4

ಬ್ಯಾಸ್ಕೆಟ್‌ಬಾಲ್‌: ಭಾರತದ ತಂಡಗಳಿಗೆ ಮತ್ತೆ ನಿರಾಸೆ

Published:
Updated:

ಗೋಲ್ಡ್‌ ಕೋಸ್ಟ್‌ : ಭಾರತದ ಪುರುಷರ ಮತ್ತು ಮಹಿಳೆಯರ ಬ್ಯಾಸ್ಕೆಟ್‌ಬಾಲ್‌ ತಂಡದವರು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸತತ ಎರಡನೆ ಸೋಲು ಕಂಡಿದ್ದಾರೆ.

ಟೌನ್ಸ್‌ವಿಲ್ಲೆ ಕ್ರೀಡಾ ಸಂಕೀರ್ಣದಲ್ಲಿ ಶನಿವಾರ ನಡೆದ ಪುರುಷರ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತ 54–100 ಪಾಯಿಂಟ್ಸ್‌ನಿಂದ ಇಂಗ್ಲೆಂಡ್‌ಗೆ ಮಣಿಯಿತು.

ಕೂಟದ ಮೊದಲ ಪಂದ್ಯದಲ್ಲಿ ಕ್ಯಾಮರೂನ್‌ ವಿರುದ್ಧ ಸೋತಿದ್ದ ಭಾರತ ತಂಡ ಆಂಗ್ಲರ ನಾಡಿನ ಎದುರೂ ಮಂಕಾಯಿತು.

ಮೊದಲ ಕ್ವಾರ್ಟರ್‌ನಲ್ಲಿ ಎದುರಾಳಿಗಳಿಗೆ ಕಠಿಣ ಪೈಪೋಟಿ ಒಡ್ಡಿದ ಭಾರತದ ಆಟಗಾರರು ಎರಡನೆ ಕ್ವಾರ್ಟರ್‌ನಲ್ಲಿ ಗುಣಮಟ್ಟದ ಆಟ ಆಡಲು ವಿಫಲರಾದರು. ಹೀಗಾಗಿ ಇಂಗ್ಲೆಂಡ್‌ 46–24ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ಮೂರು ಮತ್ತು ನಾಲ್ಕನೆ ಕ್ವಾರ್ಟರ್‌ಗಳಲ್ಲೂ ಪ್ರಾಬಲ್ಯ ಮೆರೆದ ಇಂಗ್ಲೆಂಡ್‌ ಸುಲಭವಾಗಿ ಗೆದ್ದಿತು.

ಮಹಿಳೆಯರ ವಿಭಾಗದ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತ ತಂಡ 72–85 ಪಾಯಿಂಟ್ಸ್‌ನಿಂದ ಮಲೇಷ್ಯಾ ಎದುರು ಪರಾಭವಗೊಂಡಿತು.

ಮೊದಲ ಕ್ವಾರ್ಟರ್‌ನಲ್ಲಿ ಅಮೋಘ ಆಟ ಆಡಿದ ಭಾರತದ ವನಿತೆಯರು 25–20ರ ಮುನ್ನಡೆ ಗಳಿಸಿದರು. ಆದರೆ ಎರಡನೆ ಕ್ವಾರ್ಟರ್‌ನಲ್ಲಿ ಮಲೇಷ್ಯಾದ ಆಟಗಾರ್ತಿಯರು ಮೋಡಿ ಮಾಡಿದರು.

ಮೂರು ಮತ್ತು ನಾಲ್ಕನೆ ಕ್ವಾರ್ಟರ್‌ಗಳಲ್ಲೂ ಮಲೇಷ್ಯಾ ತಂಡ ಪಾರಮ್ಯ ಸಾಧಿಸಿ ಗೆಲುವಿನ ತೋರಣ ಕಟ್ಟಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry