ಸೆಮಿಫೈನಲ್‌ಗೆ ಸಾಯಿಪ್ರಣೀತ್‌

7
ನ್ಯೂಜಿಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

ಸೆಮಿಫೈನಲ್‌ಗೆ ಸಾಯಿಪ್ರಣೀತ್‌

Published:
Updated:
ಸೆಮಿಫೈನಲ್‌ಗೆ ಸಾಯಿಪ್ರಣೀತ್‌

ಆಕ್ಲಂಡ್‌: ಭಾರತದ ಬಿ. ಸಾಯಿಪ್ರಣೀತ್‌ ಅವರು ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ ವಿಭಾಗದಲ್ಲಿ ಶುಕ್ರವಾರ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಕೇವಲ 28 ನಿಮಿಷಗಳಲ್ಲಿ ಶ್ರೀಲಂಕಾದ ನಿಲುಕಾ ಕರುಣರತ್ನೆ ಅವರನ್ನು 21–7, 21–9ರಿಂದ ಸಾಯಿ ಪ್ರಣೀತ್‌ ಮಣಿ ಸಿದರು. ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಜೋನಾಥನ್‌ ಕ್ರಿಸ್ಟಿ ಅವರನ್ನು ಸಾಯ್‌ ಎದುರಿಸಲಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ಭಾರತದ ಸಮೀರ್‌ ವರ್ಮಾ ಅವರು ಚೀನಾದ ಅಗ್ರ ಶ್ರೇಯಾಂಕಿತ ಲಿನ್‌ ಡ್ಯಾನ್‌ ವಿರುದ್ಧ ಸೋತರು.

ಸಮೀರ್‌ ವಿರುದ್ಧ 19–21, 9–21ರಿಂದ ಚೀನಾದ ಆಟಗಾರ ಜಯಿಸಿದರು.

ಸೆಮಿಫೈನಲ್‌ ಪಂದ್ಯದಲ್ಲಿ ಲಿನ್‌ ಅವರಿಗೆ ಕೊರಿಯಾದ ಕ್ವಾಂಗ್‌ ಹಿ ಹೊ ಅವರು ಮುಖಾಮುಖಿಯಾಗಲಿದ್ದಾರೆ.

ಡಬಲ್ಸ್‌ನಲ್ಲಿ ಸೋಲು: ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಮನು ಅತ್ರಿ ಹಾಗೂ ಬಿ. ಸುಮಿತ್‌ ಜೋಡಿ ಪರಾಭವಗೊಂಡಿತು.

ಥಾಯ್ಲೆಂಡ್‌ನ ನಾಲ್ಕನೇ ಶ್ರೇಯಾಂಕದ ಬೊದಿನ್‌ ಇಸಾರಾ ಹಾಗೂ ನಿಪಿತ್ಪೋನ್‌ ಫುಂಗ್‌ಫುಪೆಟ್‌ ಜೋಡಿಯು ಭಾರತದ ಜೋಡಿಯನ್ನು 10–21, 15–21ರ ನೇರ ಸೆಟ್‌ಗಳಿಂದ ಮಣಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry