ಬೇತು: ಮಕ್ಕಿ ಶಾಸ್ತಾವು ಉತ್ಸವಕ್ಕೆ ತೆರೆ

7
ವಿಜೃಂಭಣೆಯಿಂದ ನಡೆದ ಕೋಲಗಳು, ಆಕರ್ಷಿಸಿದ ಸಾಂಪ್ರದಾಯಿ ಉಡುಗೆ

ಬೇತು: ಮಕ್ಕಿ ಶಾಸ್ತಾವು ಉತ್ಸವಕ್ಕೆ ತೆರೆ

Published:
Updated:

ನಾಪೋಕ್ಲು: ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವರ ವಾರ್ಷಿಕ ಉತ್ಸವ ಎರಡು ದಿನ ವಿಜೃಂಭಣೆಯಿಂದ ನಡೆದ ಉತ್ಸವ ಗುರುವಾರ ದೇವಾಲಯದ ಆವರಣದಲ್ಲಿ ಎರಡು ಪ್ರಮುಖ ಕೋಲಗಳೊಂದಿಗೆ ಉತ್ಸವ ಕೊನೆಗೊಂಡಿತು.

ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಶುಕ್ರವಾರ ಬೆಳಿಗ್ಗೆ ವಿವಿಧ ಕೋಲಗಳು ಶಾಸ್ತಾವು ದೇವರಿಗೆ ಸೇವೆ ಸಲ್ಲಿಸಿದವು. ಬೆಳಿಗ್ಗೆ ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ಕೋಲಗಳು ತಮ್ಮ ಸಾಂಪ್ರದಾಯಿಕ ವೇಷಭೂಷಣ ಗಳೊಂದಿಗೆ ಗಮನಸೆಳೆದವು. ಉತ್ಸವ ನೋಡಲು ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ದೇವರಿಗೆ ಭಕ್ತರು ವಿವಿಧ ರೀತಿಯ ಹರಕೆಗಳನ್ನು ಸಲ್ಲಿಸಿದರು.

ಉತ್ಸವದ ಅಂಗವಾಗಿ ಮೊದಲ ದಿನ ಮಧ್ಯಾಹ್ನ ಎತ್ತೇರಾಟ ಹಾಗೂ ರಾತ್ರಿ ದೀಪಾರಾಧನೆ ನಡೆಯಿತು. ತಡರಾತ್ರಿಯವರೆಗೆ ಕೇರಳದ ಚಂಡೆವಾದ್ಯದೊಂದಿಗೆ ದೇವಾಲಯದಲ್ಲಿ ದೀಪಾರಾಧನೆ ನಡೆಯಿತು.

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಚೆಟ್ಟೀರ ಶ್ಯಾಂ ಬೋಪಣ್ಣ, ತಕ್ಕಮುಖ್ಯಸ್ಥ ಕೊಂಡೀರ ಪೊನ್ನಣ್ಣ ವಾರ್ಷಿಕ ಉತ್ಸವದ ನೇತೃತ್ವ ವಹಿಸಿದ್ದರು. ಅರ್ಚಕ ಮಕ್ಕಿ ದಿವಾಕರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry