ಶನಿವಾರ, ಡಿಸೆಂಬರ್ 14, 2019
20 °C
ದಿನೇಶ್‌ ಕಾರ್ತಿಕ್‌ – ಗೌತಮ್ ಗಂಭೀರ್‌ ನಾಯಕತ್ವದ ತಂಡಗಳ ಮುಖಾಮುಖಿ

ಕೆಕೆಆರ್‌ಗೆ ಡೇರ್ ಡೆವಿಲ್ಸ್ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

ಕೆಕೆಆರ್‌ಗೆ ಡೇರ್ ಡೆವಿಲ್ಸ್ ಸವಾಲು

ಕೋಲ್ಕತ್ತ: ಐಪಿಎಲ್‌ನ ಸೋಮವಾರದ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್ (ಕೆಕೆಆರ್‌) ತಂಡ ಡೆಲ್ಲಿ ಡೇರ್ ಡೆವಿಲ್ಸ್‌ ವಿರುದ್ಧ ಸೆಣಸಲಿದೆ.

ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡಕ್ಕೆ ಎರಡು ಬಾರಿ ಪ್ರಶಸ್ತಿ ಗೆಲ್ಲಿಸಿಕೊಟ್ಟ ಗೌತಮ್ ಗಂಭೀರ್ ಈ ಬಾರಿ ಡೆಲ್ಲಿ ಡೇರ್ ಡೆವಿಲ್ಸ್ ಪಾಲಾಗಿದ್ದಾರೆ. ಆ ತಂಡವನ್ನು ಅವರು ಮುನ್ನಡೆಸುತ್ತಿದ್ದಾರೆ. ಕೋಲ್ಕತ್ತ ತಂಡಕ್ಕೆ ಕಾರ್ತಿಕ್ ನಾಯಕರಾಗಿದ್ದಾರೆ.

ನಿರಂತರ ಎರಡು ಸೋಲು ಕಂಡಿರುವ ಕೆಕೆಆರ್‌ ತಂಡವನ್ನು ಗೆಲುವಿನ ಲಯಕ್ಕೆ ಮರಳಿಸಬೇಕಾದ ಸವಾಲು ಕಾರ್ತಿಕ್‌ ಮೇಲೆ ಇದೆ.

ಶನಿವಾರ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿರುವ ಡೇರ್‌ ಡೆವಿಲ್ಸ್‌ ಗೆಲುವಿನ ಓಟವನ್ನು ಮುಂದುವರಿಸುವ ಭರವಸೆ ಹೊಂದಿದೆ.

ಮೊದಲ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದಿದ್ದ ಕೆಕೆಆರ್‌ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದ ಎದುರು ಸೋತಿತ್ತು. ಡೇರ್ ಡೆವಿಲ್ಸ್‌ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್‌ ವಿರುದ್ಧ ಮತ್ತು ನಂತರ ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಸೋತಿತ್ತು. ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿತ್ತು.

ತವರಿನಲ್ಲಿ ಶಮಿ: ಪತ್ನಿ ದೌರ್ಜನ್ಯ ಪ್ರಕರಣ ದಾಖಲಿಸಿದ ಕಾರಣ ಸಂಕಟಕ್ಕೆ ಸಿಲುಕಿದ ನಂತರ ಇದೇ ಮೊದಲ ಬಾರಿ ಮಹಮ್ಮದ್‌ ಶಮಿ ತವರಿನ ಅಂಗಳದಲ್ಲಿ ಆಡಲು ಇಳಿಯಲಿದ್ದಾರೆ. ‌

ಪ್ರತಿಕ್ರಿಯಿಸಿ (+)