ಮಂಗಳವಾರ, ಜೂಲೈ 7, 2020
27 °C

ಆಸ್ಟ್ರೇಲಿಯಾ ಆಟಗಾರರ ಗುತ್ತಿಗೆ: ಪ‍್ರಮುಖರು ಹೊರಗೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಆಸ್ಟ್ರೇಲಿಯಾ ಆಟಗಾರರ ಗುತ್ತಿಗೆ: ಪ‍್ರಮುಖರು ಹೊರಗೆ

ಸಿಡ್ನಿ (ಎಎಫ್‌ಪಿ): ಕ್ರಿಕೆಟ್ ಆಸ್ಟ್ರೇಲಿಯಾ ಗುತ್ತಿಗೆಯನ್ನು ನವೀಕರಿಸಿದ್ದು ಪ್ರಮುಖ ಆಟಗಾರರನ್ನು ಹೊರಗಿರಿಸಲಾಗಿದೆ. ಸ್ಪಿನ್ನರ್ ಆ್ಯಡಂ ಜಂಪಾ, ವೇಗಿಗಳಾದ ಜಾಕ್ಸ್ ಬರ್ಡ್ ಮತ್ತು ಜೇಮ್ಸ್ ಪ್ಯಾಟಿನ್ಸನ್‌, ಆಲ್‌ರೌಂಡರ್ ಹಿಲ್ಟನ್ ಕಾರ್ಟ್‌ರೈಟ್ ಮತ್ತು ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್‌ ಹೊರಗುಳಿದ ಆಟಗಾರರಲ್ಲಿ ಪ್ರಮುಖರು.

2018–19ನೇ ಸಾಲಿಗೆ ಒಟ್ಟು 20 ಆಟಗಾರರ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಚೆಂಡು ವಿರೂಪ ಪ್ರಕರಣದಿಂದ ಮುಜು ಗರಕ್ಕೆ ಒಳಗಾಗಿರುವುದೇ ಪ್ರಮುಖರನ್ನು ಕೈಬಿಡಲು ಕಾರಣ ಎಂದು ಹೇಳಲಾಗಿದೆ.

ಜೇ ರಿಚರ್ಡ್ಸನ್‌, ಕೇನ್ ರಿಚರ್ಡ್ಸನ್‌ ಮತ್ತು ಆ್ಯಂಡ್ರ್ಯೂ ಟೈ, ಮಾರ್ಕಸ್‌ ಮತ್ತು ಅಲೆಕ್ಸ್‌ ಕ್ಯಾರಿ ಅವರನ್ನು ಇದೇ ಮೊದಲ ಬಾರಿ ಗುತ್ತಿಗೆಗೆ ಒಳಪಡಿಸಲಾಗಿದೆ.

ಗುತ್ತಿಗೆಗೆ ಒಳಪಟ್ಟ ಆಟಗಾರರು: ಆ್ಯಶ್ಟನ್ ಅಗರ್‌, ಅಲೆಕ್ಸ್‌ ಕ್ಯಾರಿ, ಪ್ಯಾಟ್‌ ಕಮಿನ್ಸ್‌, ಆ್ಯರನ್ ಫಿಂಚ್‌, ಪೀಟರ್‌ ಹ್ಯಾಂಡ್ಸ್‌ಕಂಬ್‌, ಜೋಶ್‌ ಹ್ಯಾಜಲ್‌ವುಡ್‌, ಟ್ರಾವಿಸ್‌ ಹೆಡ್‌, ಉಸ್ಮಾನ್ ಖ್ವಾಜಾ, ನೇಥನ್‌ ಲಿಯಾನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಶಾನ್ ಮಾರ್ಷ್‌, ಮಿಷೆಲ್‌ ಮಾರ್ಷ್‌, ಟಿಮ್ ಪೇನ್, ಮ್ಯಾಟ್‌ ರೇನ್‌ಶಾ, ಜೇ ರಿಚರ್ಡ್ಸನ್‌, ಕೇನ್‌ ರಿಚರ್ಡ್ಸನ್‌, ಬಿಲಿ ಸ್ಟ್ಯಾನ್‌ಲೇಕ್‌, ಮಿಚೆಲ್‌ ಸ್ಟಾರ್ಕ್‌, ಮಾರ್ಕಸ್ ಸ್ಟೊಯಿನಿಸ್‌, ಆ್ಯಂಡ್ರ್ಯೂ ಟೈ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.