ಅಮೆರಿಕದ ಸರಕಿಗೆ ಹೊಸ ನಿರ್ಬಂಧ

7
1,300 ಸರಕುಗಳ ಪಟ್ಟಿ ಪ್ರಕಟಿಸಿದ ಅಮೆರಿಕದ ನಿಲುವಿಗೆ ಪ್ರತೀಕಾರ

ಅಮೆರಿಕದ ಸರಕಿಗೆ ಹೊಸ ನಿರ್ಬಂಧ

Published:
Updated:

ಬೀಜಿಂಗ್‌: ಅಮೆರಿಕದ 106 ಉತ್ಪನ್ನಗಳ ಮೇಲೆ ಹೆಚ್ಚುವರಿಯಾಗಿ ಶೇ 25ರಷ್ಟು ಆಮದು ಸುಂಕ ವಿಧಿಸಲು ಚೀನಾ ನಿರ್ಧರಿಸಿದೆ.

ಚೀನಾದ ಸರಕುಗಳ ಆಮದು ನಿರ್ಬಂಧಿಸಲು ಡೊನಾಲ್ಡ್‌ ಟ್ರಂಪ್‌ ಆಡಳಿತವು ಮಂಗಳವಾರ 1,300 ಸರಕುಗಳ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ, ಈ ಪ್ರತೀಕಾರ ಕ್ರಮ ಪ್ರಕಟಿಸಲಾಗಿದೆ.

ಅಮೆರಿಕದ 106 ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ 25ರಷ್ಟು ಆಮದು ಸುಂಕ ವಿಧಿಸಲಾಗುವುದು ಎಂದು ಚೀನಾ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ವಿಮಾನ ಮತ್ತು ಕಾರ್‌ಗಳೂ ಸೇರಿವೆ. ಈ ಆಮದು ಸುಂಕದ ಒಟ್ಟಾರೆ ಮೊತ್ತ ₹ 3.25 ಲಕ್ಷ ಕೋಟಿಗಳಷ್ಟು ಇರಲಿದೆ.

ಅಮೆರಿಕದ ನಿರ್ಧಾರ ಜಾರಿಗೆ ಬರುತ್ತಿದ್ದಂತೆ, ಚೀನಾದ ಆಮದು– ರಫ್ತು ಸುಂಕ ಆಯೋಗವು ಈ ನಿರ್ಧಾರ ಕಾರ್ಯಗತಗೊಳಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry