ಪಾಲಿಕೆ ಸದಸ್ಯೆಗೆ ಜೀವ ಬೆದರಿಕೆ ದೂರು

7

ಪಾಲಿಕೆ ಸದಸ್ಯೆಗೆ ಜೀವ ಬೆದರಿಕೆ ದೂರು

Published:
Updated:

ಬೆಂಗಳೂರು: ‘ಪಕ್ಷದ ಅಭ್ಯರ್ಥಿ ಪರ ಪೀಣ್ಯದ ಆಶ್ರಯನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ ಬಳಿ ಪ್ರಚಾರಕ್ಕೆ ತೆರಳಿದ ವೇಳೆ ಕೈಯಲ್ಲಿ ಲಾಂಗು, ಮಚ್ಚು ಹಿಡಿದ ಕೆಲ ಅಪರಿಚಿತ ವ್ಯಕ್ತಿಗಳು ಜೀವ ಬೆದರಿಕೆಯೊಡ್ಡಿದ್ದಾರೆ’ ಎಂದು ಪಾಲಿಕೆ ಎಚ್‌ಎಂಟಿ ವಾರ್ಡ್‌ನ ಜೆಡಿಎಸ್‌ ಸದಸ್ಯೆ ಆಶಾ ಸುರೇಶ್‌ ದೂರಿದ್ದಾರೆ.

‘ಆರ್‌.ಆರ್‌ ನಗರದಿಂದ ಕಣಕ್ಕೆ ಇಳಿದಿರುವ ಜಿ.ಎಚ್‌ ರಾಮಚಂದ್ರ ಪರ ಪ್ರಚಾರ ನಡೆಸುತ್ತಿದ್ದಾಗ ಸ್ಥಳೀಯ ಕಾಂಗ್ರೆಸ್‌ ಮುಖಂಡರೊಬ್ಬರು ನಾವಿದ್ದ ಸ್ಥಳಕ್ಕೆ ಬಂದಿದ್ದರು. ಅವರೊಂದಿಗೆ ಸುಮಾರು 20 ಜನ ಇದ್ದರು. ಅವರೆಲ್ಲ ನಮಗೆ ಅಪರಿಚಿತರಾಗಿದ್ದು, ನಮ್ಮ ಪಕ್ಷದ ಕಾರ್ಯಕರ್ತರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ’ ಎಂದು ಆಶಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಹುಶಃ ಉತ್ತರ ಭಾರತದಿಂದ ಅವರನ್ನು ಕರೆದುಕೊಂಡು ಬಂದಿರಬಹುದು. ಕಾಂಗ್ರೆಸ್‌ಗೆ ಮತ ಹಾಕುವಂತೆ ಅವರೆಲ್ಲರೂ ಸ್ಥಳೀಯರನ್ನು ಬೆದರಿಸುತ್ತಿದ್ದಾರೆ’ ಎಂದು ಹೇಳಿದರು. ಈ ಬಗ್ಗೆ ಆರ್.ಎಂ.ಸಿ. ಯಾರ್ಡ್‌ ಪೊಲೀಸ್‌ ಠಾಣೆಗೆ ದೂರು ಅವರು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry