ತಿಲಕರಿಗೆ ‘ಭಯೋತ್ಪಾದನೆಯ ಪಿತಾಮಹ’ ಪಟ್ಟ!

7

ತಿಲಕರಿಗೆ ‘ಭಯೋತ್ಪಾದನೆಯ ಪಿತಾಮಹ’ ಪಟ್ಟ!

Published:
Updated:

ಜೈಪುರ: ರಾಜಸ್ಥಾನದ 8ನೇ ತರಗತಿಗಾಗಿ ಮುದ್ರಿಸಿರುವ ಪುಸ್ತಕವೊಂದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್‌ ಅವರನ್ನು ‘ಭಯೋತ್ಪಾದನೆಯ ಪಿತಾಮಹ’ ಎಂದು ಸಂಬೋಧಿಸಲಾಗಿದೆ.

ಮಥುರಾ ಮೂಲದ ಸ್ಟುಡೆಂಡ್‌ ಅಡ್ವೈಸರ್‌ ಪಬ್ಲಿಕೇಷನ್‌ ಎಂಬ ಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸಿದ್ದು, ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಈ ಪುಸ್ತಕವನ್ನು ಬಳಸುತ್ತಿವೆ.

‘ಸ್ವಾತಂತ್ರ್ಯ ಹೋರಾಟಕ್ಕೆ ತಿಲಕ್‌ ದಾರಿಯನ್ನು ತೋರಿಸಿಕೊಟ್ಟರು. ಹೀಗಾಗಿ ಅವರನ್ನು ಭಯೋತ್ಪಾದನೆಯ ಪಿತಾಮಹ ಎಂದು ಕರೆಯಲಾಗುತ್ತದೆ’ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಕಾಶನ ಸಂಸ್ಥೆಯ ಅಧಿಕಾರಿ ರಾಜ್‌ಪಾಲ್‌ ಸಿಂಗ್‌, ‘ಇದು ಭಾಷಾಂತರಕಾರರಿಂದ ಆಗಿರುವ ಪ್ರಮಾದ. ಇದು ನಮ್ಮ ಗಮನಕ್ಕೂ ಬಂದಿದ್ದು, ಪರಿಷ್ಕೃತ ಆವೃತ್ತಿಗಳಲ್ಲಿ ಸರಿಪಡಿಸಲಾಗಿದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry