7
ರಾಜರಾಜೇಶ್ವರಿ ನಗರದಲ್ಲಿ ನಡೆದ ಘಟನೆ

ಸರಗಳ್ಳರೊಂದಿಗೆ ಮಹಿಳೆ ಹೋರಾಟ

Published:
Updated:
ಸರಗಳ್ಳರೊಂದಿಗೆ ಮಹಿಳೆ ಹೋರಾಟ

ಬೆಂಗಳೂರು: ಮಹಿಳೆಯರಿಬ್ಬರು ತಮ್ಮ ಮನೆಯ ಎದುರಿರುವ ರಸ್ತೆಯಲ್ಲಿ ಮಾತನಾಡುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ಇಬ್ಬರು ಸರಗಳ್ಳರು ಮಾಂಗಲ್ಯ ಎಗರಿಸಲು ಮುಂದಾದಾಗ ಒಬ್ಬಾಕೆ ಕೆಚ್ಚೆದೆಯಿಂದ ಅವರು ಹೋರಾಡಿದ ವಿಡಿಯೊವೊಂದು ವ್ಯಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ.

ಇದೇ 3ರಂದು ರಾಜರಾಜೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಸಂಜೆ 5ರ ಸುಮಾರಿಗೆ ಮಹಿಳೆಯರು ಮಾತನಾಡುತ್ತ ನಿಂತಿದ್ದ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಬಂದ ಸರಗಳ್ಳರು ವೇಗವನ್ನು ಕಡಿಮೆ ಮಾಡುತ್ತಾರೆ. ತಕ್ಷಣವೇ ಹಿಂಬದಿ ಸವಾರ ಒಬ್ಬ ಮಹಿಳೆಯ ಕತ್ತಿಗೆ ಕೈ ಹಾಕಿ ಮಾಂಗಲ್ಯ ಎಗರಿಸಲು ಪ್ರಯತ್ನಿಸುತ್ತಾನೆ.

ಮರುಕ್ಷಣವೇ ಪ್ರತಿರೋಧವೊಡ್ಡುವ ಮಹಿಳೆ ಮಾಂಗಲ್ಯ ಗಟ್ಟಿಯಾಗಿ ಹಿಡಿದುಕೊಂಡು, ಕೈಯಲ್ಲಿರುವ ಶಟಲ್‌ರಾಕೆಟ್‌ನಿಂದ ರಕ್ಷಣೆಗೆ ಮುಂದಾಗುತ್ತಾಳೆ. ಪಟ್ಟುಬಿಡದ ಸರಗಳ್ಳರು ಸ್ವಲ್ಪ ಮುಂದೆ ಹೋಗಿ ಸ್ಕೂಟರ್‌ ನಿಲ್ಲಿಸಿ, ಮಹಿಳೆಯನ್ನು ಕಂಪೌಂಡ್‌ ಪಕ್ಕದಲ್ಲಿರುವ ವಿದ್ಯುತ್ ಕಂಬದತ್ತ ತಳ್ಳಿಕೊಂಡು ಹೋಗಿ, ಹಲ್ಲೆ ನಡೆಸಿ ಮಾಂಗಲ್ಯ ಕಸಿದುಕೊಳ್ಳುತ್ತಾರೆ.

ಸರಗಳ್ಳರ ದಾಳಿಯಿಂದ ಎದೆಗುಂದದ ಮಹಿಳೆ ಸುಮಾರು ಒಂದು ನಿಮಿಷಗಳ ಕಾಲ ಅವರೊಂದಿಗೆ ಹೋರಾಟ ನಡೆಸುತ್ತಾಳೆ. ಕೊನೆಗೆ ಸರಗಳ್ಳರು ಅಲ್ಲಿಂದ ಪರಾರಿಯಾಗುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry