ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನಶೀಲರ ಬದುಕು ಬದಲಿಸಬಲ್ಲ ಪಂಚತಂತ್ರ

ಸಾಂಪ್ರದಾಯಿಕ ಕೋರ್ಸ್‍ಗಳಾಚೆಗಿನ ಕಲಿಕೆಯ ಹಲವು ಮಾರ್ಗಗಳು, ಇಷ್ಟಪಟ್ಟು ಓದಿದರೆ ಭವಿಷ್ಯ ಭದ್ರ
Last Updated 28 ಏಪ್ರಿಲ್ 2019, 4:48 IST
ಅಕ್ಷರ ಗಾತ್ರ

ಯಾವುದೋ ಒಂದು ಪದವಿ ಪಡೆದರೆ ಸಾಕು, ಉದ್ಯೋಗ ಸಿಕ್ಕಿಬಿಡುತ್ತದೆ ಎಂಬ ನಮ್ಮ ಯುವಕರ ಸಾಂಪ್ರದಾಯಿಕ ಮನಃಸ್ಥಿತಿ ಬದಲಾಗುತ್ತಿದೆ. ಓದಿನ ಬಳಿಕ ನೌಕರಿ ಸಿಗುತ್ತದೆಯೇ ಎನ್ನುವುದನ್ನು ಅವರು ಗಂಭೀರವಾಗಿ ಯೋಚಿಸುತ್ತಿದ್ದಾರೆ. ಸಮೀಕ್ಷೆಗಳ ಪ್ರಕಾರ ಶೇ 47ರಷ್ಟು ಭಾರತೀಯ ಪದವೀಧರರು ಮಾತ್ರ ಉದ್ಯೋಗಾರ್ಹತೆ ಪಡೆದುಕೊಂಡಿದ್ದಾರೆ. ಹೀಗಾಗಿ ಉದ್ಯೋಗಾರ್ಹತೆ ಹೆಚ್ಚಿಸುವ ಕೋರ್ಸುಗಳಿಗೆ ಇಂದು ಹೆಚ್ಚಿನ ಬೇಡಿಕೆ.

ಪಿಯುಸಿ ಬಳಿಕ ಬಿಎ/ ಬಿಕಾಂ/ ಬಿಎಸ್ಸಿ ಇಲ್ಲವೇ ಎಂಜಿನಿಯರಿಂಗ್-ಮೆಡಿಕಲ್ ಪದವಿ ಎಂಬ ಸೀಮಿತ ಚೌಕಟ್ಟಿನಿಂದ ಈಚೆ ಬಂದು ಹೊಸ ಸಾಧ್ಯತೆಗಳತ್ತ ನಮ್ಮ ಯುವಕರು ಯೋಚಿಸುವ ಕಾಲ ಬಂದಿದೆ. ಇಲ್ಲಿ ಅಂತಹ ಐದು ಹೊಸ ಕ್ಷೇತ್ರಗಳ ವಿವರಗಳನ್ನು ನೀಡಲಾಗಿದೆ. ಕಷ್ಟಪಟ್ಟು ಓದುವುದಕ್ಕಿಂತಲೂ ಇಷ್ಟಪಟ್ಟು ಓದಿದರೆ ಭವಿಷ್ಯ ಭದ್ರ ಎಂದು ಯೋಚಿಸುವ ಸೃಜನಶೀಲ ಮನಸ್ಸುಳ್ಳವರಿಗೆ ಹೇಳಿ ಮಾಡಿಸಿದ ಕೋರ್ಸ್‌ಗಳು ಇಲ್ಲಿವೆ.

ಫ್ಯಾಷನ್/ಅಪಾರೆಲ್/ಟೆಕ್ಸ್‌ಟೈಲ್ ಡಿಸೈನಿಂಗ್
ಸಾಮಾನ್ಯ ಪೇಟೆಗಳಿಂದ ತೊಡಗಿ ಮಹಾನಗರಗಳವರೆಗೆ ದಿನೇದಿನೇ ಹೆಚ್ಚುತ್ತಲೇ ಇರುವ ವ್ಯಾಪಾರ ಬಟ್ಟೆಬರೆಗಳದ್ದು. ಆಬಾಲವೃದ್ಧರಾದಿಯಾಗಿ ಎಲ್ಲ ವಯಸ್ಸಿನ ಮಂದಿಯನ್ನೂ ಸೆಳೆಯುವ ಈ ಅಂಗಡಿಗಳಿಗೆ ಬೇಡಿಕೆ ಕಡಿಮೆಯಾದದ್ದೇ ಇಲ್ಲ. ಹೀಗಾಗಿ ಫ್ಯಾಷನ್ ಅಥವಾ ಟೆಕ್ಸ್‌ಟೈಲ್ ಡಿಸೈನಿಂಗ್ ಎಂದೂ ಜನಪ್ರಿಯತೆಯನ್ನು ಕಳೆದುಕೊಳ್ಳದ ಕ್ಷೇತ್ರ. ಜನ ಸದಾ ಹೊಸತಿಗೆ ಹಾತೊರೆಯುವ ಈ ಕಾಲದಲ್ಲಿ ಗ್ರಾಹಕರ ಅಭಿರುಚಿಗೆ ಅನುಗುಣವಾದ ಹೊಸ ಮಾದರಿಯ ಉಡುಗೆ-ತೊಡುಗೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಷ್ಟೂ ಸಾಲದು. ಕ್ರಿಯಾಶೀಲ ಯುವಕ-ಯುವತಿಯರಿಗೆ ಇದು ಹೇಳಿ ಮಾಡಿಸಿದ ಕ್ಷೇತ್ರ. ಫ್ಯಾಷನ್ ಡಿಸೈನ್ ಮತ್ತು ಸಂಬಂಧಿತ ವಿಷಯಗಳಲ್ಲಿ ಸರ್ಟಿಫಿಕೇಟ್, ಡಿಪ್ಲೊಮಾ, ಡಿಗ್ರಿ, ಪಿಜಿ ಡಿಪ್ಲೊಮಾ ನೀಡುವ ಅನೇಕ ಸಂಸ್ಥೆಗಳು ರಾಜ್ಯದಲ್ಲಿವೆ.
ವಿವರಗಳಿಗೆ: design.careers360.com, academiccourses.com

ಜಾಲತಾಣಗಳನ್ನು ನೋಡಿ.
* ವೋಗ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ರಿಚ್ಮಂಡ್ ಸರ್ಕಲ್, ಬೆಂಗಳೂರು. ಫ್ಯಾಷನ್ ಡಿಸೈನಿಂಗ್‌ನಲ್ಲಿ ಸರ್ಟಿಫಿಕೇಟ್, ಡಿಪ್ಲೊಮಾ, ಪದವಿ ಮತ್ತು ಪಿ.ಜಿ. ಡಿಪ್ಲೊಮಾ ಕೋರ್ಸ್‌ಗಳು.
ವೆಬ್‍ಸೈಟ್: voguefashioninstitute.com

* ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ, ವಿಜಯನಗರ, ಬೆಂಗಳೂರು. ಫ್ಯಾಶನ್ & ಅಪಾರೆಲ್ ಡಿಸೈನ್‌ನಲ್ಲಿ ಬಿಎಸ್ಸಿ, ಫ್ಯಾಷನ್ ಡಿಸೈನಿಂಗ್ ಅಂಡ್ ಬುಟೀಕ್ ಮ್ಯಾನೇಜ್ಮೆಂಟ್‌ನಲ್ಲಿ ಡಿಪ್ಲೊಮಾ.
ವೆಬ್‍ಸೈಟ್: iiftbangalore.com

* ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು. ಆಕ್ಸೆಸರಿ ಡಿಸೈನ್, ಫ್ಯಾಷನ್ ಕಮ್ಯುನಿಕೇಶನ್, ಫ್ಯಾಷನ್ ಡಿಸೈನ್‌ನಲ್ಲಿ ಪ್ರತ್ಯೇಕ ಪದವಿಗಳು ಹಾಗೂ ಸ್ನಾತಕೋತ್ತರ ಕೋರ್ಸ್.
ವೆಬ್‍ಸೈಟ್: nift.ac.in

* ಮಂಗಳೂರು ಇನ್‍ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಕಂಕನಾಡಿ, ಮಂಗಳೂರು. ಫ್ಯಾಷನ್ ಡಿಸೈನಿಂಗ್‌ನಲ್ಲಿ ಬಿಎಸ್ಸಿ ಪದವಿ.
ವೆಬ್‍ಸೈಟ್‍: miftcollege.in

* ಮೈಸೂರು ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ವಿಜಯನಗರ, ಸಂಗಮ್ ವೃತ್ತ, ಮೈಸೂರು.
ವೆಬ್‍ಸೈಟ್: www.mift.in

ಫೋಟೊಗ್ರಫಿ: ಮೂರನೇ ಕಣ್ಣು
ಅಪಾರ ಸಾಧ್ಯತೆಗಳಿರುವ ಕ್ಷೇತ್ರ ಛಾಯಾಗ್ರಹಣ. ಜಾಹೀರಾತು ಸಂಸ್ಥೆಗಳಿಂದ ಫ್ಯಾಷನ್‌ ರಂಗದವರೆಗೆ ಕ್ರಿಯಾಶೀಲ ಛಾಯಾಗ್ರಾಹಕರಿಗೆ ಇಂದು ಎಲ್ಲಿಲ್ಲದ ಬೇಡಿಕೆಯಿದೆ. ಮದುವೆಯಂತಹ ಕೌಟುಂಬಿಕ ಕಾರ್ಯಕ್ರಮಗಳಿಂದ ತೊಡಗಿ ಸಾರ್ವಜನಿಕ ಸಭೆ-ಸಮಾರಂಭಗಳವರೆಗೆ ಎಲ್ಲ ಸಂದರ್ಭಗಳಿಗೂ ಫೋಟೊ ಅನಿವಾರ್ಯವಾಗಿರುವುದರಿಂದ ಫೋಟೊಗ್ರಫಿಯನ್ನು ವೃತ್ತಿಯನ್ನಾಗಿ ಸ್ವೀಕರಿಸಿದವರಿಗೆ ಇಂದು ಬಿಡುವೇ ಇಲ್ಲ. ಅನೇಕ ಸಂಸ್ಥೆಗಳು ಛಾಯಾಗ್ರಹಣದಲ್ಲಿ ಡಿಪ್ಲೊಮಾ ಹಾಗೂ ಪದವಿ ಕೋರ್ಸುಗಳನ್ನು ಒದಗಿಸುತ್ತಿವೆ. ಫ್ಯಾಷನ್ ಫೋಟೊಗ್ರಫಿ, ಅಟೋಮೊಬೈಲ್ ಫೋಟೊಗ್ರಫಿ, ವೈಲ್ಡ್‌ಲೈಫ್ ಫೋಟೊಗ್ರಫಿ - ಹೀಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತಲೇ ಇವೆ.
ವಿವರಗಳಿಗೆ: goo.gl/qfsJsF, goo.gl/vYwEiW

ಜಾಲತಾಣಗಳನ್ನು ನೋಡಿ.

* ಸೀಮ್‌ಎಜು ಸ್ಕೂಲ್ ಆಫ್ ಎಕ್ಸ್‌ಪ್ರೆಶನಿಸಂ, ಭುವನಗಿರಿ, ಒಎಂಬಿಆರ್ ಬಡಾವಣೆ, ಬೆಂಗಳೂರು. ಛಾಯಾಗ್ರಹಣದಲ್ಲಿ ಮೂರು ವರ್ಷದ ಬಿಎಸ್ಸಿ ಪದವಿ.
ವೆಬ್‍ಸೈಟ್: seamedu.com

* ಜೆಡಿ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಲ್ಯಾವೆಲ್ಲೆ ರಸ್ತೆ, ಬೆಂಗಳೂರು. ಫ್ಯಾಷನ್ ಫೋಟೋಗ್ರಫಿಯಲ್ಲಿ ಡಿಪ್ಲೊಮಾ ಪದವಿ.
ದೃಷ್ಟಿ ಸ್ಕೂಲ್ ಆಫ್ ಫೋಟೋಗ್ರಫಿ, ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ, ಹೆಬ್ಬಾಳ, ಬೆಂಗಳೂರು.

ಹೊಸಬರಿಗೆ ವಾರಾಂತ್ಯದ ಕೋರ್ಸುಗಳು ಹಾಗೂ ಇತರರಿಗೆ 50 ದಿನಗಳ ಕೋರ್ಸ್.
ವೆಬ್‍ಸೈಟ್: jdinstitute.com

ಸೌಂಡ್ ಎಂಜಿನಿಯರಿಂಗ್: ಶಬ್ದಪ್ರಸಂಗ
ಮನರಂಜನೆ ಬಹುಕೋಟಿ ಉದ್ಯಮವಾಗಿ ಬೆಳೆದಿರುವುದರಿಂದ ಕಳೆದೊಂದು ದಶಕದಿಂದ ಸೌಂಡ್ ಎಂಜಿನಿಯರಿಂಗ್ ತುಂಬ ಜನಪ್ರಿಯವೆನಿಸಿದೆ. ಚಲನಚಿತ್ರ (ಧ್ವನಿಪರಿಷ್ಕರಣೆ, ಧ್ವನಿಪರಿಣಾಮ), ಟೀವಿ ಕಾರ್ಯಕ್ರಮ ನಿರ್ಮಾಣ, ಜಾಹೀರಾತು, ಸಂಗೀತ ಕ್ಷೇತ್ರಗಳಲ್ಲಿ ಸೌಂಡ್ ಎಂಜಿನಿಯರ್‌ಗಳಿಗೆ ಭಾರೀ ಬೇಡಿಕೆಯಿದೆ. ಈ ವಿಷಯದಲ್ಲಿ ಡಿಪ್ಲೊಮಾ, ಬಿ.ಇ./ಬಿ.ಟೆಕ್. ಪದವಿಗಳನ್ನು ನೀಡುವ ಅನೇಕ ಸಂಸ್ಥೆಗಳಿವೆ.
ವಿವರಗಳಿಗೆ:audiolife.in, audioacademy.in ಜಾಲತಾಣಗಳನ್ನು ನೋಡಿ.

* ಸೀಮ್‌ಎಜು ಸ್ಕೂಲ್ ಆಫ್ ಎಕ್ಸ್‌ಪ್ರೆಶನಿಸಂ, ಭುವನಗಿರಿ, ಒಎಂಬಿಆರ್ ಬಡಾವಣೆ, ಬೆಂಗಳೂರು. ಸೌಂಡ್ ಎಂಜಿನಿಯರಿಂಗ್‌ನಲ್ಲಿ ಬಿ.ಎಸ್ಸಿ. ಪದವಿ.

* ಆಡಿಯೋ ಅಕಾಡೆಮಿ, ಆವಲಹಳ್ಳಿ, ಬೆಂಗಳೂರು. ಸೌಂಡ್ ಎಂಜಿನಿಯರಿಂಗ್‌ನ ವಿವಿಧ ವಿಷಯಗಳಲ್ಲಿ ಸಣ್ಣ ಅವಧಿಯ ಕೋರ್ಸ್‌ಗಳು.
ವೆಬ್‍ಸೈಟ್: audioacademy.in

* ಆಡಿಯೋಲೈಫ್-ಇನ್‍ಸ್ಟಿಟ್ಯೂಟ್ ಆಫ್ ಸೌಂಡ್ ಎಂಜಿನಿಯರಿಂಗ್, ಜೆಪಿ ನಗರ, ಬೆಂಗಳೂರು. ಸೌಂಡ್ ಎಂಜಿನಿಯರಿಂಗ್ ಹಾಗೂ ಎಲೆಕ್ಟ್ರಾನಿಕ್ ಮ್ಯೂಸಿಕ್ ಪ್ರೊಡಕ್ಷನ್‌ನಲ್ಲಿ ಸಣ್ಣ ಅವಧಿ ಹಾಗೂ ದೀರ್ಘಾವಧಿ ಕೋರ್ಸ್‌ಗಳು.
ವೆಬ್‍ಸೈಟ್: audiolife.in

* ಎಎಟಿ ಮೀಡಿಯಾ ಕಾಲೇಜ್, ಮಲ್ಲೇಶ್ವರಂ, ಬೆಂಗಳೂರು. ಸೌಂಡ್ ಎಂಜಿನಿಯರಿಂಗ್‌ನಲ್ಲಿ ಪದವಿ,ಡಿಪ್ಲೊಮಾ ಕೋರ್ಸ್.
ಸಿಆರ್‌ಇಒ ವ್ಯಾಲಿ ಸ್ಕೂಲ್ ಆಫ್ ಕ್ರಿಯೇಟಿವಿಟಿ, ಡಿಸೈನ್ & ಮ್ಯಾನೇಜ್ಮೆಂಟ್, ಕೋರಮಂಗಲ, ಬೆಂಗಳೂರು. ಸೌಂಡ್ ಎಂಜಿನಿಯರಿಂಗ್‌ನಲ್ಲಿ ಅಂತರರಾಷ್ಟ್ರೀಯ ಮಾನ್ಯತೆಯ ಕೋರ್ಸ್‌ಗಳು.
ವೆಬ್‍ಸೈಟ್: aatcollege.com

ಸಂಘಟನೆ-ಸಂಭ್ರಮದ ಇವೆಂಟ್ ಮ್ಯಾನೇಜ್‍ಮೆಂಟ್‍
ವಾರ್ಷಿಕೋತ್ಸವ, ರ‍್ಯಾಲಿ, ವಸ್ತುಪ್ರದರ್ಶನ ಇತ್ಯಾದಿ ಸಾರ್ವಜನಿಕ ಸಭೆ-ಸಮಾರಂಭಗಳಿಂದ ತೊಡಗಿ ಮದುವೆಯಂತಹ ಕೌಟುಂಬಿಕ ಕಾರ್ಯಕ್ರಮಗಳನ್ನೂ ಅಚ್ಚುಕಟ್ಟಾಗಿ ಆಯೋಜಿಸಿಕೊಡುವ ಇವೆಂಟ್ ಮ್ಯಾನೇಜ್‍ಮೆಂಟ್‍ ಕಂಪನಿಗಳಿಗೆ ಈಗ ಬಿಡುವಿಲ್ಲದ ಕೆಲಸ. ಕಾರ್ಯಕ್ರಮಗಳು ಸೊಗಸಾಗಿ ನಡೆಯಬೇಕು. ಆದರೆ ಅದರ ಆಯೋಜನೆಯ ಒತ್ತಡಗಳಿಂದ ದೂರವಿರಬೇಕು ಎಂದು ಬಯಸುವವರೇ ಹೆಚ್ಚಾಗಿರುವುದರಿಂದ ಇವೆಂಟ್ ಮ್ಯಾನೇಜರ್ಸ್‌ಗೆ ಭಾರೀ ಬೇಡಿಕೆ. ಈ ವಿಷಯದಲ್ಲಿ ಡಿಪ್ಲೊಮಾದಿಂದ ತೊಡಗಿ ಎಂಬಿಎ ವರೆಗೆ ಅನೇಕ ಬಗೆಯ ಕೋರ್ಸ್‌ಗಳನ್ನು ನೀಡುವ ಸಂಸ್ಥೆಗಳಿವೆ.
ವಿವರಗಳಿಗೆ: niemindia.com, emdiworld.com/bengaluru

ಜಾಲತಾಣಗಳನ್ನು ನೋಡಿ.
* ಇಎಂಡಿಐ ಇನ್‍ಸ್ಟಿಟ್ಯೂಟ್ ಆಫ್ ಇವೆಂಟ್ ಮ್ಯಾನೇಜ್‍ಮೆಂಟ್, ಇಂದಿರಾನಗರ, ಬೆಂಗಳೂರು. ಇವೆಂಟ್ ಮ್ಯಾನೇಜ್‍ಮೆಂಟ್ ಡಿಪ್ಲೊಮಾ ಮತ್ತು ಪಿಜಿ ಡಿಪ್ಲೊಮಾ ಕೋರ್ಸ್‌ಗಳು.
ವೆಬ್‍ಸೈಟ್: emdiworld.com

* ಶಾರದಾ ವಿಕಾಸ್ ಟ್ರಸ್ಟ್, ಜಯನಗರ 4ನೇ ಬ್ಲಾಕ್, ಬೆಂಗಳೂರು. ಇವೆಂಟ್ ಮ್ಯಾನೇಜ್‍ಮೆಂಟ್‍ನಲ್ಲಿ ಡಿಪ್ಲೊಮಾ ಕೋರ್ಸ್.

* ಪಿಇಎಸ್ ವಿಶ್ವವಿದ್ಯಾಲಯ, ಬನಶಂಕರಿ 3ನೇ ಹಂತ, ಬೆಂಗಳೂರು. ಹಾಸ್ಪಿಟಾಲಿಟಿ & ಇವೆಂಟ್ ಮ್ಯಾನೇಜ್‍ಮೆಂಟ್‍ನಲ್ಲಿ ಬಿಬಿಎ ಪದವಿ.
ವೆಬ್‍ಸೈಟ್: pes.edu

ನೋಟ ನವನವೀನ: ಇಂಟೀರಿಯರ್ ಡಿಸೈನ್
ಮನೆ-ಕಚೇರಿ ಕಟ್ಟಿಕೊಂಡರೆ ಸಾಲದು, ಅವು ಚೆನ್ನಾಗಿರಬೇಕು ಎಂದು ಬಯಸುವ ಜನರು ಹೆಚ್ಚು. ಹೀಗಾಗಿ ಇಂಟೀರಿಯರ್ ಡಿಸೈನಿಂಗ್ ದೊಡ್ಡ ಉದ್ಯಮವಾಗಿ ಬೆಳೆದಿದೆ. ಜನರ ಆಸಕ್ತಿ-ಅಭಿರುಚಿಗೆ ಅನುಗುಣವಾಗಿ ಒಳಾಂಗಣ ವಿನ್ಯಾಸ ಮಾಡುವವರು ಇಂದು ಬಹುಬೇಡಿಕೆಯಲ್ಲಿದ್ದಾರೆ. ಅಂತಹ ಮಂದಿಯನ್ನು ತರಬೇತುಗೊಳಿಸುವ ಸಾಕಷ್ಟು ಸಂಸ್ಥೆಗಳೂ ಹುಟ್ಟಿಕೊಂಡಿವೆ.
ವಿವರಗಳಿಗೆ: plancareer.org, www.bsd.edu.in ಜಾಲತಾಣಗಳನ್ನು ನೋಡಿ.

* ಬೆಂಗಳೂರು ಸ್ಕೂಲ್ ಆಫ್ ಡಿಸೈನ್, ಕೆ. ನಾರಾಯಣಪುರ, ಕೊತ್ತನೂರು, ಬೆಂಗಳೂರು. ಇಂಟೀರಿಯರ್ ಡಿಸೈನ್‌ನಲ್ಲಿ ಬಿ.ಎಸ್ಸಿ. ಹಾಗೂ ಡಿಪ್ಲೊಮ ಕೋರ್ಸ್‌ಗಳು.
ವೆಬ್‍ಸೈಟ್: bsd.edu.in

* ನಿಟ್ಟೆ ಸ್ಕೂಲ್ ಆಫ್ ಫ್ಯಾಶನ್ ಟೆಕ್ನಾಲಜಿ & ಇಂಟೀರಿಯರ್ ಡಿಸೈನ್, ಯಲಹಂಕ, ಬೆಂಗಳೂರು. ಇಂಟೀರಿಯರ್ ಡಿಸೈನ್ & ಡೆಕೋರೇಶನ್‌ನಲ್ಲಿ ಬಿ.ಎಸ್ಸಿ. ಪದವಿ.
ವೆಬ್‍ಸೈಟ್: nitteftid.com

* ಇಂಟರ್‌ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಶನ್ ಡಿಸೈನ್, ಎಚ್‌ಎಸ್‌ಆರ್ ಲೇಔಟ್ ಹಾಗೂ ಎಂಜಿ ರಸ್ತೆ, ಬೆಂಗಳೂರು. ಇಂಟೀರಿಯರ್ ಡಿಸೈನ್‌ನಲ್ಲಿ ಬಿ.ಎಸ್ಸಿ. ಪದವಿ.
ವೆಬ್‍ಸೈಟ್: iiftbangalore.com

* ಎನಿಮಾಸ್ಟರ್, ಗುಟ್ಟಹಳ್ಳಿ, ಬೆಂಗಳೂರು. ಬ್ಯಾಚಿಲರ್ ಆಫ್ ವಿಶುವಲ್ ಆರ್ಟ್ಸ್ ಇನ್ ಇಂಟೀರಿಯರ್ & ಸ್ಪೇಶಿಯಲ್ ಡಿಸೈನ್.

* ಮೈಸೂರು ಇಂಟೀರಿಯರ್ಸ್ & ಡಿಸೈನ್ಸ್ ಅಕಾಡೆಮಿ, ಕುವೆಂಪುನಗರ, ಮೈಸೂರು. ಇಂಟೀರಿಯರ್ ಡಿಸೈನ್‌ನಲ್ಲಿ ಬಿ.ಎಸ್ಸಿ. ಮತ್ತು ಸಣ್ಣ ಅವಧಿಯ ಕೋರ್ಸ್‌ಗಳು.
ವೆಬ್‍ಸೈಟ್: animaster.com

**

‘ಡಿಜಿಟಲ್ ಫ್ಯಾಷನ್‌ಗೆ ಬೇಡಿಕೆ ಹೆಚ್ಚು’
ಫ್ಯಾಷನ್ ತಂತ್ರಜ್ಞಾನ ಇಂದು ಕೇವಲ ಫ್ಯಾಬ್ರಿಕ್‌ಗಳ ಮೇಲಷ್ಟೆ ಅವಲಂಬಿತವಾಗಿಲ್ಲ. ಈ ಕ್ಷೇತ್ರ ವಿಸ್ತಾರವಾಗಿದೆ. ಇತ್ತೀಚೆಗೆ ಫ್ಯಾಷನ್ ಮಾರುಕಟ್ಟೆಯು ವಿಷುವಲ್ ಮಾರುಕಟ್ಟೆಯ ಮೇಲೆ ಹೆಚ್ಚು ಗಮನ ಹರಿಸುತ್ತಿದೆ.

ಫ್ಯಾಷನ್ ಕೋರ್ಸ್ ಅನ್ನು ‘ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಸೈನ್’, ‘ನ್ಯಾಷನಲ್ ಸ್ಕೂಲ್ ಆಫ್ ಫ್ಯಾಷನ್ ಟೆಕ್ನಾಲಜಿ’ಯಂತಹ ಕಾಲೇಜುಗಳಲ್ಲಿ ಓದಲು ಪಿಯುಸಿ ಕಡ್ಡಾಯ. ಫ್ಯಾಷನ್ ಡಿಸೈನಿಂಗ್ 2 ವರ್ಷದ ಡಿಪ್ಲೊಮ ಕೋರ್ಸ್‌. ಇದರಲ್ಲೇ ಉನ್ನತ ಶಿಕ್ಷಣ ಮಾಡಲು ಬಯಸುವವರಿಗೆ ವಿಶೇಷ ಕೋರ್ಸ್‌ಗಳು ಸಹ ಇವೆ. ವಿದೇಶಗಳಲ್ಲಿ ಫ್ಯಾಷನ್‌ ಡಿಸೈನರ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅಲ್ಲಿ ಅಂತರರಾಷ್ಟ್ರೀಯ ಬ್ರ್ಯಾಂಡಿಂಗ್ ಹಾಗೂ ಫ್ಯಾಷನ್‌ ಬ್ಲಾಗ್‌ಗಳಲ್ಲಿ ಕೆಲಸ ಮಾಡುವ ಅವಕಾಶವಿದೆ. ಜೊತೆಗೆ ಮನೆಯಲ್ಲೇ ಕುಳಿತು ಬ್ಲಾಗ್‌ಗಳಿಗೆ ಬರೆಯುವುದು, ಫ್ಯಾಷನ್ ಫೋಟೊಗ್ರಫಿ ಮಾಡುವ ಮೂಲಕವೂ ಹಣ ಗಳಿಸಬಹುದು. ಫ್ಯಾಷನ್ ಡಿಸೈನಿಂಗ್‌ನಲ್ಲಿ ಡಿಜಿಟಲ್ ಫ್ಯಾಷನ್‌ಗೆ ಹೆಚ್ಚಿನ ಬೇಡಿಕೆ ಇದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಡಿಜಿಟಲ್ ಫ್ಯಾಷನ್‌ ಕೋರ್ಸ್ ಇರುವ ಕಾಲೇಜುಗಳ ಸಂಖ್ಯೆ ಕಡಿಮೆ ಇದೆ.

ಭಾರತದಲ್ಲಿ ಫ್ಯಾಷನ್‌ ಡಿಸೈನರ್‌ಗಳಿಗಿಂತ ಫ್ಯಾಷನ್ ಮಾರಾಟದಾರರೇ ಹೆಚ್ಚು ಗಳಿಸುತ್ತಾರೆ. ಫ್ಯಾಷನ್ ಡಿಸೈನಿಂಗ್ ಮಾಡಿರುವವರು ಡಿಜಿಟಲ್ ಮಾರುಕಟ್ಟೆ, ವಿಷುವಲ್ ಮಾರುಕಟ್ಟೆ, ಕ್ವಾಲಿಟಿ ಕಂಟ್ರೋಲ್ ವಿಭಾಗಗಳಲ್ಲಿ ಕೆಲಸ ಮಾಡಬಹುದು. ಫ್ಯಾಷನ್ ಟೆಕ್ಸ್‌ಟೈಲ್ಸ್‌, ಫ್ಯಾಷನ್ ಬ್ಲಾಗಿಂಗ್ ಅಂಡ್ ಫೋಟೊಗ್ರಫಿ, ಫ್ಯಾಟರ್ನ್ ಮೇಕಿಂಗ್ - ಇವೆಲ್ಲವೂ ಫ್ಯಾಷನ್ ಡಿಸೈನಿಂಗ್ ಕೋರ್ಸ್‌ನ ವಿಷಯಗಳಾಗಿವೆ.
- ಶುಚಿ ಶ್ರೀವಾಸ್ತವ್‌, ಮುಖ್ಯ ವಿನ್ಯಾಸ ಅಧಿಕಾರಿ (ಚೀಫ್ ಡಿಸೈನ್ ಆಫೀಸರ್‌), ಮೈಸೂರು ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT