ಬಿಹಾರ ಸ್ಚಚ್ಛತಾ ಆಂದೋಲನ ಕೈಪಿಡಿಯಲ್ಲಿ ಪಾಕ್ ಬಾಲಕಿ ಚಿತ್ರ!

7
ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ

ಬಿಹಾರ ಸ್ಚಚ್ಛತಾ ಆಂದೋಲನ ಕೈಪಿಡಿಯಲ್ಲಿ ಪಾಕ್ ಬಾಲಕಿ ಚಿತ್ರ!

Published:
Updated:
ಬಿಹಾರ ಸ್ಚಚ್ಛತಾ ಆಂದೋಲನ ಕೈಪಿಡಿಯಲ್ಲಿ ಪಾಕ್ ಬಾಲಕಿ ಚಿತ್ರ!

ಜಮುಯಿ (ಬಿಹಾರ): ಬಿಹಾರದ ಜಮುಯಿ ಜಿಲ್ಲಾಡಳಿತ ಆರಂಭಿಸಿರುವ ‘ಸ್ವಚ್ಛ ಜಮುಯಿ, ಸ್ವಸ್ಥ ಜಮುಯಿ’ ಅಭಿಯಾನದ ಕೈಪಿಡಿಯಲ್ಲಿ ಪಾಕಿಸ್ತಾನದ ಬಾಲಕಿಯ ಚಿತ್ರ ಬಳಸಿಕೊಳ್ಳಲಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

‘ಪಾಕಿಸ್ತಾನದ ಬಾವುಟದ ಚಿತ್ರ ಬಿಡಿಸುತ್ತಿರುವ ಅಲ್ಲಿಯ ಶಾಲಾ ಬಾಲಕಿಯೊಬ್ಬಳ ಈ ಚಿತ್ರವನ್ನು ಪಾಕಿಸ್ತಾನದ ಶೈಕ್ಷಣಿಕ ಕಾರ್ಯಕ್ರಮದ ಪ್ರಚಾರಕ್ಕೆ ಯೂನಿಸೆಫ್ ಬಳಸಿಕೊಂಡಿತ್ತು. ಆ ಚಿತ್ರವಿರುವ ಸುಮಾರು 5 ಸಾವಿರ ಕೈಪಿಡಿ ಮತ್ತು ನೋಟ್‌ಬುಕ್‌ಗಳನ್ನು ಹಲವು ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ವಿತರಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಚಿತ್ರ ಆಯ್ಕೆ ಮಾಡಿದವರು ಮತ್ತು ಅದಕ್ಕೆ ಅನುಮತಿ ನೀಡಿದವರು ಯಾರು ಎಂಬುದರ ಬಗ್ಗೆ ತನಿಖೆ ಆರಂಭಿಸಿದ್ದೇವೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಮುಯಿ ಜಿಲ್ಲಾಡಳಿತ ಮಾಹಿತಿ ನೀಡಿದೆ.

‘ಕೈಪಿಡಿ ಮತ್ತು ಪುಸ್ತಕಗಳನ್ನು ಮುದ್ರಿಸುವ ಮುನ್ನ ಜಿಲ್ಲಾಡಳಿತಕ್ಕೆ ಆ ಚಿತ್ರ ಕಳುಹಿಸಲಾಗಿತ್ತು. ಅನುಮತಿ ದೊರೆತ ನಂತರವೇ ಬಾಲಕಿಯ ಚಿತ್ರ ಮುದ್ರಿಸಲಾಗಿದೆ’ ಎಂದು ಖಾಸಗಿ ಮುದ್ರಣ ಸಂಸ್ಥೆ ಸ್ಪಷ್ಟನೆ ನೀಡಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಬೇಟಿ ಬಚಾವೊ, ಬೇಟಿ ಪಡಾವೊ’ ಆಂದೋಲನದ ಪ್ರಚಾರದ ಕೈಪಿಡಿಗಳಲ್ಲೂ ಇದೇ ಚಿತ್ರವನ್ನು ಬಳಸಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry