ಯಾವುದು ಸಿಹಿ?

7

ಯಾವುದು ಸಿಹಿ?

Published:
Updated:
ಯಾವುದು ಸಿಹಿ?

ಸಿಹಿ ಸಿಹಿ ಸಿಹಿ
ಯಾವುದು ಸಿಹಿ? 
ಅಜ್ಜಿ ಮಾಡಿದ ಒಬ್ಬಟ್ಟು
ಬಲು ಬಲು ಸಿಹಿ! 

ಸಿಹಿ ಸಿಹಿ ಸಿಹಿ  
ಒಬ್ಬಟ್ಟಿಗಿಂತ,
ಯಾವುದು ಸಿಹಿ? |

ಸಿಹಿ ಸಿಹಿ ಸಿಹಿ
ನಮ್ಮೂರ ಜಾತ್ರೆಯಲ್ಲಿ 
ನಮ್ಮಜ್ಜ ಕೊಡಿಸಿದ 
ಸಕ್ಕರೆ ಕಡ್ಡಿ ಬಲು ಬಲು ಸಿಹಿ! 

ಸಿಹಿ ಸಿಹಿ ಸಿಹಿ
ಸಕ್ಕರೆ ಕಡ್ಡಿಗಿಂತ
ಯಾವುದು ಸಿಹಿ?

ಸಿಹಿ ಸಿಹಿ ಸಿಹಿ
ತರಗತಿಯಲ್ಲಿ ಮೊದಲಿಗಳಾದಾಗ
ನಮ್ಮಪ್ಪ ಕೊಡಿಸಿದ ಚಾಕೊಲೇಟ್
ಬಲು ಬಲು ಸಿಹಿ!

ಸಿಹಿ ಸಿಹಿ ಸಿಹಿ
ಚಾಕೊಲೇಟ್‌ಗಿಂತ
ಯಾವುದು ಸಿಹಿ?

ಸಿಹಿ ಸಿಹಿ ಸಿಹಿ
ಪ್ರೀತಿಯಿಂದ,
ಲೊಚಲೊಚ ಅಂತ
ನಮ್ಮಮ್ಮ ಕೊಡುವ ಮುತ್ತು
ಎಲ್ಲಕ್ಕಿಂತ ಸಿಹಿ!!!

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry