ಶುಕ್ರವಾರ, ಆಗಸ್ಟ್ 14, 2020
21 °C

ವಿದ್ಯುತ್‌ ತಂತಿ ಸ್ಪರ್ಶ: ಒರ್ವ ಸಾವು, 13 ಬಾಲಕರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯುತ್‌ ತಂತಿ ಸ್ಪರ್ಶ: ಒರ್ವ ಸಾವು, 13 ಬಾಲಕರಿಗೆ ಗಾಯ

ರಾಯಚೂರು: ದಿಬ್ಬಣ ಹೊರಟಿದ್ದ ಲಾರಿಯ ಟಾಪ್‌ ಮೇಲೆ ಕುಳಿತ್ತಿದ್ದ 14 ಬಾಲಕರಿಗೆ ವಿದ್ಯುತ್‌ ತಂತಿ ತಗುಲಿದ ಪರಿಣಾಮ 13 ಮಂದಿ ಗಾಯಗೊಂಡಿದ್ದು, ಓರ್ವ ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬುದ್ದಿನ್ನಿ ಗ್ರಾಮದ ಬಳಿ ಬುಧವಾರ ನಡೆದಿದೆ.

ಮಟ್ಟೂರ್‌ ಗ್ರಾಮದ ದಾವೂದ್‌ ಇಬ್ರಾಹಿಂ (17) ಮೃತಪಟ್ಟಿದ್ದು, ಇನ್ನುಳಿದ ಬಾಲಕರಿಗೆ ಮುಖ ಹಾಗೂ ಎದೆಭಾಗದಲ್ಲಿ ಸುಟ್ಟ ಗಾಯಗಳಾಗಿವೆ.

ಘಟನೆಯಲ್ಲಿ ಗಾಯಗೊಂಡವರನ್ನು ಲಿಂಗಸುಗೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಮರೇಶ್ವರ ಕ್ಯಾಂಪ್‌ನಲ್ಲಿ ಏರ್ಪಡಿಸಿದ್ದ ಮದುವೆಯಲ್ಲಿ ಪಾಲ್ಗೊಳ್ಳಲು ಮಸ್ಕಿ ತಾಲ್ಲೂಕಿನ ಮಟ್ಟೂರಿನಿಂದ ದಿಬ್ಬಣ ಹೊರಟಿದ್ದರು. ಮೇನ್‌ಲೈನ್‌ ತಂತಿಯನ್ನು ಗಮನಿಸದೆ ಲಾರಿ ಚಲಾಯಿಸಿದ್ದು ಈ ಅನಾಹುತ ನಡೆಯಲು ಕಾರಣ ಎನ್ನಲಾಗಿದೆ. ಮುದಗಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.