ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆಯ ಸೇವೆಯೆ ಗೆಲುವಿಗೆ ಶ್ರೀರಕ್ಷೆ: ಸೂರ್ಯಕಾಂತ

Last Updated 5 ಮೇ 2018, 9:49 IST
ಅಕ್ಷರ ಗಾತ್ರ

ಬೀದರ್‌: ನಗರದ ಸಂಗಮೇಶ್ವರ ಕಾಲೊನಿ, ಮೈಲೂರ, ಸಿಎಂಸಿ ಕಾಲೊನಿ, ಕೃಷಿ ಕಾಲೊನಿ, ಮಂಗಲಪೇಟ್‌ನಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ತಮ್ಮ ತಂದೆ ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರನ್ನು ನೆನೆದು ಭಾವುಕರಾದರು.

ಶಾಸಕ, ಸಚಿವ, ಡಿಸಿಸಿ ಬ್ಯಾಂಕ್ ಹಾಗೂ ಎನ್‌ಎಸ್‌ಎಸ್‌ಕೆ ಅಧ್ಯಕ್ಷರಾಗಿ ಅವರು ಬೀದರ್‌ ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದನ್ನು ಸ್ಮರಿಸಿಕೊಂಡರು.

‘ಪ್ರಚಾರಕ್ಕೆ ಹೋದ ಕಡೆಗಳಲ್ಲೆಲ್ಲ ಜನ ತಂದೆಯವರ ಜನಪರ ಕಾಳಜಿ, ಹೃದಯ ವೈಶಾಲ್ಯತೆಯನ್ನು ಕೊಂಡಾ ಡುತ್ತಿದ್ದಾರೆ. ನನ್ನಲ್ಲಿ ಅವರನ್ನು ಕಾಣು ತ್ತಿದ್ದಾರೆ. ಜನರ ಪ್ರೀತಿ, ವಿಶ್ವಾಸ ಕಂಡು ಹೃದಯ ತುಂಬಿ ಬರುತ್ತಿದೆ. ಕೊನೆಯ ಉಸಿರು ಇರುವವರೆಗೂ ಜನಸೇವೆ ಮಾಡುತ್ತಲೇ ಇರುವೆ’ ಎಂದರು.

‘ತಂದೆಯವರು 18 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯನ್ನು 18 ತಿಂಗಳಲ್ಲಿ ನಿರ್ಮಿಸಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ನೆರವಾಗಿದ್ದರು. ಡಿಸಿಸಿ ಬ್ಯಾಂಕ್ ಮೂಲಕ ಅವರು 13 ಮಹಿಳೆಯರಿಂದ ಆರಂಭಿಸಿದ ಸ್ವಸಹಾಯ ಗುಂಪುಗಳಲ್ಲಿ ಈಗ 3.73 ಲಕ್ಷ ಸದಸ್ಯರಿದ್ದಾರೆ. ಮಹಿಳೆಯರು ಬ್ಯಾಂಕ್‌ಗಳಲ್ಲಿ ₹ 140 ಕೋಟಿ ಠೇವಣಿ ಇಟ್ಟಿದ್ದಾರೆ. ವಾರ್ಷಿಕ ₹ 600 ಕೋಟಿ ವಹಿವಾಟು ನಡೆಸುತ್ತಿದ್ದಾರೆ’ ಎಂದು ತಿಳಿಸಿದರು.

‘ಬೀದರ್‌ನಲ್ಲಿ ರಾಜ್ಯದಲ್ಲೇ ಮೊಟ್ಟ ಮೊದಲ ಸಹಕಾರ ಆಸ್ಪತ್ರೆ ಪ್ರಾರಂಭಿಸಿದ್ದರು. ಆಸ್ಪತ್ರೆಯಿಂದ ಜಿಲ್ಲೆಯ ರೋಗಿಗಳು ಚಿಕಿತ್ಸೆಗಾಗಿ ಹೈದರಾಬಾದ್, ಸೊಲ್ಲಾಪುರ, ಬೆಂಗಳೂರಿಗೆ ಹೋಗುವುದು ತಪ್ಪಿದೆ. ನಾನು ಆಸ್ಪತ್ರೆ ಅಧ್ಯಕ್ಷನಾದ ನಂತರ ಆರಂಭಿಸಿದ ₹ 2 ಸಾವಿರದಲ್ಲಿ ಸಾಮಾನ್ಯ ಹೆರಿಗೆ, ₹ 10 ಸಾವಿರದಲ್ಲಿ ಸಿಸೇರಿಯನ್ ಯೋಜನೆಯಿಂದ ನೂರಾರು ಬಡ ಜನರಿಗೆ ಅನುಕೂಲವಾಗಿದೆ’ ಎಂದು ಹೇಳಿದರು.

‘ಎರಡು ವರ್ಷದ ಹಿಂದೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಡಿಸಿಸಿ ಬ್ಯಾಂಕ್‌ನಿಂದ 1.52 ಲಕ್ಷ ರೈತರ ಬೆಳೆ ವಿಮೆ ಮಾಡಿಸಿದ್ದರಿಂದ ಬೀದರ್‌ಗೆ ದೇಶದಲ್ಲೇ ಅತಿಹೆಚ್ಚು ಅಂದರೆ ₹ 248 ಕೋಟಿ ಪರಿಹಾರ ಸಿಕ್ಕಿತ್ತು. ರೈತರಿಗೆ ತಲಾ ₹ 30 ಸಾವಿರದಿಂದ ₹ 4 ಲಕ್ಷ ವರೆಗೂ ಪರಿಹಾರ ದೊರಕಿತ್ತು’ ಎಂದು ತಿಳಿಸಿದರು.

‘ನಾನು 10 ವರ್ಷಗಳಿಂದ ನಿರಂತರ ಜನಸೇವೆಯಲ್ಲಿದ್ದೇನೆ. ಬೀದರ್‌ ಕ್ಷೇತ್ರ ವನ್ನು ಮಾದರಿ ಮಾಡಲು ನನ್ನನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಯಕುಮಾರ ಕಾಂಗೆ, ಮುಖಂಡರಾದ ಉಪೇಂದ್ರ ದೇಶಪಾಂಡೆ, ಫರ್ನಾಂಡೀಸ್ ಹಿಪ್ಪಳ ಗಾಂವ್‌, ಡಾ, ಅಮರ ಏರೋಳಕರ, ಶಶಿಕುಮಾರ ಪಾಟೀಲ ಸಂಗಮ, ರಾಜು ಹತ್ತಿ, ಶಿವಕುಮಾರ ಭಾಲ್ಕೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT