ಎಂಜಿನ್ ಇಲ್ಲದೇ ಚಲಿಸಿದ ಆರು ಬೋಗಿಗಳು

ಭಾನುವಾರ, ಮಾರ್ಚ್ 24, 2019
32 °C

ಎಂಜಿನ್ ಇಲ್ಲದೇ ಚಲಿಸಿದ ಆರು ಬೋಗಿಗಳು

Published:
Updated:
ಎಂಜಿನ್ ಇಲ್ಲದೇ ಚಲಿಸಿದ ಆರು ಬೋಗಿಗಳು

ಬಾಲೇಶ್ವರ (ಒಡಿಶಾ): ಕಲ್ಲಿದ್ದಲು ತುಂಬಿದ್ದ ಗೂಡ್ಸ್‌ ರೈಲಿನ ಆರು ಬೋಗಿಗಳು ಎಂಜಿನ್‌ ಇಲ್ಲದೇ ಎರಡು ಕಿಲೋ ಮೀಟರ್‌ ತನಕ ಚಲಿಸಿವೆ.

ಧರ್ಮಪುರದಿಂದ ಜೆಮ್‌ಶೆಡ್‌ಪುರ ನಿಲ್ದಾಣಕ್ಕೆ ಶನಿವಾರ ರಾತ್ರಿ ಗೂಡ್ಸ್‌ ರೈಲು ಬಂದಾಗ ಆರು ಬೋಗಿಗಳು ಎಂಜಿನ್‌ ಇಲ್ಲದೆ ಎರಡು ಕಿಲೋ ಮೀಟರ್‌ ಚಲಿಸಿರುವುದು ಗೊತ್ತಾಯಿತು. ಈ ಪ್ರಕರಣದಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ತಾಂತ್ರಿಕ ಕಾರಣಗಳಿಂದ ಆರು ಬೋಗಿಗಳು ಬೇರ್ಪಟ್ಟಿದ್ದವು. ತಕ್ಷಣವೇ ಸಮಸ್ಯೆ ಬಗೆಹರಿಸಲಾಯಿತು’ ಎಂದು ಬಾಲಸೋರ್ ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ಭಾಗ್‌ವತ್‌ ದಾಸ್‌ ತಿಳಿಸಿದ್ದಾರೆ. ವಾರದ ಹಿಂದೆ ಅಹಮದಾಬಾದ್‌– ಪುರಿ ಎಕ್ಸ್‌ಪ್ರೆಸ್‌ ರೈಲು ಎಂಜಿನ್‌ ಇಲ್ಲದೇ 10 ಕಿಲೋ ಮೀಟರ್ ಚಲಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry