ಬ್ಯಾಡ್ಮಿಂಟನ್‌ ತಂಡದ ಸಾಧನೆ ಅಮೋಘ

7

ಬ್ಯಾಡ್ಮಿಂಟನ್‌ ತಂಡದ ಸಾಧನೆ ಅಮೋಘ

Published:
Updated:
ಬ್ಯಾಡ್ಮಿಂಟನ್‌ ತಂಡದ ಸಾಧನೆ ಅಮೋಘ

ಹೈದರಾಬಾದ್‌: ಕಳೆದ ಕೆಲವು ವರ್ಷಗಳಿಂದ ಭಾರತದ ಬ್ಯಾಡ್ಮಿಂಟನ್‌ ತಂಡದ ಸಾಧನೆ ಗಮನಿಸಿದರೆ, ತಂಡವು ಕೇವಲ ಒಂದಿಬ್ಬರು ಆಟಗಾರರ ಮೇಲೆ ಅವಲಂಬಿತವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಹಿರಿಯ ಬ್ಯಾಡ್ಮಿಂಟನ್ ಆಟಗಾರ ಹಾಗೂ ರಾಷ್ಟ್ರೀಯ ತಂಡದ ಕೋಚ್‌ ಪಿ. ಗೋಪಿಚಂದ್‌ ಹೇಳಿದ್ದಾರೆ.

‘ಭಾರತ ತಂಡ ಈ ಸಲದ ಕಾಮನ್‌ ವೆಲ್ತ್‌ನಲ್ಲಿ ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ಮಾಡಿದೆ. ತಂಡವು ಇಷ್ಟು ಅಮೋಘ ಸಾಮರ್ಥ್ಯ ತೋರುತ್ತದೆ ಎಂಬ ಕಲ್ಪನೆಯು ಇರಲಿಲ್ಲ. ಇಡೀ ತಂಡ ಒಗ್ಗಟ್ಟಾಗಿ ಎದುರಾಳಿಗಳನ್ನು ಎದುರಿಸಿತು. ಹಾಗಾಗಿ ಗೆಲುವು ಸಾಧ್ಯವಾಯಿತು’ ಎಂದು ಅವರು ಅಭಿಪ್ರಾಯಪಟ್ಟರು.

‘ಇದನ್ನು ಹೇಳಲು ನನಗೆ ಹೆಮ್ಮೆಯಾಗುತ್ತದೆ. ಸಾಮಾನ್ಯವಾಗಿ ತಂಡದಲ್ಲಿ ಒಂದಿಬ್ಬರು ಆಟಗಾರರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದರು. 30–40 ವರ್ಷಗಳ ಭಾರತದ ಬ್ಯಾಡ್ಮಿಂಟನ್‌ ಇತಿಹಾಸವನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ. ಆದರೆ, ಇಂದಿನ ಪರಿಸ್ಥಿತಿ ಭಿನ್ನವಾಗಿದೆ. ತಂಡದ ಪ್ರತಿಯೊಬ್ಬ ಆಟಗಾರನು ಪಂದ್ಯ ಗೆಲ್ಲಲು ನೆರವಾಗುತ್ತಿದ್ದಾನೆ’ ಎಂದು ಅವರು ತಿಳಿಸಿದ್ದಾರೆ.

‘ತಂಡ ವಿಭಾಗದಲ್ಲಿ  ನಮ್ಮ ವರು ಶ್ರೇಷ್ಠ ಸಾಧನೆ ತೋರಿದ್ದಾರೆ. ಅವರ ಸಾಧನೆಯು, ಸಿಂಗಲ್ಸ್‌ನಲ್ಲಿ ಆಡಿದ ಆಟಗಾರರ ಮೇಲೆ ಖಂಡಿತ ಪ್ರಭಾವ ಬೀರಿರುತ್ತದೆ’ ಎಂದೂ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry