ವಿಲೀನ, ಸ್ವಾಧೀನ ಪ್ರಕ್ರಿಯೆ ಹೆಚ್ಚಳ

7

ವಿಲೀನ, ಸ್ವಾಧೀನ ಪ್ರಕ್ರಿಯೆ ಹೆಚ್ಚಳ

Published:
Updated:

ನವದೆಹಲಿ: ದೇಶದ ಕಂಪನಿಗಳು ಮಾರ್ಚ್ ತಿಂಗಳಿನಲ್ಲಿ ₹ 9,750 ಕೋಟಿ ಮೌಲ್ಯದ ವಿಲೀನ ಮತ್ತು ಸ್ವಾಧೀನ ಪ್ರಕ್ರಿಯೆ ನಡೆಸಿವೆ.

ಇದರಿಂದ 2018ರ ಮೊದಲ ತ್ರೈಮಾಸಿಕದಲ್ಲಿ (ಜನವರಿ–ಮಾರ್ಚ್‌) ₹1.20 ಲಕ್ಷ ಕೋಟಿ ಮೌಲ್ಯದ ವಿಲೀನ ಮತ್ತು ಸ್ವಾಧೀನ ಪ್ರಕ್ರಿಯೆ ನಡೆದಂತಾಗಿದೆ.

2017ರ ಮೊದಲ ತ್ರೈಮಾಸಿಕದಲ್ಲಿ ಇದು ₹ 1.75 ಲಕ್ಷ ಕೋಟಿ ಇತ್ತು ಎಂದು ಜಾಗತಿಕ ತೆರಿಗೆ, ಲೆಕ್ಕಪತ್ರ ಮತ್ತು ವಿಮಾ ಸಂಸ್ಥೆ ಗ್ರ್ಯಾಂಟ್‌ ಥಾರ್ಟನ್‌ ವರದಿ ನೀಡಿದೆ.

₹ 1.49 ಲಕ್ಷ ಕೋಟಿ ಮೌಲ್ಯದ ವೊಡಾಫೋನ್‌–ಐಡಿಯಾ ವಿಲೀನ ಒಪ್ಪಂದ ಬಿಟ್ಟು, 2017ರ ಮೊದಲ ತ್ರೈಮಾಸಿಕದಲ್ಲಿ ಒಪ್ಪಂದದ ಮೌಲ್ಯ 2.3 ಪಟ್ಟು ಏರಿಕೆ ಕಂಡಿತ್ತು.

2017ರಲ್ಲಿ ಕಂಪನಿಗಳ ವಿಲೀನ ಮತ್ತು ಸ್ವಾಧೀನ ಪ್ರಕ್ರಿಯೆಗಳ ಒಟ್ಟಾರೆ ಮೊತ್ತವು ₹ 3.44 ಲಕ್ಷ ಕೋಟಿ ಇದೆ.

2016ರಲ್ಲಿ ಈ ಪ್ರಕ್ರಿಯೆಗಳ ಒಟ್ಟಾರೆ ಮೊತ್ತವು ₹ 3.76 ಲಕ್ಷ ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ 2017ರಲ್ಲಿ ಅಲ್ಪ‍ ಇಳಿಕೆ ಕಂಡಿದೆ ಎಂದು ಸಂಸ್ಥೆಯು ವರದಿಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry