7

‘ಜೊತೆಯಾಟದ ಕೊರತೆ ಸೋಲಿಗೆ ಕಾರಣ’

Published:
Updated:

ಹೈದರಾಬಾದ್‌: ಉತ್ತಮ ಜೊತೆಯಾಟ ಮೂಡಿಬರದ ಕಾರಣ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಸೋಲಾಯಿತು ಎಂದು ರಾಜಸ್ಥಾನ ರಾಯಲ್ಸ್‌ ತಂಡದ ನಾಯಕ ಅಜಿಂಕ್ಯ ರಹಾನೆ ಹೇಳಿದರು.

ರಾಜಸ್ಥಾನ ರಾಯಲ್ಸ್‌ ಹಾಗೂ ಸನ್‌ರೈಸರ್ಸ್‌ ತಂಡಗಳ ನಡುವೆ ಸೋಮವಾರ ನಡೆದ ಪಂದ್ಯದ ನಂತರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಈ ಪಂದ್ಯದಲ್ಲಿ ಸನ್‌ರೈಸರ್ಸ್‌ ತಂಡವು 9 ವಿಕೆಟ್‌ಗಳ ಅಂತರದಿಂದ ಗೆದ್ದಿತು. 

ಮೊದಲು ಬ್ಯಾಟಿಂಗ್‌ ಮಾಡಿದ್ದ ರಾಜಸ್ಥಾನ ರಾಯಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 125 ರನ್‌ ಗಳಿಸಿತು. ಸನ್‌ರೈಸರ್ಸ್ ತಂಡವು 15.5 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 127 ರನ್‌ ಗಳಿಸಿ ಜಯಿಸಿತು.

‘ಈ ಪಿಚ್‌ನಲ್ಲಿ 150ರಿಂದ 160 ರನ್‌ಗಳನ್ನು ಗಳಿಸಬೇಕು ಎಂದು ಪಂದ್ಯ ಆರಂಭವಾಗುವ ಮುನ್ನ ನಿರ್ಧರಿಸಿದ್ದೆವು. ಆದರೆ, ಈ ಮೊತ್ತ ಗಳಿಸಲು ಅಗತ್ಯವಾಗಿದ್ದ ಒಂದು ಉತ್ತಮ ಜೊತೆಯಾಟ ನಮ್ಮಿಂದ ಸಾಧ್ಯವಾಗಲಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ತಂಡವು ಉತ್ತಮ ಆಟವಾಡಲಿದೆ ಎಂಬ ವಿಶ್ವಾಸವಿದೆ. ನಮ್ಮ ತಂಡದಲ್ಲಿರುವ ವಿದೇಶಿ ಆಟಗಾರರಾದ ಬೆನ್‌ ಸ್ಟೋಕ್ಸ್‌, ಜೋಸ್‌ ಬಟ್ಲರ್‌ ಹಾಗೂ ಮ್ಯಾಥ್ಯೂ ಶಾರ್ಟ್‌ ಹೆಚ್ಚಿನ ಸಾಮರ್ಥ್ಯ ಹೊಂದಿದ್ದಾರೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry