ವಿರಾಟ್‌ ಕೊಹ್ಲಿ ಬಳಗಕ್ಕೆ ಮತ್ತೊಂದು ಅಗ್ನಿ ಪರೀಕ್ಷೆ

7
ಅಗ್ರಸ್ಥಾನದಲ್ಲಿ ಮುಂದುವರಿಯಲು ಸನ್‌ರೈಸರ್ಸ್‌ ಯತ್ನ

ವಿರಾಟ್‌ ಕೊಹ್ಲಿ ಬಳಗಕ್ಕೆ ಮತ್ತೊಂದು ಅಗ್ನಿ ಪರೀಕ್ಷೆ

Published:
Updated:
ವಿರಾಟ್‌ ಕೊಹ್ಲಿ ಬಳಗಕ್ಕೆ ಮತ್ತೊಂದು ಅಗ್ನಿ ಪರೀಕ್ಷೆ

ಹೈದರಾಬಾದ್‌: ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಗಳು ಐಪಿಎಲ್‌ನ ಸೋಮವಾರದ ಪಂದ್ಯದಲ್ಲಿ ಸೆಣಸಲಿವೆ.

ನಿರಂತರ ನಾಲ್ಕು ಗೆಲುವುಗಳ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಆತಿಥೇಯ ಸನ್‌ರೈಸರ್ಸ್‌ ತಂಡ ಯಾವುದೇ ತಂಡವನ್ನು ಮಣಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂಬುದನ್ನು ಹಿಂದಿನ ಪಂದ್ಯಗಳಲ್ಲಿ ಸಾಬೀತುಪಡಿಸಿದೆ.

ಉತ್ತಮ ಆಟಗಾರರನ್ನು ಹೊಂದಿದ್ದರೂ ಜಯ ಗಳಿಸಲು ಸಾಧ್ಯವಾಗದೇ ಇರುವುದು ಆರ್‌ಸಿಬಿಯ ಸಮಸ್ಯೆ. ಈ ತಂಡದ ‍‍ಪ್ಲೇ ಆಫ್ ಹಾದಿ ಬಹುತೇಕ ಮುಚ್ಚಿದೆ. ಆದ್ದರಿಂದ ಈಗ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದೆ.

ಸಮರ್ಥ ಬೌಲಿಂಗ್‌ ದಾಳಿ ಹೊಂದಿರುವ ಸನ್‌ರೈಸರ್ಸ್‌ ಕಳೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಎದುರು ಏಳು ವಿಕೆಟ್‌ಗಳಿಂದ ಗೆದ್ದು ಗುರಿ ಬೆನ್ನತ್ತುವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿದೆ.

ಪ್ಲೇ ಆಫ್‌ ಹಂತಕ್ಕೇರುವುದು ಖಚಿತವಾಗಿದ್ದರೂ ಬ್ಯಾಟಿಂಗ್‌ ವಿಭಾಗದ ಕೆಲವು ಸಮಸ್ಯೆಗಳನ್ನು ನೀಗಿಸಿಕೊಳ್ಳಲು ತಂಡ ಪ್ರಯತ್ನಿ

ಸಬೇಕಾಗಿದೆ. ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್‌ ಅವರಿಗೆ ಸಹಜ ಸಾಮರ್ಥ್ಯ ಮೆರೆಯಲು ಆಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆ ಇಲ್ಲದಿರುವುದು ಕೂಡ ತಂಡದ ಆತಂಕಕ್ಕೆ ಕಾರಣವಾಗಿದೆ.

ನಾಲ್ಕನೇ ಜಯದ ತವಕ: ‘ಈ ಬಾರಿ ಕಪ್‌ ನಮ್ದೇ’ ಎಂದು ಹೇಳುತ್ತಾ ಬಂದಿರುವ ಆರ್‌ಸಿಬಿ ಒಂಬತ್ತು ಪಂದ್ಯಗಳಲ್ಲಿ ಕೇವಲ ಮೂರನ್ನು ಗೆದ್ದು ಪಾಯಿಂಟ್ ಪಟ್ಟಿಯ ಆರನೇ ಸ್ಥಾನದಲ್ಲಿದೆ. ಟೂರ್ನಿಯಲ್ಲಿ ಈ ವರೆಗೆ ಉತ್ತಮ ಬ್ಯಾಟಿಂಗ್ ಮಾಡಿರುವ ನಾಯಕ ವಿರಾಟ್ ಕೊಹ್ಲಿ ಜೊತೆ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್ ಮಿಂಚುವ ಭರವಸೆಯಲ್ಲಿದ್ದಾರೆ.

ತಂಡದ ಇತರ ಬ್ಯಾಟ್ಸ್‌ಮನ್‌ಗೆ ನಿರೀಕ್ಷೆಗೆ ತಕ್ಕಂತೆ ಮಿಂಚಲು ಆಗಲಿಲ್ಲ. ಪಾರ್ಥಿವ್ ಪಟೇಲ್‌ ಅವರಿಗೆ ಕಳೆದ ಪಂದ್ಯದಲ್ಲಿ ಮಾತ್ರ ಅರ್ಧಶತಕ ಗಳಿಸಲು ಸಾಧ್ಯವಾಗಿತ್ತು. ಬ್ರೆಂಡನ್‌ ಮೆಕ್ಲಮ್‌, ಮನದೀಪ್‌ ಸಿಂಗ್‌ ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್‌ ತಮ್ಮ ನೈಜ ಆಟವನ್ನು ಆಡಬೇಕಾಗಿದೆ. ಭುವನೇಶ್ವರ್ ಕುಮಾರ್‌ ಒಳಗೊಂಡ ಸನ್‌ರೈಸರ್ಸ್‌ನ ಬಲಿಷ್ಠ ಬೌಲಿಂಗ್ ವಿಭಾಗವನ್ನು ಇವರು ಮೆಟ್ಟಿ ನಿಲ್ಲುವರೇ ಎಂಬುದು ಕುತೂಹಲದ ಪ್ರಶ್ನೆ.

ಆರ್‌ಸಿಬಿಯ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಉಮೇಶ್ ಯಾದವ್ ಮತ್ತು ಯಜುವೇಂದ್ರ ಚಾಹಲ್‌ ಉತ್ತಮ ಫಾರ್ಮ್‌ನಲ್ಲಿದ್ದು ವಾಷಿಂಗ್ಟನ್ ಸುಂದರ್‌ ನಿರೀಕ್ಷೆ ಹುಸಿಗೊಳಿಸಲಿಲ್ಲ. ಮಹಮ್ಮದ್‌ ಸಿರಾಜ್‌ ತವರಿನ ಅಂಗಣದಲ್ಲಿ ಬೆಳಗಲು ಪ್ರಯತ್ನಿಸಲಿದ್ದಾರೆ.

ತಂಡಗಳು ಇಂತಿವೆ

ರಾಯಲ್‌ ಚಾಲೆಂಜರ್ಸ್ ಬೆಂಗಳೂರು:
ವಿರಾಟ್ ಕೊಹ್ಲಿ (ನಾಯಕ), ಕ್ವಿಂಟನ್ ಡಿ ಕಾಕ್‌, ಬ್ರೆಂಡನ್ ಮೆಕ್ಲಮ್‌, ಎಬಿ ಡಿವಿಲಿಯರ್ಸ್‌, ಸರ್ಫರಾಜ್ ಖಾನ್‌, ಮನದೀಪ್ ಸಿಂಗ್‌, ಕ್ರಿಸ್‌ ವೋಕ್ಸ್‌, ವಾಷಿಂಗ್ಟನ್ ಸುಂದರ್‌, ಉಮೇಶ್ ಯಾದವ್, ಯಜುವೇಂದ್ರ ಚಾಹಲ್‌, ಕಾಲಿನ್ ಡಿ ಗ್ರ್ಯಾಂಡ್‌ಹೋಮ್‌, ಮೊಯಿನ್‌ ಅಲಿ, ಪವನ್ ನೇಗಿ, ಮೊಹಮ್ಮದ್ ಸಿರಾಜ್‌, ಕೋರಿ ಆ್ಯಂಡರ್ಸನ್‌, ಪಾರ್ಥಿವ್ ಪಟೇಲ್‌. ಟಿಮ್ ಸೌಥಿ.

ಸನ್‌ರೈಸರ್ಸ್ ಹೈದರಾಬಾದ್‌: ಕೇನ್ ವಿಲಿಯಮ್ಸನ್‌ (ನಾಯಕ), ಶಿಖರ್ ಧವನ್‌, ಮನೀಷ್ ಪಾಂಡೆ, ಭುವನೇಶ್ವರ್‌ ಕುಮಾರ್‌, ವೃದ್ಧಿಮಾನ್ ಸಹಾ, ಸಿದ್ಧಾರ್ಥ್ ಕೌಲ್‌, ದೀಪಕ್ ಹೂಡ, ಖಲೀಲ್ ಅಹಮ್ಮದ್‌, ಸಂದೀಪ್ ಶರ್ಮಾ, ಯೂಸುಫ್ ಪಠಾಣ್‌, ಶ್ರೀವತ್ಸ ಗೋಸ್ವಾಮಿ, ರಿಕಿ ಭುಯಿ, ಬಾಸಿಲ್ ಥಂಪಿ, ಟಿ.ನಟರಾಜನ್‌, ಸಚಿನ್ ಬೇಬಿ, ಬಿಪುಪ್‌ ಶರ್ಮಾ, ಮೆಹದಿ ಹಸನ್‌, ತನ್ಮಯ್‌ ಅಗರವಾಲ್‌, ಅಲೆಕ್ಸ್ ಹೇಲ್ಸ್‌, ಕಾರ್ಲೋಸ್ ಬ್ರಾಥ್‌ವೇಟ್‌, ರಶೀದ್ ಖಾನ್‌, ಶಕೀಬ್ ಅಲ್‌ ಹಸನ್‌, ಮೊಹಮ್ಮದ್ ನಬಿ, ಕ್ರಿಸ್‌ ಜೋರ್ಡನ್‌

ಪಂದ್ಯ ಆರಂಭ: ರಾತ್ರಿ 8.00

ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry