7

ಮುಕ್ತ ವಿ.ವಿ ಪಿಎಚ್‌.ಡಿ ಮಾನ್ಯ: ‘ಸುಪ್ರೀಂ’

Published:
Updated:

ನವದೆಹಲಿ: ಮುಕ್ತ ವಿಶ್ವವಿದ್ಯಾಲಯ ನೀಡುವ ಪಿಎಚ್‌.ಡಿ ಪದವಿಯನ್ನು ಇತರೆ ವಿಶ್ವವಿದ್ಯಾಲಯಗಳು ನೀಡುವ ಪಿಎಚ್‌.ಡಿಗೆ ಸಮನಾಗಿಯೇ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಕಲ್ಕತ್ತಾ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಅಬ್ದುಲ್ ಮತೀನ್‌ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಎಸ್‌.ಎ. ಬೊಬ್ಡೆ ಹಾಗೂ ಎಲ್‌. ನಾಗೇಶ್ವರ ರಾವ್ ಅವರ ಪೀಠ ಈ ತೀರ್ಪು ನೀಡಿದೆ.

ಅಬ್ದುಲ್ ಅವರು ನೇತಾಜಿ ಸುಭಾಷ್ ಮುಕ್ತ ವಿಶ್ವವಿದ್ಯಾಲಯದಿಂದ ಪಡೆದಿದ್ದ ಪಿಎಚ್.ಡಿ ಪದವಿಯನ್ನು, ಪ್ರಾಂಶುಪಾಲ ಹುದ್ದೆಗೆ ಮಾನ್ಯ ಮಾಡಲಾಗದು ಎಂದು ಕಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿತ್ತು.

ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಕ್ಕೆ ಅನುಸಾರವಾಗಿ ಮುಕ್ತ ವಿಶ್ವವಿದ್ಯಾಲಯಗಳು ಪ‌ದವಿ, ಡಿಪ್ಲೊಮಾ, ಸರ್ಟಿಫಿಕೇಟ್‌ ಕೋರ್ಸ್‌ಗಳ ಪ್ರಮಾಣಪತ್ರ ನೀಡಿದ್ದರೆ ಅದು ವಿಶ್ವವಿದ್ಯಾಲಯಗಳು ನೀಡುವ ಪ್ರಮಾಣಪತ್ರಕ್ಕೆ ಸಮಾನವಾಗಿರುತ್ತದೆ ಎಂದು ಯುಜಿಸಿ 2004 ಹಾಗೂ 2013ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಅದನ್ನು ನ್ಯಾಯಪೀಠವು ಉಲ್ಲೇಖಿಸಿದೆ.

‘ವಿಶ್ವವಿದ್ಯಾಲಯಗಳು ಹಾಗೂ ಮುಕ್ತ ವಿಶ್ವವಿದ್ಯಾಲಯಗಳಿಗೆ ಯುಜಿಸಿ ನಿಯಮಗಳು ಸಮಾನವಾಗಿ ಅನ್ವಯವಾಗುತ್ತವೆ. 2009ರ ಅಣ್ಣಾಮಲೈ ವಿಶ್ವವಿದ್ಯಾಲಯದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಇದೇ ಅಂಶವನ್ನು ಉಲ್ಲೇಖಿಸಿತ್ತು’ ಎಂದು ಪೀಠ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry