71 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

7
ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಎಂ.ಕೃಷ್ಣಪ್ಪ ಸೇರಿ ಹಲವರ ಉಮೇದುವಾರಿಕೆ

71 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Published:
Updated:
71 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಬೆಂಗಳೂರು: ಗೃಹ ಸಚಿವ ರಾಮಲಿಂಗಾರೆಡ್ಡಿ, ಕೃಷಿ ಸಚಿವ ಕೃಷ್ಣ ಬೈರೇಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೇರಿದಂತೆ ಒಟ್ಟು 71 ಮಂದಿ ಶುಕ್ರವಾರ ನಾಮಪತ್ರ ಸಲ್ಲಿಸಿದರು.

ರಾಜರಾಜೇಶ್ವರಿನಗರ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಮುನಿರತ್ನ, ಜೆಡಿಎಸ್‌ನಿಂದ ಜಿ.ಎಚ್‌.ರಾಮಚಂದ್ರ, ಸ್ವತಂತ್ರ ಅಭ್ಯರ್ಥಿಯಾಗಿ ಎಲ್‌.ವೆಂಕಟರಾಮನ್‌, ಶಿವಾಜಿನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕಟ್ಟಾ ಸುಬ್ರಮಣ್ಯ ನಾಯ್ಡು, ಶಾಂತಿನಗರ ಕ್ಷೇತ್ರದಿಂದ ಬಿಜೆಪಿಯ ಕೆ.ವಾಸುದೇವಮೂರ್ತಿ, ಸ್ವತಂತ್ರ ಅಭ್ಯರ್ಥಿಯಾಗಿ ಸೈಯದ್‌ ಆಸೀಫ್‌ ಬುಖಾರಿ, ಗಾಂಧಿನಗರ ಕ್ಷೇತ್ರದಿಂದ ಕಾಂಗ್ರೆಸ್‌ನ ದಿನೇಶ್‌ ಗುಂಡೂರಾವ್‌, ಜೆಡಿಎಸ್‌ನ ವಿ.ನಾರಾಯಣಸ್ವಾಮಿ, ಸ್ವತಂತ್ರ ಅಭ್ಯರ್ಥಿಯಾಗಿ ವಿ.ನಾಗರಾಜ್‌ ಉಮೇದುವಾರಿಕೆ ಸಲ್ಲಿಸಿದ್ದಾರೆ.

ರಾಜಾಜಿನಗರ ಕ್ಷೇತ್ರದಿಂದ ಬಿಜೆಪಿಯ ಎಸ್‌.ಸುರೇಶ್‌ ಕುಮಾರ್‌, ಕಾಂಗ್ರೆಸ್‌ನ ಜಿ.ಪದ್ಮಾವತಿ, ಚಾಮರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್‌ನ ಜಮೀರ್‌ ಅಹಮದ್‌ ಖಾನ್‌, ಶಿವಸೇನಾ ಪಕ್ಷದ ಎಸ್‌.ರುಕ್ಮಾಂಗದ, ಎಂ.ಇ.ಪಿ.ಯಿಂದ ಸೈಯಿದ್‌ ಆಸ್ಲಾಂ, ಭಾರತೀಯ ಜನಶಕ್ತಿ ಕಾಂಗ್ರೆಸ್‌ನ ಎಸ್‌.ಎನ್‌.ಹರೀಶ್‌ ನಾರಾಯಣ ಗಾಂಧಿ, ಚಿಕ್ಕಪೇಟೆ ಕ್ಷೇತ್ರದಿಂದ ಬಿಜೆಪಿಯ ಬಿ.ಜಿ.ಉದಯ್‌, ಪಕ್ಷೇತರ ಅಭ್ಯರ್ಥಿಯಾಗಿ ಬಸವರಾಜ್‌ ವೈಜನಾಥ್‌ ಜೆಮ್‌ಶೆಟ್ಟಿ, ಸ್ವತಂತ್ರ ಅಭ್ಯರ್ಥಿಗಳಾಗಿ ವಿ.ಕೆ.ಪ್ರವೀಣ್‌, ಇಂಮ್ತಿಯಾಸ್‌ ಪಾಷ ನಾಮಪತ್ರ ಸಲ್ಲಿಸಿದ್ದಾರೆ.

ಕೆ.ಆರ್‌.ಪುರ ಕ್ಷೇತ್ರದಿಂದ ಬಿಜೆಪಿಯ ಎನ್‌.ಎಸ್‌.ನಂದೀಶ್‌ ರೆಡ್ಡಿ, ಜೆಡಿಎಸ್‌ನ ಬಿ.ಎ.ಗೋಪಾಲ, ಸ್ವತಂತ್ರ ಅಭ್ಯರ್ಥಿಗಳಾಗಿ ಬಿ.ಎಸ್‌.ನರೇಂದ್ರ ಬಾಬು, ಕೆ.ಟಿ.ರಾಜ್‌ಕುಮಾರ್‌, ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರದಿಂದ ಜೆಡಿಎಸ್‌ನ ಕೆ.ಗೋಪಾಲಯ್ಯ, ಎಸ್‌.ಪಿ.ಹೇಮಲತಾ, ಬಿಜೆಪಿಯ ಎನ್‌.ಎಲ್‌.ನರೇಂದ್ರ ಬಾಬು, ಕಾಂಗ್ರೆಸ್‌ನ ಎನ್‌.ಗಿರೀಶ್‌ ಗೌಡ ಹಾಗೂ ಡಾ.ಗಿರೀಶ್‌ ಕೆ.ನಾಶಿ, ಮಲ್ಲೇಶ್ವರ ಕ್ಷೇತ್ರದಿಂದ ಕನ್ನಡ ಪಕ್ಷದ ಎಂ.ಬಿ.ಆನಂದ್‌, ಹೆಬ್ಬಾಳ ಕ್ಷೇತ್ರದಿಂದ ಜೆಡಿಎಸ್‌ನ ಹನುಮಂತೇಗೌಡ, ಸ್ವತಂತ್ರ ಅಭ್ಯರ್ಥಿಯಾಗಿ ಉಮಾದೇವಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಪುಲಕೇಶಿನಗರ ಕ್ಷೇತ್ರದಿಂದ ಕಾಂಗ್ರೆಸ್‌ನ ಆರ್‌.ಅಖಂಡ ಶ್ರೀನಿವಾಸಮೂರ್ತಿ, ಸ್ವತಂತ್ರ ಅಭ್ಯರ್ಥಿಯಾಗಿ ಎಂ.ಗುಲ್ಲನ್‌, ಸಿ.ವಿ.ರಾಮನ್‌ನಗರ ಕ್ಷೇತ್ರದಿಂದ ಕಾಂಗ್ರೆಸ್‌ನ ಆರ್‌.ಸಂಪತ್‌ ರಾಜ್‌, ಗೋವಿಂದರಾಜನಗರ ಕ್ಷೇತ್ರದಿಂದ ಬಿಜೆಪಿಯ ವಿ.ಸೋಮಣ್ಣ, ಕಾಂಗ್ರೆಸ್‌ನ ಪ್ರಿಯ ಕೃಷ್ಣ, ವಿಜಯನಗರ ಕ್ಷೇತ್ರದಿಂದ ಕಾಂಗ್ರೆಸ್‌ನ ಎಂ.ಕೃಷ್ಣಪ್ಪ, ಬಿಜೆಪಿಯ ಎಚ್‌.ರವೀಂದ್ರ, ಕನ್ನಡ ಪಕ್ಷದ ಸಿ.ರವಿಕುಮಾರ್‌ ಗೌಡ, ಸ್ವತಂತ್ರ ಅಭ್ಯರ್ಥಿಯಾಗಿ ಎಂ.ಮಲ್ಲಿಕಾರ್ಜುನ, ಬಸವನಗುಡಿ ಕ್ಷೇತ್ರದಿಂದ ಬಿಜೆಪಿಯ ಎಲ್‌.ಎ.ರವಿಸುಬ್ರಹ್ಮಣ್ಯ, ಕಾಂಗ್ರೆಸ್‌ನ ಎಂ.ಬೋರೇಗೌಡ, ಜೆಡಿಎಸ್‌ನ ಕೆ.ಬಾಗೇಗೌಡ, ಆಮ್‌ ಆದ್ಮಿ ಪಕ್ಷದ ಗುಂಡಪ್ಪ ಸೀತಾರಾಮ್‌, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಎಚ್‌.ಎಂ.ರಾಮು, ಪಕ್ಷೇತರ ಅಭ್ಯರ್ಥಿಗಳಾಗಿ ಟಿ.ಎಸ್‌.ಮದುರನಾಥ್‌ ಮತ್ತು ಯೋಗೇಶ್‌ ನಾಮಪತ್ರ ಸಲ್ಲಿಸಿದ್ದಾರೆ.

ಪದ್ಮನಾಭನಗರ ಕ್ಷೇತ್ರದಿಂದ ಜೆಡಿಎಸ್‌ನ ಡಿ.ಕೆ.ಗೋಪಾಲ್‌, ಕಾಂಗ್ರೆಸ್‌ನ ಡಾ.ಬಿ.ಗುರಪ್ಪನಾಯ್ಡು, ಬಿಟಿಎಂ ಬಡಾವಣೆ ಕ್ಷೇತ್ರದಿಂದ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ, ಸ್ವತಂತ್ರ ಅಭ್ಯರ್ಥಿಯಾಗಿ ಪ್ರದೀಪ್‌ ಮೆಂಡೋನ್ಸ, ಜಯನಗರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಗಳಾಗಿ ಮೌಲಾ, ಡಿ.ಮುರುಗೇಶ್‌, ಅಜ್ಮಲ್‌ ಪಾಷ, ಬೊಮ್ಮನಹಳ್ಳಿ ಕ್ಷೇತ್ರದಿಂದ ಬಿಜೆಪಿಯ ಸತೀಶ್‌ ರೆಡ್ಡಿ, ಯಲಹಂಕ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕೆ.ಎಸ್‌.ಚಂದ್ರಶೇಖರ್‌ ರಾವ್‌, ಬ್ಯಾಟರಾಯನಪುರ ಕ್ಷೇತ್ರದಿಂದ ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ಬಿಜೆಪಿಯ ಎ.ರವಿ, ಪಕ್ಷೇತರ ಅಭ್ಯರ್ಥಿಯಾಗಿ ನರೇಂದ್ರ ಕುಮಾರ್‌ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಯಶವಂತಪುರ ಕ್ಷೇತ್ರದಿಂದ ಕಾಂಗ್ರೆಸ್‌ನ ಎಸ್‌.ಟಿ.ಸೋಮಶೇಖರ್‌, ಜೆಡಿಎಸ್‌ನ ಟಿ.ಎನ್‌.ಜವರಾಯಿಗೌಡ, ಪಕ್ಷೇತರ ಅಭ್ಯರ್ಥಿಯಾಗಿ ನಾಗರತ್ನ, ಟಿ.ದಾಸರಹಳ್ಳಿ ಕ್ಷೇತ್ರದಿಂದ ಬಿಜೆಪಿಯ ಎಸ್‌.ಮುನಿರಾಜು, ಜೆಡಿಎಸ್‌ನ ಆರ್‌.ಮಂಜುನಾಥ್‌, ಮಹದೇವಪುರ ಕ್ಷೇತ್ರದಿಂದ ಬಿಜೆಪಿಯ ಅರವಿಂದ ಲಿಂಬಾವಳಿ, ಕಾಂಗ್ರೆಸ್‌ನ ಎ.ಸಿ.ಶ್ರೀನಿವಾಸ, ರಿಪಬ್ಲಿಕನ್‌ ಸೇನೆಯ ಕೆ.ಕೃಷ್ಣ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಎಂ.ಕೃಷ್ಣಪ್ಪ, ಆನೇಕಲ್‌ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸಿ.ನಾರಾಯಣಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ.

***

ಅಭ್ಯರ್ಥಿಗಳ ಆಸ್ತಿ ವಿವರ

ಅಭ್ಯರ್ಥಿ: ಎನ್‌.ಎಸ್‌.ನಂದೀಶ ರೆಡ್ಡಿ

ಕ್ಷೇತ್ರ/ಪಕ್ಷ:ಕೆ.ಆರ್‌.ಪುರ/ ಬಿಜೆಪಿ

ಶಿಕ್ಷಣ:ಪಿ.ಯು.ಸಿ

ಕೈಯಲ್ಲಿರುವ ನಗದು: ₹ 10 ಲಕ್ಷ

ಪತ್ನಿ ಬಳಿ ಇರುವ ನಗದು:–

ಚರಾಸ್ತಿ ಮೌಲ್ಯ: ₹ 47.92 ಕೋಟಿ

ಪತ್ನಿ ಚರಾಸ್ತಿ ಮೌಲ್ಯ:₹ 5.87 ಕೋಟಿ

ಸ್ಥಿರಾಸ್ತಿ ಮೌಲ್ಯ: ₹ 252.57 ಕೋಟಿ

ಪತ್ನಿಯ ಸ್ಥಿರಾಸ್ತಿ ಮೌಲ್ಯ: ₹ 2.52 ಕೋಟಿ

ಸಾಲ:₹ 35.22 ಕೋಟಿ

ಪತ್ನಿ ಸಾಲ: ಇಲ್ಲ

ಪ್ರಕರಣಗಳು: 13

––

ಅಭ್ಯರ್ಥಿ: ಎಚ್‌.ಗೋಪಾಲಯ್ಯ

ಕ್ಷೇತ್ರ/ಪಕ್ಷ:ಮಹಾಲಕ್ಷ್ಮಿ ಬಡಾವಣೆ/ ಜೆಡಿಎಸ್‌

ಶಿಕ್ಷಣ:ಬಿಎಸ್ಸಿ

ಕೈಯಲ್ಲಿರುವ ನಗದು: ₹ 26,00

ಪತ್ನಿ ಬಳಿ ಇರುವ ನಗದು: ₹ 31,800

ಚರಾಸ್ತಿ ಮೌಲ್ಯ: ₹ 49.26 ಲಕ್ಷ

ಪತ್ನಿ ಚರಾಸ್ತಿ ಮೌಲ್ಯ:₹4.36 ಕೋಟಿ

ಮೊದಲ ಮಗನ ಚರಾಸ್ತಿ: ₹ 3.77 ಲಕ್ಷ

ಎರಡನೇ ಮಗನ ಚರಾಸ್ತಿ: ₹3.95 ಲಕ್ಷ

ಅಭ್ಯರ್ಥಿಯ ಸ್ಥಿರಾಸ್ತಿ: ₹2.96 ಕೋಟಿ

ಪತ್ನಿಯ ಸ್ಥಿರಾಸ್ತಿ ಮೌಲ್ಯ: ₹ 2.52 ಕೋಟಿ

ಮಕ್ಕಳ  ಸ್ಥಿರಾಸ್ತಿ: ಇಲ್ಲ

ಸಾಲ:₹ 1.13 ಕೋಟಿ

ಪತ್ನಿ ಸಾಲ: ₹2.61 ಕೋಟಿ

–––

ಅಭ್ಯರ್ಥಿ: ಜಿ.ಎಚ್‌.ರಾಮಚಂದ್ರ

ಕ್ಷೇತ್ರ/ಪಕ್ಷ:ರಾಜರಾಜೇಶ್ವರಿನಗರ/ ಜೆಡಿಎಸ್‌

ಶಿಕ್ಷಣ:ಪಿ.ಯು.ಸಿ

ಕೈಯಲ್ಲಿರುವ ನಗದು: ₹ 1.83 ಲಕ್ಷ

ಪತ್ನಿ ಬಳಿ ಇರುವ ನಗದು: ₹ 1.48 ಲಕ್ಷ

ಮಗನ ಬಳಿ ಇರುವ ನಗದು: ₹ 2.11 ಲಕ್ಷ

ಚರಾಸ್ತಿ ಮೌಲ್ಯ: ₹ 91.35 ಲಕ್ಷ

ಪತ್ನಿ ಚರಾಸ್ತಿ ಮೌಲ್ಯ:₹ 66.29 ಲಕ್ಷ

ಮಗನ ಚರಾಸ್ತಿ: ₹ 69.36 ಲಕ್ಷ

ಸ್ಥಿರಾಸ್ತಿ ಮೌಲ್ಯ: ₹ 35.62 ಕೋಟಿ

ಪತ್ನಿಯ ಸ್ಥಿರಾಸ್ತಿ ಮೌಲ್ಯ: ₹ 40.09 ಕೋಟಿ

ಸಾಲ: 46.49 ಲಕ್ಷ

ಪತ್ನಿಯ ಸಾಲ:₹ 1.27 ಕೋಟಿ

–––

ಅಭ್ಯರ್ಥಿ– ಕಟ್ಟಾ ಸುಬ್ರಹ್ಮಣ್ಯ ನಾಯ್ಡು

ಕ್ಷೇತ್ರ/ಪಕ್ಷ– ಶಿವಾಜಿನಗರ/ ಬಿಜೆಪಿ

ಶಿಕ್ಷಣ– ಹತ್ತನೇ ತರಗತಿ

ಕೈಯಲ್ಲಿರುವ ನಗದು– ₹3.77 ಲಕ್ಷ

ಪತ್ನಿಯ ಬಳಿಯಿರುವ ನಗದು– ₹14.23 ಲಕ್ಷ

ಚರಾಸ್ತಿ ಮೌಲ್ಯ– ₹2.94 ಕೋಟಿ

ಪತ್ನಿ ಹೆಸರಲ್ಲಿರುವ ಚರಾಸ್ತಿ ಮೌಲ್ಯ–₹7.04 ಲಕ್ಷ

ಸ್ಥಿರಾಸ್ತಿ ಮೌಲ್ಯ–₹8.73 ಕೋಟಿ

ಪತ್ನಿ ಹೆಸರಲ್ಲಿರುವ ಸ್ಥಿರಾಸ್ತಿ ಮೌಲ್ಯ– ₹72 ಕೋಟಿ

ಸಾಲದ ಮೊತ್ತ– ₹22.83 ಲಕ್ಷ

ಪತ್ನಿಯ ಸಾಲ– ₹22.83 ಕೋಟಿ

ಅಪರಾಧ ಪ್ರಕರಣಗಳು:₹ 2

--

ಅಭ್ಯರ್ಥಿ– ವೈ.ಎ. ನಾರಾಯಣಸ್ವಾಮಿ

ಕ್ಷೇತ್ರ/ಪಕ್ಷ– ಹೆಬ್ಬಾಳ/ ಬಿಜೆಪಿ

ಶಿಕ್ಷಣ– ಬಿ.ಇ

ಕೈಯಲ್ಲಿರುವ ನಗದು– ₹13.06 ಲಕ್ಷ

ಪತ್ನಿಯ ಬಳಿಯಿರುವ ನಗದು– ₹8 ಲಕ್ಷ

ಚರಾಸ್ತಿ ಮೌಲ್ಯ– ₹1.61 ಕೋಟಿ

ಪತ್ನಿ ಹೆಸರಲ್ಲಿರುವ ಚರಾಸ್ತಿ ಮೌಲ್ಯ–₹1.14 ಲಕ್ಷ

ಸ್ಥಿರಾಸ್ತಿ ಮೌಲ್ಯ–₹11.24 ಕೋಟಿ

ಪತ್ನಿ ಹೆಸರಲ್ಲಿರುವ ಸ್ಥಿರಾಸ್ತಿ ಮೌಲ್ಯ– ₹4.73 ಕೋಟಿ

ಸಾಲದ ಮೊತ್ತ– ₹2.94 ಲಕ್ಷ

ಪತ್ನಿಯ ಸಾಲ– ₹9.45 ಕೋಟಿ

--

ಅಭ್ಯರ್ಥಿ– ಆರ್.ಸಂಪತ್‌ ರಾಜ್‌

ಕ್ಷೇತ್ರ/ಪಕ್ಷ– ಸಿ.ವಿ.ರಾಮನ್‌ ನಗರ/ಕಾಂಗ್ರೆಸ್‌

ಶಿಕ್ಷಣ– ಪಿಯುಸಿ

ಕೈಯಲ್ಲಿರುವ ನಗದು– ₹90 ಸಾವಿರ

ಪತ್ನಿಯ ಬಳಿಯಿರುವ ನಗದು– ₹15 ಸಾವಿರ

ಚರಾಸ್ತಿ ಮೌಲ್ಯ– ₹1.16 ಕೋಟಿ

ಪತ್ನಿ ಹೆಸರಲ್ಲಿರುವ ಚರಾಸ್ತಿ ಮೌಲ್ಯ– ₹24.7 ಲಕ್ಷ

ಸ್ಥಿರಾಸ್ತಿ ಮೌಲ್ಯ– ₹30.46 ಕೋಟಿ

ಪತ್ನಿ ಹೆಸರಲ್ಲಿರುವ ಸ್ಥಿರಾಸ್ತಿ ಮೌಲ್ಯ–  ₹1.30 ಕೋಟಿ

ಸಾಲದ ಮೊತ್ತ–  ₹4 ಕೋಟಿ

ಪತ್ನಿಯ ಸಾಲ– ಇಲ್ಲ

–––

ಅಭ್ಯರ್ಥಿ: ಎಲ್‌.ಎ.ರವಿಸುಬ್ರಹ್ಮಣ್ಯ

ಪಕ್ಷ/ಕ್ಷೇತ್ರ: ಬಿಜೆಪಿ, ಬಸವನಗುಡಿ

ಕೈಲಿರುವ ನಗದು: ₹ 2.30 ಲಕ್ಷ

ವಾಹನಗಳು: 2 ಕಾರು, ಒಂದು ಟ್ರ್ಯಾಕ್ಟರ್

ಆಭರಣದ ಮೌಲ್ಯ: ₹ 10.48 ಲಕ್ಷ

‌ಚರಾಸ್ತಿ: ₹ 2.94 ಕೋಟಿ. ಪತ್ನಿ ಹೆಸರಿನಲ್ಲಿ ₹ 1.42 ಕೋಟಿ

ಸ್ಥಿರಾಸ್ತಿ: ₹ 1.55 ಕೋಟಿ, ಪತ್ನಿ ಹೆಸರಿನಲ್ಲಿ ₹ 27 ಲಕ್ಷ

ಸಾಲ: ₹ 2.03 ಕೋಟಿ. ಪತ್ನಿ ಹೆಸರಿನಲ್ಲಿ ₹ 94.77 ಲಕ್ಷ

ವಿದ್ಯಾರ್ಹತೆ: ಬಿಎ, ಎಂಬಿಎ

–––

ಅಭ್ಯರ್ಥಿ: ಕೆ.ಬಾಗೇಗೌಡ

ಪಕ್ಷ/ಕ್ಷೇತ್ರ: ಜೆಡಿಎಸ್, ಬಸವನಗುಡಿ

ಕೈಲಿರುವ ನಗದು: ₹ 10.50 ಲಕ್ಷ

ವಾಹನಗಳು: 4 ಎಸ್‌ಯುವಿ, 1 ಸರಕು ಸಾಗಣೆ ವಾಹನ

ಆಭರಣದ ಮೌಲ್ಯ: ₹ 42.44 ಲಕ್ಷ. ಪತ್ನಿ ಬಳಿ ₹ 87 ಲಕ್ಷ

ಚರಾಸ್ತಿ: ₹ 86.34 ಕೋಟಿ. ಪತ್ನಿ ಹೆಸರಿನಲ್ಲಿ ₹ 4.37 ಕೋಟಿ

ಸ್ಥಿರಾಸ್ತಿ: ₹ 212.83 ಕೋಟಿ. ಪತ್ನಿ ಹೆಸರಿನಲ್ಲಿ ₹ 16.45 ಕೋಟಿ

ಸಾಲ: ₹ 55.48 ಕೋಟಿ

ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ

–––

ಅಭ್ಯರ್ಥಿ: ವಿ.ಕೆ.ಗೋಪಾಲ್

ಪಕ್ಷ/ಕ್ಷೇತ್ರ: ಜೆಡಿಎಸ್, ಪದ್ಮನಾಭನಗರ

ಕೈಯಲ್ಲಿರುವ ನಗದು: ₹ 3.92 ಲಕ್ಷ

ವಾಹನಗಳು: 2 ಜೆಸಿಬಿ, 8 ಟಿಪ್ಪರ್, 7 ಕಾರು, 4 ಟ್ರ್ಯಾಕ್ಟರ್, 2 ಲಾರಿ

ಆಭರಣದ ಮೌಲ್ಯ: ₹ 38 ಲಕ್ಷ. ಪತ್ನಿ ಬಳಿ ₹ 25 ಲಕ್ಷ

ಚರಾಸ್ತಿ: ₹ 17.78 ಕೋಟಿ. ಪತ್ನಿ ಹೆಸರಿನಲ್ಲಿ ₹ 7.38 ಕೋಟಿ

ಸ್ಥಿರಾಸ್ತಿ: ₹ 10 ಕೋಟಿ. ಪತ್ನಿ ಹೆಸರಿನಲ್ಲಿ ₹ 11.33 ಕೋಟಿ

ಸಾಲ: ₹ 23.15 ಕೋಟಿ

ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ (ಅನುತ್ತೀರ್ಣ)

–––

ಅಭ್ಯರ್ಥಿ: ರಾಮಲಿಂಗಾರೆಡ್ಡಿ

‌ಪಕ್ಷ/ಕ್ಷೇತ್ರ: ಕಾಂಗ್ರೆಸ್, ಬಿಟಿಎಂ ಲೇಔಟ್

ಕೈಯಲ್ಲಿರುವ ನಗದು: ₹ 1.56 ಲಕ್ಷ

ವಾಹನಗಳು: 2 ಕಾರು

ಆಭರಣದ ಮೌಲ್ಯ: ₹ 44.48 ಲಕ್ಷ

ಚರಾಸ್ತಿ: ₹ 17.41 ಕೋಟಿ, ಪತ್ನಿ ಹೆಸರಿನಲ್ಲಿ ₹ 5.43 ಕೋಟಿ, ಮಗನ ಹೆಸರಿನಲ್ಲಿ ₹ 34.11 ಲಕ್ಷ

ಸ್ಥಿರಾಸ್ತಿ: ₹ 37.21 ಕೋಟಿ. ಪತ್ನಿ ಹೆಸರಿನಲ್ಲಿ ₹ 6.20 ಕೋಟಿ

ಸಾಲ: ₹ 15.74 ಕೋಟಿ. ಪತ್ನಿ–ಮಗನ ಹೆಸರಿನಲ್ಲಿ ₹ 2.49 ಕೋಟಿ

ವಿದ್ಯಾರ್ಹತೆ: ಬಿ.ಎಸ್ಸಿ

–––

ಅಭ್ಯರ್ಥಿ: ಅರವಿಂದ ಲಿಂಬಾವಳಿ

ಪಕ್ಷ/ಕ್ಷೇತ್ರ: ಬಿಜೆಪಿ, ಮಹದೇವಪುರ

ಕೈಯಲ್ಲಿರುವ ನಗದು: ₹ 50,000

ವಾಹನಗಳು: 2 ಕಾರು

ಆಭರಣದ ಮೌಲ್ಯ: ₹ 3.60 ಲಕ್ಷ. ಪತ್ನಿ ಬಳಿ ₹ 93 ಲಕ್ಷ

ಚರಾಸ್ತಿ: ₹ 4.37 ಕೋಟಿ. ಪತ್ನಿ ಹೆಸರಿನಲ್ಲಿ ₹ 4.37 ಕೋಟಿ, ಮಕ್ಕಳ ಹೆಸರಿನಲ್ಲಿ ₹ 51 ಲಕ್ಷ

ಸ್ಥಿರಾಸ್ತಿ: ₹ 4.15 ಕೋಟಿ. ಪತ್ನಿ ಹೆಸರಿನಲ್ಲಿ ₹ 7.04 ಕೋಟಿ

ಸಾಲ: ₹ 2.66 ಕೋಟಿ. ಪತ್ನಿ ಹೆಸರಿನಲ್ಲಿ ₹ 70 ಲಕ್ಷ

ವಿದ್ಯಾರ್ಹತೆ: ಬಿಇ

----

ಅಭ್ಯರ್ಥಿ; ಸಿ. ನಾರಾಯಣಸ್ವಾಮಿ

ಪಕ್ಷ/ ಕ್ಷೇತ್ರ; ಸ್ವತಂತ್ರ/ ಆನೇಕಲ್‌

ಶಿಕ್ಷಣ; ಎಸ್‌ಎಸ್‌ಎಲ್‌ಸಿ

ಕೈಯಲ್ಲಿರುವ ನಗದು; ₹20,000

ಪತ್ನಿಯ ಬಳಿ ಇರುವ ನಗದು; ₹5000

ಚರಾಸ್ತಿ ಮೌಲ್ಯ; ₹12.60 ಲಕ್ಷ

ಪತ್ನಿ ಬಳಿಯಿರುವ ಚರಾಸ್ತಿ ₹3.5 ಲಕ್ಷ

ಸ್ಥಿರಾಸ್ತಿ ಮೌಲ್ಯ; ₹ 40 ಲಕ್ಷ

ಪತ್ನಿ ಹೆಸರಲ್ಲಿರುವ ಸ್ಥಿರಾಸ್ತಿ; ₹ 50 ಸಾವಿರ

ಸಾಲ; ₹14 ಲಕ್ಷ

ಪತ್ನಿಯ ಹೆಸರಲ್ಲಿರುವ ಸಾಲ; ₹ 17 ಲಕ್ಷ

––––

ಅಭ್ಯರ್ಥಿ; ಸತೀಶ್‌ ರೆಡ್ಡಿ

ಪಕ್ಷ/ ಕ್ಷೇತ್ರ; ಬೊಮ್ಮನಹಳ್ಳಿ

ಶಿಕ್ಷಣ; ಎಸ್‌ಎಸ್‌ಎಲ್‌ಸಿ

ಕೈಯಲ್ಲಿರುವ ನಗದು; ₹10 ಲಕ್ಷ

ಪತ್ನಿ ಬಳಿ; ₹5 ಲಕ್ಷ

ಚರಾಸ್ತಿ ಮೌಲ್ಯ; ₹ 2.20 ಕೋಟಿ

ಪತ್ನಿಯ ಚರಾಸ್ತಿ ಮೌಲ್ಯ; ₹57, 61‌

ಸ್ಥಿರಾಸ್ತಿ ಮೌಲ್ಯ; ₹56.34 ಕೋಟಿ

ಪತ್ನಿ ಬಳಿ ಇರುವ ಸ್ಥಿರಾಸ್ತಿ ಮೌಲ್ಯ; ₹ 4.31 ಕೋಟಿ

ಸಾಲದ ಮೊತ್ತ; 13.55 ಕೋಟಿ

ಆಭರಣ; 650 ಗ್ರಾಂ ಚಿನ್ನ, 20 ಕೆಜಿ ಬೆಳ್ಳಿ

‍ಪತ್ನಿ ಬಳಿ; 1.8  ಕೆ.ಜಿ. ಚಿನ್ನ, 30 ಕೆ.ಜಿ ಬೆಳ್ಳಿ

ವಾಹನ: 2 ಎಸ್‌ಯುವಿ

ಪತ್ನಿ ಬಳಿ; 1 ಎಸ್‌ಯುವಿ

–––

ಅಭ್ಯರ್ಥಿ; ಜಮೀರ್‌ ಅಹಮದ್‌ ಖಾನ್‌

