ಪದಕದತ್ತ ಭಾರತದ ಶೂಟರ್‌ಗಳ ಚಿತ್ತ

7

ಪದಕದತ್ತ ಭಾರತದ ಶೂಟರ್‌ಗಳ ಚಿತ್ತ

Published:
Updated:
ಪದಕದತ್ತ ಭಾರತದ ಶೂಟರ್‌ಗಳ ಚಿತ್ತ

ಚಾಂಗ್‌ವೊನ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮೋಡಿ ಮಾಡಿದ್ದ ಭಾರತದ ಶೂಟರ್‌ಗಳು ಭಾನುವಾರದಿಂದ ನಡೆಯುವ ಐಎಸ್‌ಎಸ್‌ಎಫ್‌ ಎರಡನೇ ಹಂತದ ವಿಶ್ವಕಪ್‌ ಶೂಟಿಂಗ್‌ನಲ್ಲೂ ಪದಕಗಳ ಬೇಟೆಯಾಡಲು ಸಜ್ಜಾಗಿದ್ದಾರೆ.

ಚಾಂಗ್‌ವೊನ್‌ ಶೂಟಿಂಗ್‌ ಕೇಂದ್ರದಲ್ಲಿ ರೈಫಲ್‌, ಪಿಸ್ತೂಲ್‌ ಮತ್ತು ಶಾಟ್‌ಗನ್‌ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು ಭಾರತದ 38 ಮಂದಿ ಶೂಟರ್‌ಗಳು ಕಣಕ್ಕಿಳಿಯಲಿದ್ದಾರೆ.

ಭಾನುವಾರ, ಪುರುಷರ ಮತ್ತು ಮಹಿಳೆಯರ 10 ಮೀಟರ್ಸ್‌ ಏರ್‌ ರೈಫಲ್‌ ಫೈನಲ್‌ ನಿಗದಿಯಾಗಿದೆ. ಇದರಲ್ಲಿ ಭಾರತದ ರವಿಕುಮಾರ್‌, ದೀಪಕ್‌ ಕುಮಾರ್‌ ಅರ್ಜುನ್‌ ಬಬುತಾ, ಅಪೂರ್ವಿ ಚಾಂಡೇಲಾ, ಅಂಜುಮ್‌ ಮೌದ್ಗಿಲ್‌ ಮತ್ತು ಮೆಹುಲಿ ಘೋಷ್‌ ಭಾಗವಹಿಸಲಿದ್ದಾರೆ.

ಈ ಕೂಟದಲ್ಲಿ ಒಟ್ಟು 70 ದೇಶಗಳ 850 ಶೂಟರ್‌ಗಳು ಪದಕಗಳಿಗಾಗಿ ಪೈಪೋಟಿ ನಡೆಸಲಿದ್ದಾರೆ. ಏಪ್ರಿಲ್‌ 30 ರಂದು ಪುರುಷರ ಸ್ಕೀಟ್‌ ವಿಭಾಗದ ಫೈನಲ್‌ ಆಯೋಜನೆಗೊಂಡಿದೆ. ಅದೇ ದಿನ ಸಮಾರೋಪ ಸಮಾರಂಭ ನಡೆಯಲಿದೆ.

ಮೆಕ್ಸಿಕೊದಲ್ಲಿ ನಡೆದಿದ್ದ ಮೊದಲ ಹಂತದ ವಿಶ್ವಕಪ್‌ನ ಪದಕ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಗಳಿಸಿತ್ತು. ಭಾರತದ ಶೂಟರ್‌ಗಳು ಒಟ್ಟು 9 ಪದಕಗಳನ್ನು ಜಯಿಸಿದ್ದರು. ಇದರಲ್ಲಿ ನಾಲ್ಕು ಚಿನ್ನ ಸೇರಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry