ವಿದೇಶಕ್ಕೆ ತೆರಳಲು ನಟ ಸಲ್ಮಾನ್‌ ಖಾನ್‌ಗೆ ಅನುಮತಿ

ಬುಧವಾರ, ಮಾರ್ಚ್ 20, 2019
31 °C

ವಿದೇಶಕ್ಕೆ ತೆರಳಲು ನಟ ಸಲ್ಮಾನ್‌ ಖಾನ್‌ಗೆ ಅನುಮತಿ

Published:
Updated:
ವಿದೇಶಕ್ಕೆ ತೆರಳಲು ನಟ ಸಲ್ಮಾನ್‌ ಖಾನ್‌ಗೆ ಅನುಮತಿ

ಜೋಧಪುರ: ಪ್ರಚಾರ ಕಾರ್ಯಕ್ರಮಕ್ಕಾಗಿ ವಿದೇಶಕ್ಕೆ ತೆರಳಲು ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರಿಗೆ ಇಲ್ಲಿನ ನ್ಯಾಯಾಲಯ ಅನುಮತಿ ನೀಡಿದೆ.

ನೇಪಾಳ, ಅಮೆರಿಕ ಮತ್ತು ಕೆನಡಾಗೆ ತೆರಳಲು ಅನುಮತಿ ಕೋರಿ ಸಲ್ಮಾನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಚಂದ್ರ ಕುಮಾರ್‌ ಸೊಂಗಾರಾ ನಡೆಸಿದರು.

ಪ್ರವಾಸ ಮತ್ತು ವಿದೇಶದಲ್ಲಿ ವಾಸಿಸುವ ಸ್ಥಳದ ಸಂಪೂರ್ಣ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಬೇಕು ಎಂದು ನ್ಯಾಯಾಧೀಶರು ಸಲ್ಮಾನ್‌ಗೆ ಷರತ್ತು ವಿಧಿಸಿದರು.

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸಲ್ಮಾನ್‌ ಅವರಿಗೆ ಏಪ್ರಿಲ್‌ರ 7ರಂದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜಾಮೀನು ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry