ಭಾನುವಾರ, ಡಿಸೆಂಬರ್ 15, 2019
25 °C
ಆ್ಯಪ್‌ ಡೌನ್‌ಲೋಡ್‌ ಸೌಲಭ್ಯ

ಮಾರುಕಟ್ಟೆಗೆ ಥಾಮ್ಸನ್‌ ಟಿ.ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರುಕಟ್ಟೆಗೆ ಥಾಮ್ಸನ್‌ ಟಿ.ವಿ

ನವದೆಹಲಿ: ಎಲೆಕ್ಟ್ರಾನಿಕ್‌ ಉಪಕರಣಗಳ ತಯಾರಿಕಾ ಕಂಪನಿ ಥಾಮ್ಸನ್‌, ತನ್ನ ಹೊಸ ಎಲ್‌ಇಡಿ ಸ್ಮಾರ್ಟ್‌ ಟಿ.ವಿ.ಯನ್ನು ಗುರುವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ಭಾರತದಲ್ಲಿಯೇ ತಯಾರಿಸಿ’ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಲೆಂದೇ ನೊಯಿಡಾ, ವೂನಾ ಮತ್ತು ಜಮ್ಮು ನಗರಗಳಲ್ಲಿ  ತಯಾರಿಕಾ ಘಟಕ ಆರಂಭಿಸಲಾಗಿದೆ’ ಎಂದು ಹೊಸ ಟಿ.ವಿ ಬಿಡುಗಡೆ ಮಾಡಿದ ಫ್ರಾನ್ಸ್‌ನ ರಾಯಭಾರ ಕಚೇರಿಯ ಹಿರಿಯ ಅಧಿಕಾರಿ ಕ್ಲೇರ್‌ ತಾಡೆ ಹೇಳಿದರು.

‘125 ವರ್ಷಗಳಷ್ಟು ಹಳೆಯದಾದ ಫ್ರಾನ್ಸ್‌ನ ಈ ಕಂಪನಿಯು, ಭಾರತ– ಫ್ರಾನ್ಸ್‌ ವ್ಯಾಪಾರ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ, ಭಾರತದ ಗ್ರಾಹಕರಿಗೆ ಕಡಿಮೆ ದರದಲ್ಲಿ ಸ್ಮಾರ್ಟ್‌ ಎಲ್‌ಇಡಿ ಟಿ.ವಿ.ಯನ್ನು ಮಾರುಕಟ್ಟೆಗೆ ಪರಿಚಯಿಸಿದೆ’ ಎಂದರು.

ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ  ಆ್ಯಪ್‌ಗಳ ಡೌನ್‌ಲೋಡ್‌  ಸೌಲಭ್ಯವನ್ನು ಈ ಟಿ.ವಿ. ಒಳಗೊಂಡಿದ್ದು, ಏಪ್ರಿಲ್‌ 13ರ ಮಧ್ಯಾಹ್ನ 12ರಿಂದ ‘ಫ್ಲಿಪ್‌ಕಾರ್ಟ್‌’ ತಾಣದಲ್ಲಿ ಬುಕಿಂಗ್‌ ಮಾಡಬಹುದು.

ಪ್ರತಿಕ್ರಿಯಿಸಿ (+)