ಮಂಗಳವಾರ, ಜೂಲೈ 7, 2020
27 °C

ಅನಂತಕುಮಾರ ಹೆಗಡೆ ದೂರಿದಂತೆ ಹತ್ಯೆಗೆ ಹುನ್ನಾರ ನಡೆದಿಲ್ಲ; ಪ್ರಾಥಮಿಕ ತನಿಖಾ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನಂತಕುಮಾರ ಹೆಗಡೆ ದೂರಿದಂತೆ ಹತ್ಯೆಗೆ ಹುನ್ನಾರ ನಡೆದಿಲ್ಲ; ಪ್ರಾಥಮಿಕ ತನಿಖಾ ವರದಿ

ಹಾವೇರಿ: ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನ ಹಲಗೇರಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಂಗಳವಾರ ರಾತ್ರಿ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಬೆಂಗಾವಲು ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್ಐಗೆ ಗಾಯವಾಗಿದೆ.

'ಹಲಗೇರಿಯಿಂದ ಅಡ್ಡರಸ್ತೆಯ ಮೂಲಕ ಶಿವಮೊಗ್ಗಕ್ಕೆ ತೆರಳಲು ಏಕಾಏಕಿ ಲಾರಿ ಚಾಲಕ ತಿರುವು ತೆಗೆದು ಕೊಂಡ ಪರಿಣಾಮ ಅಪಘಾತ ಸಂಭವಿಸಿದೆ. ಆದರೆ, ಸಚಿವರು ದೂರಿದಂತೆ ಯಾವುದೇ ಹುನ್ನಾರಗಳು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿಲ್ಲ. ತನಿಖೆ ಮುಂದುವರಿದಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಪರಶುರಾಂ ತಿಳಿಸಿದರು.

ಲಾರಿ ಚಾಲಕ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಮುತ್ತಿನಕಟ್ಟಿಯ ನಾಸೀರ್ ಅಹ್ಮದ್ ಮೊಫಿನ್. ವಿಶ್ವಾಸ್ ರೋಡ್ ಲೈನ್ ನ ಲಾರಿಯಲ್ಲಿ ಧಾನ್ಯಗಳನ್ನು ಒಯ್ಯತ್ತಿದ್ದನು. ಮೊಬೈಲ್ ನಲ್ಲಿ ಮಾತನಾಡಿಕೊಂಡು ಮುಂದೆ ಬಂದ ಕಾರಣ ಏಕಾಏಕಿ ತಿರುವು ತೆಗೆದು ಕೊಂಡಿರುವುದಾಗಿ ಚಾಲಕ ಪೊಲೀಸರ ಮುಂದೆ ತಿಳಿಸಿದ್ದಾನೆ.

[related]

ಆದಾಗ್ಯೂ, ಮಂಗಳವಾರ ರಾತ್ರಿ ನಡೆದ ಘಟನೆ ಅಪಘಾತವಲ್ಲ. ತನ್ನ ಪ್ರಾಣಕ್ಕೆ ಹಾನಿಯುಂಟು ಮಾಡಲು ನಡೆಸಿದ ಯತ್ನ ಎಂದು ಸಚಿವರು ಶಂಕೆ  ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.