ಗುರುವಾರ , ಫೆಬ್ರವರಿ 25, 2021
23 °C

ಚಿದಂಬರಂ ಕುಟುಂಬಕ್ಕೆ ಸಂಕಷ್ಟ

ಪಿಟಿಐ Updated:

ಅಕ್ಷರ ಗಾತ್ರ : | |

ಚಿದಂಬರಂ ಕುಟುಂಬಕ್ಕೆ ಸಂಕಷ್ಟ

ಚೆನ್ನೈ: ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಕುಟುಂಬ ಸದಸ್ಯರ ವಿರುದ್ಧ ಕಪ್ಪುಹಣ ನಿಗ್ರಹ ಕಾಯ್ದೆ ಅಡಿ ಆದಾಯ ತೆರಿಗೆ ಇಲಾಖೆ ಶುಕ್ರವಾರ ಚೆನ್ನೈನ ವಿಶೇಷ ನ್ಯಾಯಾಲಯಕ್ಕೆ ನಾಲ್ಕು ಆರೋಪಪಟ್ಟಿ ಸಲ್ಲಿಸಿದೆ.

ಚಿದಂಬರಂ ಪತ್ನಿ ನಳಿನಿ, ಪುತ್ರ ಕಾರ್ತಿ ಮತ್ತು ಸೊಸೆ ಶ್ರೀನಿಧಿ ಅವರು ವಿದೇಶಗಳಲ್ಲಿ ಹೊಂದಿರುವ ಆಸ್ತಿ ಮತ್ತು ಹೂಡಿಕೆ ಮಾಹಿತಿ ಸಲ್ಲಿಸದೆ ಮುಚ್ಚಿಟ್ಟಿದ್ದಾರೆ ಎಂದು ಇಲಾಖೆ ಆರೋಪಿಸಿದೆ. ಕಪ್ಪುಹಣ ನಿಗ್ರಹ ಮತ್ತು 2015ರ ತೆರಿಗೆ ಕಾಯ್ದೆಯ ಸೆಕ್ಷನ್‌ 50ರ ಅಡಿ ಈ ಮೂವರ ವಿರುದ್ಧ ಇಲಾಖೆ ದೂರು ದಾಖಲಿಸಿತ್ತು. ಅಮೆರಿಕದಲ್ಲಿ ₹3.28 ಕೋಟಿ,  ಬ್ರಿಟನ್‌ನ ಕೇಂಬ್ರಿಜ್‌ನಲ್ಲಿ ₹5.37 ಕೋಟಿ ಹಾಗೂ ಅದೇ ದೇಶದಲ್ಲಿ ₹80 ಲಕ್ಷದ ಆಸ್ತಿ ಹೊಂದಿರುವ ಮಾಹಿತಿ ಬಹಿರಂಗಪಡಿಸಿಲ್ಲ ಎಂದು ಆರೋಪಿಸಿದೆ.

ಕಾರ್ತಿ ಸಹ ಒಡೆತನದ ಚೆಸ್‌ ಗ್ಲೋಬಲ್‌ ಅಡ್ವೈಸರಿ ಸಂಸ್ಥೆ ಹಾಗೂ ಚಿದಂಬರಂ ಕುಟುಂಬವು ತನ್ನ ಎಲ್ಲ ಹೂಡಿಕೆಯ ವಿವರಗಳನ್ನು ಮುಚ್ಚಿಟ್ಟಿದೆ. ಇದು ಕಪ್ಪುಹಣ ನಿಗ್ರಹ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.