ಬಿಜೆಪಿ ಅಲೆಗೆ ಬೆದರಿದ ಸಿಎಂ: ಶಾ ಟೀಕೆ

7

ಬಿಜೆಪಿ ಅಲೆಗೆ ಬೆದರಿದ ಸಿಎಂ: ಶಾ ಟೀಕೆ

Published:
Updated:
ಬಿಜೆಪಿ ಅಲೆಗೆ ಬೆದರಿದ ಸಿಎಂ: ಶಾ ಟೀಕೆ

ಬೆಳಗಾವಿ: ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಮೊಟ್ಟಮೊದಲ ಬಾರಿಗೆ ರಣಕಹಳೆ ಮೊಳಗಿಸಿದ ಐತಿಹಾಸಿಕ ತಾಣವಿದು. ಇಲ್ಲಿಗೆ ಮೊದಲ ಬಾರಿಗೆ ಬಂದಿರುವುದು ನನಗೆ ಸಂತಸ ತಂದಿದೆ, ಇದು ಕ್ರಾಂತಿಯ ನೆಲ ಎಂದು ಅಮಿತ್ ಶಾ ಹೇಳಿದರು.

ಈ ಬಾರಿ ಚುನಾವಣಾ ಪ್ರಚಾರ ಚುರುಕಾಗಿ ನಡೆದಿದೆ. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧವಾದ ಅಲೆ ಇದೆ. ಇದರಿಂದಾಗಿ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಬಿಜೆಪಿಯ ಅಲೆಗೆ ಸಿಎಂ ಬೆದರಿದ್ದಾರೆ ಎಂದು ಅಮಿತ್ ಶಾ ಹೇಳಿದರು.

ಸ್ಪಷ್ಟ ಬಹುಮತದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತೇವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry