ಐ.ಎಸ್‌ ಬೆಂಬಲಿಗರ ಸಂಪರ್ಕಕ್ಕೆ ಫೇಸ್‌ಬುಕ್‌ ಕೊಂಡಿ: ಆರೋಪ

7

ಐ.ಎಸ್‌ ಬೆಂಬಲಿಗರ ಸಂಪರ್ಕಕ್ಕೆ ಫೇಸ್‌ಬುಕ್‌ ಕೊಂಡಿ: ಆರೋಪ

Published:
Updated:
ಐ.ಎಸ್‌ ಬೆಂಬಲಿಗರ ಸಂಪರ್ಕಕ್ಕೆ ಫೇಸ್‌ಬುಕ್‌ ಕೊಂಡಿ: ಆರೋಪ

ಲಂಡನ್‌: ಫೇಸ್‌ಬುಕ್‌ನ ‘ಸಜೆಸ್ಟೆಟ್‌ ಫ್ರೆಂಡ್ಸ್‌’ ಆಯ್ಕೆಯ ಮೂಲಕ ಐಎಸ್‌ ಸಂಘಟನೆಯ ಸಾವಿರಾರು ಬೆಂಬಲಿಗರು ಒಬ್ಬರಿಗೊಬ್ಬರು ಸಂಪರ್ಕ ಹೊಂದಲು ಸಾಧ್ಯವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕದ ಸ್ವಯಂಸೇವಾ ಸಂಸ್ಥೆ ಕೌಂಟರ್‌ ಎಕ್ಸಿಟ್ರಿಮಿಸಂ ಪ್ರಾಜೆಕ್ಟ್‌ ನಡೆಸಿದ ಅಧ್ಯಯನದಲ್ಲಿ ಈ ಅಂಶ ಕಂಡುಬಂದಿದೆ. ಸಂಶೋಧಕರು 96 ದೇಶಗಳ ಐಎಸ್‌ ಸಂಘಟನೆಯ 1,000 ಬೆಂಬಲಿಗರ ಅಂತರ್ಜಾಲ ಚಟುವಟಿಕೆಯನ್ನು ಅಧ್ಯಯನ ಮಾಡಿದ್ದರು.

ಭಯೋತ್ಪಾದಕರು ತಮ್ಮ ಸಂಪರ್ಕ ಜಾಲಗಳನ್ನು ಮರು ಸ್ಥಾಪಿಸಲು ಮತ್ತು ಬೆಳೆಸಲು ಫೇಸ್‌ಬುಕ್‌ ಸಹಾಯ ಮಾಡುತ್ತದೆ ಎಂಬುದು ಇದರಿಂದ ತಿಳಿದಿದೆ.

‘ಫೇಸ್‌ಬುಕ್ ಸಾಧ್ಯವಾದಷ್ಟು ಜನರನ್ನು ಸಂಪರ್ಕಿಸಲು ನೆರವಾಗುತ್ತದೆ. ಆದರೆ ತನಗರಿವಿಲ್ಲದೆಯೇ  ಉಗ್ರಗಾಮಿ ಮತ್ತು ಭಯೋತ್ಪಾದಕರನ್ನು ಸಂಪರ್ಕಿಸಲು ಸಹಾಯ ಮಾಡುವ ವ್ಯವಸ್ಥೆಯನ್ನೂ ಸೃಷ್ಟಿಸುತ್ತದೆ’ ಎಂದು ಸಿಇಪಿಯ ರಾಬರ್ಟ್‌ ಪೋಸ್ಟಿಂಗ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry