ಸಿಡ್ನಿ: ಭಾರತದ ಬಿ.ಸಾಯಿ ಪ್ರಣೀತ್ ಮತ್ತು ಸಮೀರ್ ವರ್ಮಾ, ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ಪ್ರಣೀತ್ 21–17, 21–14ರ ನೇರ ಗೇಮ್‌ಗಳಿಂದ ಇಸ್ರೇಲ್‌ನ ಮಿಶಾ ಜಿಲ್‌ಬರ್ಮನ್ ಅವರನ್ನು ಸೋಲಿಸಿದರು.

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ಪ್ರಣೀತ್, ಮೊದಲ ಗೇಮ್‌ನ ಶುರುವಿನಿಂದಲೇ ಆಕ್ರಮಣಕಾರಿ ಆಟ ಆಡಿದರು. ಚುರು ಕಿನ ಸರ್ವ್ ಮತ್ತು ಡ್ರಾಪ್‌ಗಳ ಮೂಲಕ ಪಾಯಿಂಟ್ಸ್ ಕಲೆಹಾಕಿ ಮುನ್ನಡೆ ಗಳಿಸಿದರು.

ಇದರಿಂದ ಮಿಶಾ, ವಿಶ್ವಾಸ ಕಳೆದುಕೊಳ್ಳಲಿಲ್ಲ. ಅವರು ಭಾರತದ ಆಟಗಾರ ನಿಗೆ ಪ್ರಬಲ ಪೈಪೋಟಿ ಒಡ್ಡಿದರು. ಹೀಗಾಗಿ 17–17ರ ಸಮಬಲ ಕಂಡು ಬಂತು. ನಂತರ ಪ್ರಣೀತ್ ಮಿಂಚಿನ ಆಟ ಆಡಿ ಗೇಮ್ ಗೆದ್ದರು.

ಎರಡನೇ ಗೇಮ್‌ನ ಶುರುವಿನಲ್ಲೂ ಭಾರತದ ಆಟಗಾರ, ಮಿಶಾ ಅವರಿಂದ ಕಠಿಣ ಸ್ಪರ್ಧೆ ಎದುರಿಸಿದರು. ದ್ವಿತೀಯಾರ್ಧದಲ್ಲಿ ಪ್ರಣೀತ್, ಗುಣಮಟ್ಟದ ಆಟ ಆಡಿ ಗೆಲುವಿನ ತೋರಣ ಕಟ್ಟಿದರು. ಎರಡನೇ ಸುತ್ತಿನಲ್ಲಿ ಪ್ರಣೀತ್, ಇಂಡೊನೇಷ್ಯಾದ ಪಾಂಜಿ ಅಹಮದ್ ಮೌಲಾನ ವಿರುದ್ಧ ಆಡಲಿದ್ದಾರೆ.

ನಾಲ್ಕನೇ ಶ್ರೇಯಾಂಕಿತ ಆಟಗಾರ ಸಮೀರ್ ಮೊದಲ ಸುತ್ತಿನ ಪೈಪೋಟಿಯಲ್ಲಿ 13–21, 21–17, 21–12ರಲ್ಲಿ ನ್ಯೂಜಿಲೆಂಡ್‌ನ ಅಭಿನವ್ ಮನೋಟ ವಿರುದ್ಧ ಗೆದ್ದರು.

ಮೊದಲ ಗೇಮ್‌ನಲ್ಲಿ ನಿರಾಸೆ ಕಂಡ ಸಮೀರ್, ನಂತರದ ಎರಡು ಗೇಮ್‌ಗಳಲ್ಲೂ ಪ್ರಾಬಲ್ಯ ಮೆರೆದು ಎದುರಾಳಿಯ ಸವಾಲು ಮೀರಿದರು.

ಮುಂದಿನ ಸುತ್ತಿನಲ್ಲಿ ಸಮೀರ್, ಜಪಾನ್‌ನ ಟಕುಮಾ ಉಯೆದಾ ವಿರುದ್ಧ ಸೆಣಸಲಿದ್ದಾರೆ.

ಈ ವಿಭಾಗದ ಇನ್ನೊಂದು ಪಂದ್ಯ ದಲ್ಲಿ ಟಕುಮಾ 19–21, 21–17, 21–12ರಲ್ಲಿ ಭಾರತದ ಸೌರಭ್ ವರ್ಮಾ ಅವರನ್ನು ಮಣಿಸಿದರು.

ಶ್ರೇಯಾಂಕ ರಹಿತ ಆಟಗಾರ ಅಜಯ್ ಜಯರಾಮ್ 22–20, 20–22, 17–21ರಲ್ಲಿ ಜಪಾನ್‌ನ ರಿಚೀ ಟಕೆಶಿಟಾ ವಿರುದ್ಧ ಸೋತರು. ಈ ಹೋರಾಟ ಒಂದು ಗಂಟೆ 12 ನಿಮಿಷ ನಡೆಯಿತು.

ಕರಣ್ ರಾಜನ್ 15–21, 8–21ರಲ್ಲಿ ಇಂಡೊನೇಷ್ಯಾದ ಸೋನಿ ದ್ವಿ ಕೊಂಕೊರೊ ವಿರುದ್ಧ ಮಣಿದರು.

ಎರಡನೇ ಸುತ್ತಿಗೆ ವೈಷ್ಣವಿ: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕಣದಲ್ಲಿರುವ ವೈಷ್ಣವಿ ರೆಡ್ಡಿ ಜಕ್ಕಾ ಎರಡನೇ ಸುತ್ತಿಗೆ ಲಗ್ಗೆ ಇಟ್ಟರು.

ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ವೈಷ್ಣವಿ 19–21, 21–15, 21–15ರಲ್ಲಿ ಇಂಗ್ಲೆಂಡ್‌ನ ಜಾರ್ಜಿನಾ ಬ್ಲಾಂಡಾ ಅವರನ್ನು ಪರಾಭವಗೊಳಿಸಿದರು.

ಪುರುಷರ ಡಬಲ್ಸ್‌ನಲ್ಲಿ ಕಣದಲ್ಲಿರುವ ಮನು ಅತ್ರಿ ಮತ್ತು ಬಿ.ಸುಮಿತ್ ರೆಡ್ಡಿ ಮೊದಲ ಸುತ್ತಿನಲ್ಲಿ 21–11, 21–10ರಲ್ಲಿ ಲುಕಾಸ್ ಡೆಫೊಲ್ಕಿ ಮತ್ತು ಮೈಕಲ್ ಫಾರಿಮನ್ ವಿರುದ್ಧ ಗೆದ್ದರು.

ಎಂ.ಆರ್.ಅರ್ಜುನ್ ಮತ್ತು ರಾಮಚಂದ್ರನ್ ಶ್ಲೋಕ್ 21–17, 21–15ರಲ್ಲಿ ರೇಮಂಡ್ ಟಾಮ್ ಮತ್ತು ಎರಿಕ್ ವೊಂಗ್ ಅವರನ್ನು ಸೋಲಿಸಿದರು.

ರೋಹನ್ ಕಪೂರ್ ಮತ್ತು ಶಿವಂ ಶರ್ಮಾ 15–21, 21–15, 7–21ರಲ್ಲಿ ಮಲೇಷ್ಯಾದ ಟ್ಯಾಂಗ್ ಜೀ ಚೆನ್ ಮತ್ತು ಸೂನ್ ಹುವಾತ್ ಗೊಹ್ ವಿರುದ್ಧ ಸೋತರು.

ಮನು ಮತ್ತು ಸುಮಿತ್ ಅವರು ಎರಡನೇ ಸುತ್ತಿನಲ್ಲಿ ಕೊರಿಯಾದ ಹ್ಯೂಕ್ ಗ್ಯೂನ್ ಚೊಯ್ ಮತ್ತು ಕ್ಯೂಂಗ್ ಹೂನ್ ಪಾರ್ಕ್ ವಿರುದ್ಧ ಆಡಲಿದ್ದಾರೆ.

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಮೇಘನಾ ಜಕ್ಕಂಪುಡಿ ಮತ್ತು ಪೂರ್ವಿಶಾ ಎಸ್.ರಾಮ್ ಶುಭಾರಂಭ ಮಾಡಿದರು.

ಆರಂಭಿಕ ಸುತ್ತಿನಲ್ಲಿ ಭಾರತದ ಜೋಡಿ 21–10, 21–16ರಲ್ಲಿ ಆಸ್ಟ್ರೇಲಿಯಾದ ಮ್ಯಾಗಿ ಚಾನ್ ಮತ್ತು ಜೊಡೀ ವೆಗಾ ವಿರುದ್ಧ ಗೆದ್ದಿತು.

ಮುಂದಿನ ಸುತ್ತಿನಲ್ಲಿ ಪೂರ್ವಿಶಾ ಮತ್ತು ಮೇಘನಾ ಅವರು ಜಪಾನ್‌ನ ಮಿಕಿ ಕಶಿಹರಾ ಮತ್ತು ಮಿಯುಕಿ ಕ್ಯಾಟೊ ವಿರುದ್ಧ ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.