ್ಲಿ ಮ್ಯಾರಿಯಟ್ ಹೋಟೆಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈಟ್‌ಫೀಲ್ಡ್‌ನಲ್ಲಿ ಮ್ಯಾರಿಯಟ್ ಹೋಟೆಲ್‌

ಬೆಂಗಳೂರು: ಅಮೆರಿಕದ ಹೋಟೆಲ್‌ ಸಮೂಹ ಮ್ಯಾರಿಯಟ್ ಇಂಟರ್ ನ್ಯಾಷನಲ್, ವೈಟ್ ಫೀಲ್ಡ್‌ನಲ್ಲಿ ಹೋಟೆಲ್ ಆರಂಭಿಸಿದೆ.

ಹೋಟೆಲ್‌ ಶರಟಾನ್‌ ಗ್ರ್ಯಾಂಡ್‌ ಬೆಂಗಳೂರು ಸಂಸ್ಥೆಯ 100ನೇ ಹೋಟೆಲ್‌ ಆಗಿದೆ.

‘ದೇಶದಲ್ಲಿ  ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಮುಂಬರುವ ವರ್ಷಗಳಲ್ಲಿ ಇನ್ನೂ 50 ಹೋಟೆಲ್‌ಗಳನ್ನು ಆರಂಭಿಸಲಾಗುವುದು’ ಎಂದು ಮ್ಯಾರಿಯಟ್ ಇಂಟರ್ ನ್ಯಾಷನಲ್‌ನ ಸಿಇಒ ಆರ್ನೆ ಸೊರೆನ್ಸನ್ ಹೇಳಿದ್ದಾರೆ.

‘ಏಷ್ಯಾದಲ್ಲಿ ಭಾರತವು ಸಂಸ್ಥೆಯ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಚೀನಾದ ನಂತರ ಎರಡನೇ ಅತಿಹೆಚ್ಚು ಹೋಟೆಲ್‌ಗಳನ್ನು ಹೊಂದಿದೆ. ವೈಟ್‌ಫೀಲ್ಡ್‌ನಲ್ಲಿನ ಹೋಟೆಲ್ 350 ಕೋಣೆಗಳನ್ನು ಹೊಂದಿದೆ.

ಪ್ರತಿಕ್ರಿಯಿಸಿ (+)