ಕ್ಷೇತ್ರ/ಪಕ್ಷ;ಚಾಮರಾಜಪೇಟೆ/ಕಾಂಗ್ರೆಸ್‌

ಕೈಯಲ್ಲಿರುವ ನಗದು;₹2.40 ಲಕ್ಷ

ಪತ್ನಿ ಬಳಿ ಇರುವ ನಗದು;₹45 ಸಾವಿರ

ಚರಾಸ್ತಿ ಮೌಲ್ಯ;₹58.81 ಲಕ್ಷ

ಪತ್ನಿ ಚರಾಸ್ತಿ ಮೌಲ್ಯ;₹18.93 ಲಕ್ಷ

ಸ್ಥಿರಾಸ್ತಿ ಮೌಲ್ಯ;₹39.34 ಕೋಟಿ

ಸಾಲ;₹22.78 ಕೋಟಿ

========

ಅಭ್ಯರ್ಥಿ; ಪ್ರಿಯಕೃಷ್ಣ

ಕ್ಷೇತ್ರ/ಪಕ್ಷ;ಗೋವಿಂದರಾಜನಗರ/ಕಾಂಗ್ರೆಸ್‌

ಕೈಯಲ್ಲಿರುವ ನಗದು;₹1.76 ಲಕ್ಷ

ಚರಾಸ್ತಿ ಮೌಲ್ಯ;₹840.43 ಕೋಟಿ

ಕಾರುಗಳು;18

ಸ್ಥಿರಾಸ್ತಿ ಮೌಲ್ಯ;₹160.10 ಕೋಟಿ

ಸಾಲ;₹802.74 ಕೋಟಿ

=======

ಅಭ್ಯರ್ಥಿ; ವಿ.ಸೋಮಣ್ಣ

ಕ್ಷೇತ್ರ/ಪಕ್ಷ;ಗೋವಿಂದರಾಜನಗರ/ಬಿಜೆಪಿ

ಕೈಯಲ್ಲಿರುವ ನಗದು;₹12.05 ಲಕ್ಷ

ಪತ್ನಿ ಬಳಿ ಇರುವ ನಗದು;₹3.12 ಲಕ್ಷ

ಚರಾಸ್ತಿ ಮೌಲ್ಯ;₹4.28 ಕೋಟಿ

ಪತ್ನಿ ಚರಾಸ್ತಿ ಮೌಲ್ಯ;₹8.35 ಕೋಟಿ

ಸ್ಥಿರಾಸ್ತಿ ಮೌಲ್ಯ;₹4.46 ಕೋಟಿ

ಪತ್ನಿಯ ಸ್ಥಿರಾಸ್ತಿ ಮೌಲ್ಯ;₹35.82 ಕೋಟಿ

ಸಾಲ;₹1.50 ಕೋಟಿ

ಪತ್ನಿಯ ಸಾಲ;₹67 ಲಕ್ಷ

============

ಅಭ್ಯರ್ಥಿ; ಎಸ್‌.ಸುರೇಶ್‌ ಕುಮಾರ್‌

ಕ್ಷೇತ್ರ/ಪಕ್ಷ;ರಾಜಾಜಿನಗರ/ಬಿಜೆಪಿ

ಕೈಯಲ್ಲಿರುವ ನಗದು;₹3 ಲಕ್ಷ

ಪತ್ನಿ ಬಳಿ ಇರುವ ನಗದು;₹2 ಲಕ್ಷ

ಚರಾಸ್ತಿ ಮೌಲ್ಯ;₹28.19 ಲಕ್ಷ

ಪತ್ನಿ ಚರಾಸ್ತಿ ಮೌಲ್ಯ;₹22.08 ಲಕ್ಷ

ಸ್ಥಿರಾಸ್ತಿ ಮೌಲ್ಯ;₹3 ಕೋಟಿ

––––

ಅಭ್ಯರ್ಥಿ; ದಿನೇಶ್‌ ಗುಂಡೂರಾವ್‌

ಕ್ಷೇತ್ರ/ಪಕ್ಷ;ಗಾಂಧಿನಗರ/ಕಾಂಗ್ರೆಸ್‌

ಶಿಕ್ಷಣ;ಬಿ.ಇ

ಕೈಯಲ್ಲಿರುವ ನಗದು;₹54 ಸಾವಿರ

ಪತ್ನಿ ಬಳಿ ಇರುವ ನಗದು;₹14 ಸಾವಿರ

ಚರಾಸ್ತಿ ಮೌಲ್ಯ;₹65.56 ಲಕ್ಷ

ಪತ್ನಿ ಚರಾಸ್ತಿ ಮೌಲ್ಯ;₹50.55 ಲಕ್ಷ

ಸ್ಥಿರಾಸ್ತಿ ಮೌಲ್ಯ;₹23 ಕೋಟಿ

ಪತ್ನಿಯ ಸ್ಥಿರಾಸ್ತಿ ಮೌಲ್ಯ;₹3 ಕೋಟಿ

ಸಾಲ;₹45.50 ಲಕ್ಷ

ಪತ್ನಿಯ ಸಾಲ;₹70.14 ಲಕ್ಷ

****

ಅಭ್ಯರ್ಥಿ; ವಿ.ನಾಗರಾಜ್‌

ಕ್ಷೇತ್ರ/ಪಕ್ಷ;ಗಾಂಧಿನಗರ/ಪಕ್ಷೇತರ

ಕೈಯಲ್ಲಿರುವ ನಗದು;₹1 ಲಕ್ಷ

ಪತ್ನಿ ಬಳಿ ಇರುವ ನಗದು;₹50 ಸಾವಿರ

ಚರಾಸ್ತಿ ಮೌಲ್ಯ;₹4.10 ಲಕ್ಷ

ಪತ್ನಿ ಚರಾಸ್ತಿ ಮೌಲ್ಯ;₹6.30 ಲಕ್ಷ

ಸ್ಥಿರಾಸ್ತಿ ಮೌಲ್ಯ;₹2.63 ಕೋಟಿ

ಪತ್ನಿಯ ಸ್ಥಿರಾಸ್ತಿ ಮೌಲ್ಯ;₹1.01 ಕೋಟಿ

ಸಾಲ;₹46.48 ಲಕ್ಷ

ಪ್ರಕರಣಗಳು: 15

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry