ಭಾನುವಾರ, ಡಿಸೆಂಬರ್ 15, 2019
25 °C

ಬಳಕೆದಾರರಿಗೆ ಮಾಹಿತಿ ನೀಡಲು ಮುಂದಾದ ಫೇಸ್‌ಬುಕ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಬಳಕೆದಾರರಿಗೆ ಮಾಹಿತಿ ನೀಡಲು ಮುಂದಾದ ಫೇಸ್‌ಬುಕ್‌

ನ್ಯೂಯಾರ್ಕ್‌ (ಎಪಿ): ತನ್ನ 8.7 ಕೋಟಿ ಬಳಕೆದಾರರ ಮಾಹಿತಿಯನ್ನು ‘ಕೇಂಬ್ರಿಜ್‌ ಅನಲಿಟಿಕಾ’ ಸಂಸ್ಥೆ ಅಕ್ರಮವಾಗಿ ಪಡೆದಿರುವ ಕುರಿತ ವಿವರಗಳನ್ನು ಆಯಾ ಬಳಕೆದಾರರಿಗೆ ಸಂದೇಶದ ಮೂಲಕ ಕಳುಹಿಸಲು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮುಂದಾಗಿದೆ.

ಇಂಗ್ಲೆಂಡ್‌ನ ಈ ಸಂಸ್ಥೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನು ಅಕ್ರಮವಾಗಿ ಪಡೆದುಕೊಂಡಿತ್ತು. ಈಚೆಗೆ ಈ ವಿಷಯ ಬಹಿರಂಗಗೊಂಡು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ‘ಫೇಸ್‌ಬುಕ್‌’, ಕೆಲ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.

‘ಮಾಹಿತಿ ಸೋರಿಕೆಗೆ ಒಳಗಾದ ಬಹುತೇಕ ಬಳಕೆದಾರರು ಅಮೆರಿಕದವರಾಗಿದ್ದಾರೆ. ಇನ್ನುಳಿದ ಬಳಕೆದಾರರು ಫಿಲಿಪ್ಪೀನ್ಸ್‌, ಇಂಡೊನೇಷ್ಯಾ ಮತ್ತು ಇಂಗ್ಲೆಂಡ್‌ನವರು. ಅವರಿಗೆ ಸೋಮವಾರದಿಂದಲೇ ಸಂದೇಶ ಕಳುಹಿಸಲು ಆರಂಭಿಸಲಾಗಿದೆ’ ಎಂದು ಫೇಸ್‌ಬುಕ್‌ ತಿಳಿಸಿದೆ.

ಪ್ರತಿಕ್ರಿಯಿಸಿ (+)