ಗುರುವಾರ , ಮಾರ್ಚ್ 4, 2021
18 °C
ಕೇಂದ್ರೀಯ ದತ್ತು ಪ್ರಾಧಿಕಾರ ನೀಡಿರುವ ಮಾಹಿತಿಯಲ್ಲಿ ಉಲ್ಲೇಖ

ದತ್ತು ಪಡೆಯುವವರಿಗೆ ಹೆಣ್ಣುಮಗುವೇ ಮೆಚ್ಚು

ಪಿಟಿಐ Updated:

ಅಕ್ಷರ ಗಾತ್ರ : | |

ದತ್ತು ಪಡೆಯುವವರಿಗೆ ಹೆಣ್ಣುಮಗುವೇ ಮೆಚ್ಚು

ನವದೆಹಲಿ: ದತ್ತು ಪಡೆಯುವವರಿಗೆ ಹೆಣ್ಣು ಮಕ್ಕಳೇ ಅಚ್ಚುಮೆಚ್ಚು. ಒಟ್ಟು ದತ್ತು ಪ್ರಮಾಣದಲ್ಲಿ ಶೇ 60ರಷ್ಟು ಹಣ್ಣು ಮಕ್ಕಳೇ ಇದ್ದಾರೆ ಎಂಬುದು ಆರು ವರ್ಷಗಳ ಅಂಕಿ ಅಂಶದಿಂದ ಸ್ಪಷ್ಟವಾಗುತ್ತದೆ. ಇದೇ ಅವಧಿಯಲ್ಲಿ ದತ್ತು ನೀಡಲಾದ ಮಕ್ಕಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಿದೆ ಎಂಬ ಮಾಹಿತಿಯನ್ನು ಮಕ್ಕಳ ದತ್ತು ಪ್ರಾಧಿಕಾರ ನೀಡಿದೆ.

ಕಳೆದ ಸಾಲಿನಲ್ಲಿ (2017–18) ಹೆಚ್ಚು ಮಕ್ಕಳನ್ನು ದತ್ತು ನೀಡಲಾದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ದತ್ತಕ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದುರಿಂದ ಇದು ಸಾಧ್ಯವಾಗಿದೆ ಎಂದು ಪ್ರಾಧಿಕಾರ ಹೇಳಿದೆ.

ಹೆಣ್ಣು ಮಕ್ಕಳೇ ಏಕೆ ಬೇಕು...

‘ಗಂಡು ಮಕ್ಕಳನ್ನು ಸಾಕುವುದು ಮತ್ತು ಅವರ ಭವಿಷ್ಯವನ್ನು ರೂಪಿಸುವುದಕ್ಕಿಂತ, ಹೆಣ್ಣು ಮಕ್ಕಳನ್ನು ಸಾಕುವುದು ಮತ್ತು ಅವರ ಭವಿಷ್ಯ ರೂಪಿಸುವುದು ಸುಲಭ ಎಂಬ ಭಾವನೆ ದತ್ತು ಪಡೆಯಲು ಬರುವ ಬಹುತೇಕ ದಂಪತಿಯಲ್ಲಿದೆ’ ಎನ್ನುತ್ತದೆ ಕೇಂದ್ರೀಯ ದತ್ತು ಪ್ರಾಧಿಕಾರ.

ಇಳಿಕೆಗೆ ಕಾರಣಗಳು

ಬಹುತೇಕ ದಂಪತಿ 4–5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನೇ ದತ್ತು ಪಡೆಯಲು ಬಯಸುತ್ತಾರೆ. ದತ್ತು ನೀಡಲು ಲಭ್ಯವಿರುವ ಅಷ್ಟು ಚಿಕ್ಕ ವಯಸ್ಸಿನ ಮಕ್ಕಳ ಸಂಖ್ಯೆ ಕಡಿಮೆಯಿದೆ.

ಅಂಗವಿಕಲ ಮತ್ತು ವಿಶೇಷ ಆರೈಕೆ ಬೇಕಾಗುವ ಮಕ್ಕಳನ್ನು ದತ್ತು ಪಡೆಯಲು ಭಾರತೀಯರು ಹಿಂದೇಟು ಹಾಕುತ್ತಾರೆ. ದತ್ತು ನೀಡಲು ಲಭ್ಯವಿರುವ ಅಂತಹ ಮಕ್ಕಳ ಸಂಖ್ಯೆ ಹೆಚ್ಚು ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.