ಸ್ಕ್ವಾಷ್‌: ರಮಿತ್‌ಗೆ ಪ್ರಶಸ್ತಿ

7

ಸ್ಕ್ವಾಷ್‌: ರಮಿತ್‌ಗೆ ಪ್ರಶಸ್ತಿ

Published:
Updated:
ಸ್ಕ್ವಾಷ್‌: ರಮಿತ್‌ಗೆ ಪ್ರಶಸ್ತಿ

ಅಬುಧಾಬಿ: ಅಮೋಘ ಆಟ ಆಡಿದ ಭಾರತದ ರಮಿತ್‌ ಟಂಡನ್‌, ವೃತ್ತಿಪರ ಸ್ಕ್ವಾಷ್‌ ಸಂಸ್ಥೆ (ಪಿಎಸ್‌ಎ) ಆಶ್ರಯದ ಅಬುಧಾಬಿ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ರಮಿತ್‌ 11–6, 6–11, 11–3, 11–2ರಲ್ಲಿ ಈಜಿಪ್ಟ್‌ನ ಓಮರ್‌ ಅಬ್ದೆಲ್‌ ಮೆಗುಯಿದ್‌ ಅವರನ್ನು ಸೋಲಿಸಿದರು.

ಇದರೊಂದಿಗೆ ಪಿಎಸ್‌ಎ ಟೂರ್‌ನಲ್ಲಿ ಮೂರನೇ ಪ್ರಶಸ್ತಿ ಜಯಿಸಿದ ಹಿರಿಮೆಗೆ ಪಾತ್ರರಾದರು.

ಮೂರನೇ ಶ್ರೇಯಾಂಕ ಹೊಂದಿರುವ ರಮಿತ್‌, ಮೊದಲ ಗೇಮ್‌ನಲ್ಲಿ ಮೋಡಿ ಮಾಡಿದರು. ಚುರುಕಿನ ಸರ್ವ್‌ ಮತ್ತು ಆಕರ್ಷಕ ಹಿಂಗೈ ಹೊಡೆತಗಳ ಮೂಲಕ ಪಾಯಿಂಟ್ಸ್‌ ಗಳಿಸಿದ ಅವರು ಗೇಮ್‌ ಜಯಿಸಿ 1–0ರ ಮುನ್ನಡೆ ಪಡೆದರು.

ಅಗ್ರಶ್ರೇಯಾಂಕಿತ ಆಟಗಾರ ಓಮರ್‌, ಎರಡನೇ ಗೇಮ್‌ನಲ್ಲಿ ಭಾರತದ ಆಟಗಾರನಿಗೆ ತಿರುಗೇಟು ನೀಡಿದರು. ಹೀಗಾಗಿ 1–1ರ ಸಮಬಲ ಕಂಡುಬಂತು.ಇದರಿಂದ ರಮಿತ್‌ ಎದೆಗುಂದಲಿಲ್ಲ. ಮೂರು ಮತ್ತು ನಾಲ್ಕನೇ ಗೇಮ್‌ಗಳಲ್ಲಿ ಚುರುಕಿನ ಆಟ ಆಡಿದ ಅವರು ಸುಲಭವಾಗಿ ಎದುರಾಳಿಯನ್ನು ಸೋಲಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 65ನೇ ಸ್ಥಾನ ಹೊಂದಿರುವ ರಮಿತ್‌ ಮತ್ತು 41ನೇ ಸ್ಥಾನದಲ್ಲಿರುವ ಓಮರ್‌ ಅವರು ಪಿಎಸ್‌ಎ ಟೂರ್‌ನ ಪಂದ್ಯದಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry