ಮತದಾನದ ಹಕ್ಕು ಚಲಾಯಿಸಲು 2 ಗಂಟೆ ಮಾತ್ರ ಬಾಕಿ; ಮತಗಟ್ಟೆ ಮಾಹಿತಿಗೆ ‘ಚುನಾವಣಾ ಆ್ಯಪ್‌’

7
ಚುನಾವಾಣಾ ಆಯೋಗದ ಮೊಬೈಲ್‌ ಸಂಖ್ಯೆಯೂ ಸಹಕಾರಿ

ಮತದಾನದ ಹಕ್ಕು ಚಲಾಯಿಸಲು 2 ಗಂಟೆ ಮಾತ್ರ ಬಾಕಿ; ಮತಗಟ್ಟೆ ಮಾಹಿತಿಗೆ ‘ಚುನಾವಣಾ ಆ್ಯಪ್‌’

Published:
Updated:
ಮತದಾನದ ಹಕ್ಕು ಚಲಾಯಿಸಲು 2 ಗಂಟೆ ಮಾತ್ರ ಬಾಕಿ; ಮತಗಟ್ಟೆ ಮಾಹಿತಿಗೆ ‘ಚುನಾವಣಾ ಆ್ಯಪ್‌’

ಬೆಂಗಳೂರು: ಗುರುತಿನ ಚೀಟಿ ಇದ್ದರೂ ಮತಗಟ್ಟೆಯ ಸರಿಯಾದ ಮಾಹಿತಿ ಪಡೆಯಲು ಅನೇಕರು ಪರದಾಡುತ್ತಿರುವ ಕುರಿತು ವರದಿಯಾಗಿದೆ. ಮತ ಚಲಾಯಿಸಲು ಇನ್ನು 2 ಗಂಟೆಗಿಂತ ಕಡಿಮೆ ಸಮಯ ಉಳಿದಿದೆ.

ಮತದಾರರ ಗುರುತಿನ ಚೀಟಿ ಸಂಖ್ಯೆ ಬಳಸಿ ಮತಗಟ್ಟೆ ಸಂಖ್ಯೆ, ಕ್ರಮ ಸಂಖ್ಯೆ ಹಾಗೂ ಮತಗಟ್ಟೆ ವಿಳಾಸವನ್ನು ಮೊಬೈಲ್‌ನಲ್ಲಿಯೇ ಪಡೆಯಬಹುದಾದ ವ್ಯವಸ್ಥೆಯನ್ನು ಚುನಾವಣಾ ಆಯೋಗ ಕಲ್ಪಿಸಿದೆ. ‘ಚುನಾವಣಾ ಆ್ಯಪ್‌’ ಹಾಗೂ ಸಂದೇಶದ ಮೂಲಕ ಮಾಹಿತಿ ಪಡೆಯಲು ಆಯೋಗ ನೀಡಿರುವ ಮೊಬೈಲ್‌ ಸಂಖ್ಯೆ ಬಹುತೇಕ ಸರಿಯಾಗಿಯೇ ಕಾರ್ಯನಿರ್ವಹಿಸುತ್ತಿದೆ. ಆದರೆ, ಚುನಾವಣಾ ಆಯೋಗ ಕರ್ನಾಟಕದ ವೆಬ್‌ಸೈಟ್‌ ತೆರೆದುಕೊಳ್ಳುವುದೇ ಅಪರೂಪ.

ವೆಬ್‌ಸೈಟ್‌ ಲಿಂಕ್‌ ಬಳಸಿ ಮತಗಟ್ಟೆ ಮಾಹಿತಿ ಪಡೆಯುವುದು ಕಷ್ಟಸಾಧ್ಯವಾಗಿದೆ. ಚುನಾವಣಾ ಆ್ಯಪ್‌ ಅಥವಾ ಚುನಾವಣಾ ಆಯೋಗದ ಮೊಬೈಲ್‌ ಸಂಖ್ಯೆ ಬಳಸುವುದು ಉತ್ತಮ ಮಾರ್ಗವಾಗಿ ಕಂಡು ಬಂದಿದೆ.

(ಎಸ್‌ಎಂಎಸ್‌ ಮೂಲಕ ಮತಗಟ್ಟೆ ಮಾಹಿತಿ ಪ‍ಡೆಯಲು: 9731979899 ಸಂಖ್ಯೆಗೆ KAEPIC ಟೈಪ್ ಮಾಡಿ ಒಂದು Space ಕೊಟ್ಟು ನಿಮ್ಮ Voter ID ಸಂಖ್ಯೆ ಟೈಪ್ ಮಾಡಿ SMS ಕಳಿಸಿ. (ಉದಾ: KAEPIC RSB1220805 )- ಕೆಲ ಕ್ಷಣಗಳಲ್ಲಿ ನಿಮ್ಮ ವಾರ್ಡ್, ಬೂತ್, ಕ್ರಮ ಸಂಖ್ಯೆಯ ಪೂರ್ಣಮಾಹಿತಿ SMS ಮೂಲಕ ಬರುತ್ತದೆ)

ಇನ್ನೂ ಬೆಂಗಳೂರಿನ ಮತದಾರರು ತಮ್ಮ ಕ್ಷೇತ್ರಗಳ ಅಭ್ಯರ್ಥಿಗಳ ಮಾಹಿತಿಯನ್ನು ಓಪನ್‌ ಸಿಟಿ ಜಾಲತಾಣದ ಲಿಂಕ್‌ನಲ್ಲಿ ಪಡೆಯಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry