ಶನಿವಾರ, ಆಗಸ್ಟ್ 8, 2020
22 °C
ಕ್ಲೀನ್‌ ಅಂಡ್‌ ಜರ್ಕ್‌ ವಿಭಾಗಗಳಲ್ಲೂ ಪ್ರತ್ಯೇಕ ಸಾಧನೆ ಮಾಡಿದ ಮಣಿಪುರದ ಕ್ರೀಡಾಪಟು

ದಾಖಲೆ ಚಿನ್ನದ ಸಂಭ್ರಮ ತಂದ ಚಾನು

ಪಿಟಿಐ Updated:

ಅಕ್ಷರ ಗಾತ್ರ : | |

ದಾಖಲೆ ಚಿನ್ನದ ಸಂಭ್ರಮ ತಂದ ಚಾನು

ಗೋಲ್ಡ್‌ ಕೋಸ್ಟ್‌, ಆಸ್ಟ್ರೇಲಿಯಾ: ಸಾಯಿಕೋಮ್ ಮೀರಾಬಾಯಿ ಚಾನು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಕಾಣಿಕೆ ನೀಡಿದರು.

ಗುರುವಾರ ಬೆಳಿಗ್ಗೆ  ಪುರುಷರ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಗುರುರಾಜ್‌ ಪೂಜಾರಿ ಬೆಳ್ಳಿ ಗೆದ್ದ ನಾಲ್ಕೂವರೆ ತಾಸುಗಳ ನಂತರ ನಡೆದ ಮಹಿಳೆಯರ 48 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಸಾಯಿಕೋಮ್‌ ಮೀರಾಬಾಯಿ ಭಾರತ ಕೀರ್ತಿ ಪತಾಕೆ ಹಾರಿಸಿದರು. ಈ ಮೂಲಕ ನೂತನ ಕೂಟ ದಾಖಲೆ ತಮ್ಮದಾಗಿಸಿಕೊಂಡರು. 2010ರ ಕೂಟದಲ್ಲಿ ನೈಜೀರಿಯಾದ ಆಗಸ್ಟಿನಾ ನವೊಕೊಲೊ 175 ಕೆ.ಜಿ ಭಾರ ಎತ್ತಿ ದಾಖಲೆ ಬರೆದಿದ್ದರು.

ಮಾರಿಷಸ್‌ನ ರೊಯಿಲ್ಯಾ ರನೈವೊಸ ಮತ್ತು ಶ್ರೀಲಂಕಾದ ದಿನುಶಾ ಗೊಮೆಜ್ ಅವರನ್ನು ಹಿಂದಿಕ್ಕಿದ ಚಾನು 26 ಕೆ.ಜಿ ಅಂತರದಲ್ಲಿ ಚಿನ್ನಕ್ಕೆ ಮುತ್ತಿಕ್ಕಿದರು. ಕಳೆದ ವರ್ಷ ಗ್ಲಾಸ್ಗೊದಲ್ಲಿ ನಡೆದ ಕೂಟದಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದರು.

ಅವರು ಒಟ್ಟು 196 ಕೆ.ಜಿ ಭಾರ ಎತ್ತಿದ್ದರು. ಸ್ನ್ಯಾಚ್‌ನಲ್ಲಿ 86 ಕೆ.ಜಿ ಎತ್ತಿದ ಅವರು ಕ್ಲೀನ್‌ ಅಂಡ್‌ ಜರ್ಕ್‌ನಲ್ಲಿ 110 ಕೆ.ಜಿ ಎತ್ತಿದರು. ಈ ಎರಡು ವಿಭಾಗಗಳಲ್ಲೂ ಪ್ರತ್ಯೇಕ ಕೂಟ ದಾಖಲೆ ಬರೆದರು.

ಸ್ಪರ್ಧೆ ಮುಗಿಸಿದ ಕೂಡಲೇ ಅವರನ್ನು ಮುತ್ತಿಕೊಂಡ ಆಸ್ಟ್ರೇಲಿಯಾದ ಪ್ರೇಕ್ಷಕರು ಹಸ್ತಾಕ್ಷರಕ್ಕೆ ಮುಗಿ ಬಿದ್ದರು. ಹೋದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೀರಾ ಚಿನ್ನದ ಪದಕ ಗೆದ್ದಿದ್ದರು.

**

ಈ ಸಾಧನೆಯನ್ನು ಮಾತಿನಲ್ಲಿ ಬಣ್ಣಿಸಲಾರೆ. ದಾಖಲೆ ಬರೆಯುವ ಭರವಸೆ ಇರಲಿಲ್ಲ. ಆದರೆ ದಾಖಲೆ ಮಾಡುವ ಹಂಬಲ ಇತ್ತು. ಅದು ಇಲ್ಲಿ ಸಾಧ್ಯವಾಗಿದೆ.

ಸಾಯಿಕೋಮ್‌ ಮೀರಾಬಾಯಿ ಚಾನು, ಚಿನ್ನ ಗೆದ್ದ ವೇಟ್‌ಲಿಫ್ಟರ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.