ಬುಧವಾರ, ಆಗಸ್ಟ್ 5, 2020
21 °C

ಮಾಧ್ಯಮ ಪ್ರಸಾರ ಹಕ್ಕು: ₹ 6 ಸಾವಿರ ಕೋಟಿ ದಾಟಿದ ಬಿಡ್‌ ಮೊತ್ತ

ಪಿಟಿಐ Updated:

ಅಕ್ಷರ ಗಾತ್ರ : | |

ಮಾಧ್ಯಮ ಪ್ರಸಾರ ಹಕ್ಕು: ₹ 6 ಸಾವಿರ ಕೋಟಿ ದಾಟಿದ ಬಿಡ್‌ ಮೊತ್ತ

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾಧ್ಯಮ ಪ್ರಸಾರ ಹಕ್ಕುಗಳಿಗಾಗಿ ನಡೆಸಿರುವ ಇ–ಹರಾಜಿನ ಬಿಡ್‌ ಮೊತ್ತ ಎರಡನೇ ದಿನವಾದ ಬುಧವಾರ ₹ 6500 ಕೋಟಿ ದಾಟಿದೆ.

ಭಾರತದಲ್ಲಿ ಮುಂದಿನ ಐದು ವರ್ಷ ನಡೆಯಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳ ಪ್ರಸಾರ ಹಕ್ಕು ಪಡೆಯುವುದಕ್ಕಾಗಿ ಸಂಸ್ಥೆಗಳು ಬಿಡ್ ಸಲ್ಲಿಸಿದ್ದು ಜಿಯೊ, ಸ್ಟಾರ್ ಮತ್ತು ಸೋನಿ ಸಂಸ್ಥೆಗಳು ಕಣದಲ್ಲಿ ಉಳಿದಿವೆ. ಎರಡನೇ ದಿನದ ಮುಕ್ತಾಯಕ್ಕೆ ಬಿಡ್ ಮೊತ್ತ ₹ 6032.5 ಕೋಟಿ ತಲುಪಿದೆ.

₹ 4442 ಕೋಟಿ ಮೊತ್ತದೊಂದಿಗೆ ದಿನದ ಬಿಡ್ ಆರಂಭಗೊಂಡಿತ್ತು. ನಂತರ ಈ ಮೊತ್ತ ₹ 4565.20 ಕೋಟಿ, ₹ 5488.30 ಕೋಟಿ,

₹ 5748 ಕೋಟಿ ಆಯಿತು. ಸಂಜೆ 4.30ರ ವೇಳೆಗೆ ಮೊತ್ತ ₹ 6,000 ಕೋಟಿ ತಲುಪಿತು. ಆರುಗಂಟೆಗೆ ಎರಡನೇ ದಿನದ ಪ್ರಕ್ರಿಯೆ ಮುಕ್ತಾಯ

ಗೊಂಡಿತು.

‘ಭಾರತ ಕ್ರಿಕೆಟ್‌ನ ಬಲ ಏನೆಂದು ಈಗ ಸಾಬೀತಾಗಿದೆ. ಎಂಥ ನಕಾರಾತ್ಮಕ ಅಂಶಗಳನ್ನು ಕೂಡ ಮೆಟ್ಟಿ ನಿಲ್ಲುವ ಸಾಮರ್ಥ್ಯ ನಮ್ಮ ಕ್ರಿಕೆಟ್‌ಗೆ ಇದೆ. ಇಲ್ಲಿ ಕ್ರಿಕೆಟ್ ಮೇಲೆ ಹೂಡುವ ಮೊತ್ತ ಸಾಕಷ್ಟು ಲಾಭ ತಂದುಕೊಡುತ್ತದೆ ಎಂದು ಮಾಧ್ಯಮ ಪ್ರಸಾರಕರಿಗೆ ಗೊತ್ತು. ಹೀಗಾಗಿಯೇ ಬಿಡ್ ಮೊತ್ತ ಏರುತ್ತಿದೆ’ ಎಂದು ಹರಾಜು ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.